ಅ.19ರಂದು ಶ್ರೀ ಮಲೈ ಮಹದೇಶ್ವರಸ್ವಾಮಿ ನೂತನ ದೇವಾಲಯ ಉದ್ಘಾಟನೆ
ಮೈಸೂರು

ಅ.19ರಂದು ಶ್ರೀ ಮಲೈ ಮಹದೇಶ್ವರಸ್ವಾಮಿ ನೂತನ ದೇವಾಲಯ ಉದ್ಘಾಟನೆ

October 16, 2020

ಮೈಸೂರು, ಅ.15(ಪಿಎಂ)- ಮೈಸೂರಿನ ಮಾನಂದವಾಡಿ ರಸ್ತೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಲೈ ಮಹದೇಶ್ವರ ಸ್ವಾಮಿ ದೇವಾಲಯವು ಅ.19ರ ಸಂಜೆ 5ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ದೇವಾಲಯದ ನಿರ್ಮಾತೃ ಆರ್.ರಂಗಸ್ವಾಮಿ ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ಶ್ರೀ ಯೋಗನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಶ್ರೀ ಭಾಷ್ಯಂ ಸ್ವಾಮೀಜಿ, ಶಾಸಕ ಎಸ್.ಎ.ರಾಮದಾಸ್ ದೇವಾಲಯವನ್ನು ಉದ್ಘಾಟಿಸುವರು. ಶಿವನ ಸನ್ನಿಧಿಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ತಹಸಿಲ್ದಾರ್ ಕೆ.ಆರ್.ರಕ್ಷಿತ್, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮಾಜಿ ಮೇಯರ್ ಪುರುಷೋತ್ತಮ್, ಅಶೋಕಪುರಂ ಮುಖಂಡ ರಾಮಸ್ವಾಮಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದೇವಾಲಯ ನಿರ್ಮಾಣಕ್ಕಾಗಿ ನನ್ನ ಪತ್ನಿ ಎಂ.ಮಾದಮ್ಮ ಬಹಳಷ್ಟು ಕಾರ್ಯಗಳನ್ನು ನಿರ್ವಹಿಸಿದರು. ಅವರು ತಾವು ಸಂಪಾದಿಸಿ ಉಳಿಸಿದ ಹಣದಲ್ಲಿ ದೇವಾಲಯ ನಿರ್ಮಿಸಿದ್ದಾರೆ. ಆದರೆ ಈಗವರು ಕಾಲವಾಗಿದ್ದಾರೆ ಎಂದು ಸ್ಮರಿಸಿದರು. ಮುಖಂಡರಾದ ಹೆಚ್.ಜಿ.ಗುರುಪ್ರಸಾದ್, ಸುಧಾಮಣಿ, ನಾಗರಾಜು ಗೋಷ್ಠಿಯಲ್ಲಿದ್ದರು.

 

 

Translate »