ಅಬಕಾರಿ ಆದಾಯಕ್ಕೆ ಹೊಸ ಮಾರ್ಗ ಇನ್ನು ಕಡಿಮೆ ದರದಲ್ಲಿ ದುಬಾರಿ ಮದ್ಯದ ಮತ್ತು!
ಮೈಸೂರು

ಅಬಕಾರಿ ಆದಾಯಕ್ಕೆ ಹೊಸ ಮಾರ್ಗ ಇನ್ನು ಕಡಿಮೆ ದರದಲ್ಲಿ ದುಬಾರಿ ಮದ್ಯದ ಮತ್ತು!

May 12, 2022

ಬೆಂಗಳೂರು, ಮೇ ೧೧ (ಕೆಎಂಶಿ)- ಸರಕಾರದ ಆದಾಯ ಹೆಚ್ಚಿಸಲು ದುಬಾರಿ ಮದ್ಯದ ಬೆಲೆಯನ್ನು ಶೇ.೪೦ರಿಂದ ೫೦ರಷ್ಟು ಕಡಿಮೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಸರಕಾರದ ಈ ನಿರ್ಧಾರದಿಂದ ಅಬ ಕಾರಿಯಿಂದಲೇ ವಾರ್ಷಿಕ ೫೦೦೦ ಕೋಟಿ ರೂ. ಹೆಚ್ಚುವರಿ ಆದಾಯ ಬೊಕ್ಕಸಕ್ಕೆ ಬರಲಿದೆ.ಕಡಿಮೆ ಹಾಗೂ ಮಧ್ಯಮ ದರ್ಜೆಯ ಮದ್ಯದ ಬೆಲೆ ಯಥಾಸ್ಥಿತಿ ಮುಂದುವರಿಸಲು ಸರಕಾರ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರವನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸುದ್ದಿಗಾರರಿಗೆ ತಿಳಿಸಿದರು. ನೆರೆಯ ಮಹಾರಾಷ್ಟç, ತೆಲಂಗಾಣ ಮತ್ತು ದೆಹಲಿ ಸೇರಿ ೪ ರಾಜ್ಯಗಳಲ್ಲಿ ಇಂಥ ನಿರ್ಧಾರ ಕೈಗೊಂಡಿದ್ದರಿAದ ಅಲ್ಲಿನ ಸರಕಾರಗಳಿಗೆ ವಾರ್ಷಿಕ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನಮ್ಮಲ್ಲಿನ ಅಬಕಾರಿ ನೀತಿಯಿಂದ ಆದಾಯದ ಕೊರತೆ ಕುಂಠಿತವಾಗಿದ್ದು, ಇದನ್ನು ಸರಿದೂಗಿ ಸಲು ನಾನೂ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ, ಈ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬೆಲೆ ಇಳಿಕೆ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮಲ್ಲಿ ಕಡಿಮೆ ಮತ್ತು ಮಧ್ಯಮ ದರ್ಜೆಯ ಮದ್ಯ ದೊಡ್ಡ ಪ್ರಮಾಣದಲ್ಲಿ ಮಾರಾಟ ವಾಗುತ್ತಿದೆ. ಇದರಿಂದಲೇ ನಾವು ಪೂರ್ಣ ಆದಾಯ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ದುಬಾರಿ ಬೆಲೆಯ ಮದ್ಯ ಸೇವಿಸುವವರು ಹಣ ಜಾಸ್ತಿ ಎಂದು ಅದರ ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಇಂಥ ವರ್ಗವನ್ನು ಮತ್ತೆ ಯಥಾಸ್ಥಿತಿಗೆ ತಂದು ಸರಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರಲು ಮುಂದಾಗಿದ್ದೇವೆ ಎಂದರು. ದುಬಾರಿ ಬೆಲೆಯ ವಿಸ್ಕಿ, ವೈನ್ ಸೇರಿ ವಿವಿಧ ಮದ್ಯದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಿ ಮುಂದಿನ ಒಂದೆರಡು ತಿಂಗಳಿನಲ್ಲಿ ದರ ಕಡಿಮೆ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಕರ್ನಾಟಕವನ್ನು ಮಾದರಿಯಾಗಿ ಇಟ್ಟುಕೊಂಡು ಪಶ್ಚಿಮ ಬಂಗಾಳ ಸರಕಾರ ಮದ್ಯದ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಅದರ ಅಬಕಾರಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸತತ ಕಳೆದ ಕೆಲ ವರ್ಷಗಳಿಂದ ಅಬಕಾರಿ ಮೇಲೆ ತೆರಿಗೆ ವಿಧಿಸಿದ್ದರಿಂದ ಮದ್ಯದ ಬೆಲೆ ದುಬಾರಿಯಾಗಿದೆ. ನಾವು ಇದನ್ನು ಮನಗಂಡೇ ಕಳೆದ ಮುಂಗಡ ಪತ್ರದಲ್ಲಿ ಬೆಲೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಿಲ್ಲ.

Translate »