ಆಸ್ತಿ ತೆರಿಗೆ ವಸೂಲಿ ಸಪ್ತಾಹಕ್ಕೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ಆಸ್ತಿ ತೆರಿಗೆ ವಸೂಲಿ ಸಪ್ತಾಹಕ್ಕೆ ಶಾಸಕ ನಾಗೇಂದ್ರ ಚಾಲನೆ

October 16, 2020

ಮೈಸೂರು, ಅ.15(ಆರ್‍ಕೆಬಿ)- ನಗರದ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲವಾಗಿ ರುವ ಆಸ್ತಿ ತೆರಿಗೆ ಸಂಗ್ರಹಣೆಗೆ ನೂತನ ವಿಧಾನ ಕಂಡು ಕೊಂಡಿರುವ ಮೈಸೂರು ಮಹಾನಗರ ಪಾಲಿಕೆಯು ಈಗ `ಪಾಲಿಕೆ ನಡೆ-ಜನತೆ ಕಡೆ’ ಅಭಿಯಾನ ಕೈಗೊಂ ಡಿದೆ. ಇದೇ ನಿಟ್ಟಿನಲ್ಲಿ ಗುರುವಾರ ಚಾಮ ರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-3ರ ವ್ಯಾಪ್ತಿಯ 42ನೇ ವಾರ್ಡ್‍ನ ಕನ್ನೇಗೌಡನ ಕೊಪ್ಪಲಿನಲ್ಲಿ `ಪಾಲಿಕೆ ನಡೆ-ಕೆ.ಜಿ.ಕೊಪ್ಪಲು ಕಡೆ’ ಆರಂಭಿಸಿದೆ.

ಆನ್‍ಲೈನ್ ಮೂಲಕ ಕಂದಾಯ ಪಾವ ತಿಸಿಕೊಳ್ಳಲು ಕೆ.ಜಿ.ಕೊಪ್ಪಲಿನ ಚಾಮುಂ ಡೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಆಸ್ತಿ ತೆರಿಗೆ ವಸೂಲಿ ಸಪ್ತಾಹ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಈ ವ್ಯಾಪ್ತಿಯಲ್ಲಿ 3,275 ಆಸ್ತಿಗಳಿವೆ. 2020-21ನೇ ಸಾಲಿಗೆ 1616 ಆಸ್ತಿಗಳಿಂದ ಒಟ್ಟು 1,79,63,708 ರೂ. ಕಂದಾಯ ವಸೂಲಾತಿ ಆಗಿದ್ದು, ಬಾಕಿ ಇರುವ 1659 ಆಸ್ತಿಗಳಿಂದ 2.56 ಕೋಟಿ ರೂ. ವಸೂಲಿ ಆಗಬೇಕಾಗಿದೆ ಎಂದರು.

ಆಸ್ತಿ ತೆರಿಗೆ ಬಾಕಿಯಾಗಿರುವುದರಿಂದ ನಗರದ ಅಭಿವೃದ್ಧಿ ಹಾಗೂ ಸ್ವಚ್ಛ ಭಾರತ್ ಯೋಜನೆಯ ಕಾಮಗಾರಿಗಳನ್ನು ಕೈಗೊ ಳ್ಳಲು ಕಷ್ಟವಾಗಿದೆ. ಆಸ್ತಿ ತೆರಿಗೆ ಹಣದ ಲ್ಲಿಯೇ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಪಾಲಿಕೆಯಿಂದ ನೇರವಾಗಿ ವೇತನ ಪಾವ ತಿಸಬೇಕಿದೆ. ಹೀಗಾಗಿ ಆಸ್ತಿ ಮಾಲೀಕರಿಗೆ ಕಂದಾಯ ಪಾವತಿಸಲು ಅನುಕೂಲವಾಗು ವಂತೆ ಮುಂದಿನ 3 ತಿಂಗಳು 2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರಗಳಂದು (ಹಬ್ಬದ ದಿನ ಹೊರತುಪಡಿಸಿ) ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ವ್ಯವಸ್ಥೆ ಮಾಡ ಲಾಗಿದೆ. ಇದನ್ನು ವಲಯ ಕಚೇರಿ-3ರಲ್ಲಿ ಪ್ರಾರಂಭಿಸಲಾಗಿದೆ. ಅಗತ್ಯ ಬ್ಯಾಂಕ್ ಸಿಬ್ಬಂದಿ ಮತ್ತು ನಗರ ಪಾಲಿಕೆ ಕಂದಾಯ ಪರಿ ಶೀಲಕರು ರಜೆ ದಿನಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಾರೆ. ಸಾರ್ವಜನಿಕರು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಪಾಲಿಕೆ ಕಚೇರಿಗೇ ಬಂದು ಆಸ್ತಿ ತೆರಿಗೆ ಪಾವತಿಸಲು ಕಷ್ಟವಾಗಿದೆ. ಹಾಗಾಗಿಯೇ ಇದೇ ಮೊದಲ ಬಾರಿಗೆ `ಪಾಲಿಕೆ ನಡೆ-ಕೆ.ಜಿ.ಕೊಪ್ಪಲು ಕಡೆ’ ಅಭಿ ಯಾನ ಆರಂಭಿಸಲಾಗಿದೆ. ಸಾರ್ವಜನಿ ಕರು ಆಸ್ತಿ ತೆರಿಗೆ ಪಾವತಿಸಿ ಸಹಕರಿಸ ಬೇಕು. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಚಾಮರಾಜಪುರಂ ರೈಲ್ವೆ ನಿಲ್ದಾಣದ ಬಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಸ್ತಿ ಮಾಲೀಕರು ತೆರಿಗೆ ಪಾವತಿಸಬಹುದು. ಖಾತೆ ವರ್ಗಾವಣೆಗೆ ಅರ್ಜಿ ವಿತರಿಸುವ ಹಾಗೂ ಸೂಕ್ತ ದಾಖಲೆ ಸಲ್ಲಿಸುವ ಮೂಲ ಕವೂ ಆಸ್ತಿಗಳ ಮಾಲೀಕರಿಗೆ ಕಂದಾಯ ಪಾವತಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು. ಪಾಲಿಕೆ ಸದಸ್ಯ ಶಿವಕುಮಾರ್, ಮಾಜಿ ಮೇಯರ್ ಆರ್.ಲಿಂಗಪ್ಪ, ವಲಯ ಆಯುಕ್ತ ಸತ್ಯಮೂರ್ತಿ ಇನ್ನಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

 

 

Translate »