ಸಂವಿಧಾನದ ಸವಲತ್ತುಗಳು ವಂಚಿತರಿಗೆ ಸಿಗುತ್ತಿಲ್ಲ: ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಿಷಾದ
ಮೈಸೂರು

ಸಂವಿಧಾನದ ಸವಲತ್ತುಗಳು ವಂಚಿತರಿಗೆ ಸಿಗುತ್ತಿಲ್ಲ: ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಿಷಾದ

October 16, 2020

ಮೈಸೂರು, ಅ.15(ಆರ್‍ಕೆಬಿ)- ಸಂವಿಧಾನದ ಸವಲತ್ತು ಗಳು ಮೂಲ ಸೌಕರ್ಯ ವಂಚಿತರಿಗೆ ಸಿಗುತ್ತಿಲ್ಲ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದಿಸಿದರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ ಹಾಗೂ ಬುಡಕಟ್ಟು ಮೂಲನಿವಾಸಿಗಳ ಪುನಶ್ಚೇತನ ಸಮಿತಿ ಗುರುವಾರ ಆಯೋಜಿಸಿದ್ದ `ಬುಡಕಟ್ಟು ಮೂಲ ನಿವಾಸಿಗಳ ಬದುಕು-ಬವಣೆ ಕುರಿತ ವಿಚಾರ ಮಂಥನ’ಕ್ಕೆ ಕೆಎಸ್‍ಆರ್ ಅವರು ಬಿರ್ಸಾಮುಂಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬುಡಕಟ್ಟು ಹಾಗೂ ಶೋಷಿತ ಸಮುದಾಯಗಳ ಪರಿಸ್ಥಿತಿ ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯಗಳ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ. ಆದರೆ ಸಂವಿಧಾನ ಜಾರಿಗೆ ಬಂದು ಏಳು ದಶಕ ಕಳೆ ದರೂ ಬುಡಕಟ್ಟು ಜನರಿಗೆ ಮೂಲಸೌಕರ್ಯ ದೊರೆ ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಮೀಸಲಾತಿ ಸೌಲಭ್ಯ ಪಡೆದ ಕೆಲವರು ಇತ್ತೀಚಿನ ದಿನಗಳಲ್ಲಿ ಐಷಾ ರಾಮಿ ಜೀವನ ನಡೆಸುತ್ತಿದ್ದಾರೆ ಎಂದೂ ನುಡಿದರು.

ವಿಚಾರ ಮಂಥನವನ್ನು ಶ್ಲಾಘಿಸಿದ ಅವರು, ಇಲ್ಲಿನ ಚರ್ಚೆಗಳನ್ನು ಆಧರಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಬುಡಕಟ್ಟು ಸಮುದಾಯಕ್ಕೆ ಹೊಸ ಜೀವನ ಕಲ್ಪಿಸುವ ಹಾಗೂ ಸಂವಿಧಾನದ ಪ್ರಕಾರ ಸಿಗಬೇಕಾದ ಸವಲತ್ತುಗಳು ದೊರೆಯಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಲಹೆ ನೀಡಿದರು.

ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಪೆÇಲೀಸ್ ಅಧೀಕ್ಷಕಿ ಬಿ.ಟಿ.ಕವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕ್ಷೀರಸಾಗರ, ಪತ್ರಕರ್ತ ಕೆ.ದೀಪಕ್ ವಿಚಾರ ಮಂಡಿಸಿದರು.

ಬುಡಕಟ್ಟು ಮೂಲನಿವಾಸಿಗಳ ಪುನಶ್ಚೇ ತನ ಸಮಿತಿಯ ಜಾಕೀರ್ ಹುಸೇನ್, ಸಮಾಜ ಸೇವಕ ಕೆ.ರಘುರಾಂ, ಕಸಾಪ ಜಿಲ್ಲಾ ಘಟಕÀ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮಡ್ಡೀಕೆರೆ ಗೋಪಾಲ್, ಬಸಪ್ಪ ಲಿಂಗಾಪುರ, ಎಸ್.ದಿವಾಕರ್, ಸಮಾಜ ಜಾಗೃತಿ ವೇದಿಕೆ ಅಧ್ಯಕ್ಷ ಹೆಚ್.ಬೀರಪ್ಪ, `ಆಪ್’ನ ಮಾಳವಿಕ ಗುಬ್ಬಿವಾಣಿ, ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಇನ್ನಿತರರಿದ್ದರು.

Translate »