ಖಾಸಗಿ ವ್ಯಕ್ತಿಗೆ ಸ್ವಾಧೀನವಾಗಿದ್ದ ೨.೨೮ ಎಕರೆ ಭೂಮಿಯ ಖಾತೆ ವರ್ಗಾವಣೆ: ಸಹಕರಿಸಿದ ಮುಡಾ ಅಧಿಕಾರಿಗಳು
ಮೈಸೂರು

ಖಾಸಗಿ ವ್ಯಕ್ತಿಗೆ ಸ್ವಾಧೀನವಾಗಿದ್ದ ೨.೨೮ ಎಕರೆ ಭೂಮಿಯ ಖಾತೆ ವರ್ಗಾವಣೆ: ಸಹಕರಿಸಿದ ಮುಡಾ ಅಧಿಕಾರಿಗಳು

May 12, 2022

ಎಸ್.ಟಿ.ರವಿಕುಮಾರ್
ಮೈಸೂರು, ಮೇ ೧೧-ಹೊಕ್ಕಿದಷ್ಟೂ ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬ್ರಹ್ಮಾಂಡ ಭ್ರಷ್ಟಾ ಚಾರದ ದರ್ಶನವಾಗುತ್ತಿದೆ. ಮುಡಾ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಮೂಲಕ ಸರ್ಕಾರಕ್ಕೆ ಮಹಾ ದ್ರೋಹವೆಸಗಿರುವುದು ಬಯ ಲಾಗುತ್ತಿದೆ. ಈ ಹಿಂದೆ ವಸತಿ ಬಡಾವಣೆಗಳಿಗಾಗಿ ಅಧಿಸೂ ಚನೆ ಹೊರಡಿಸಿ, ಅವಾರ್ಡ್ ರಚಿಸಿ ಸ್ವಾಧೀನಪಡಿಸಿಕೊಂಡ ಬೆಲೆಬಾಳುವ ಭೂಮಿಯನ್ನು ಡಿ-ನೋಟಿಫೈ ಮಾಡ ಲಾಗಿದೆ ಎಂದು ದಾಖಲೆ ಸೃಷ್ಟಿಸುವ ಮೂಲಕ ಭಾರೀ ಅಕ್ರಮ ನಡೆಸಿರುವ ಪ್ರಕ ರಣಗಳು ಒಂದೊAದಾಗಿ ಬಯಲಾಗುತ್ತಿವೆ.

ಇದೀಗ ವಿಜಯನಗರ ೩ನೇ ಹಂತ ಬಡಾವಣೆ ಗೆಂದು ಅಧಿಸೂಚನೆ ಹೊರಡಿಸಿದ್ದ ಹಿನಕಲ್ ಗ್ರಾಮದ ಸರ್ವೆ ನಂ. ೨೯೨/೩ರಲ್ಲಿ ೩೦ ಗುಂಟೆ ಹಾಗೂ ೨೯೩ರಲ್ಲಿ ೧.೩೮ ಎಕರೆ ಸೇರಿ ಒಟ್ಟು ೨.೨೮ ಎಕರೆ ಭೂಮಿ (ಬಸವ ರಾಜ ಸರ್ಕಲ್ ಬಳಿ)ಯನ್ನು ಮುಡಾ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಭೂ ಸ್ವಾಧೀನವಾಗಿಲ್ಲ ಎಂದು ತಪ್ಪು ಮಾಹಿತಿಯೊಂದಿಗೆ ಎನ್‌ಓಸಿ ನೀಡುವ ಮೂಲಕ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ವರ್ಗಾವಣೆ ಮಾಡಲು ಸಹಕರಿಸಿರುವುದು ಬಯಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕ್ರಮಕ್ಕೆ ಮುಂದಾದ ಮುಡಾ ಹಿಂದಿನ ಆಯುಕ್ತ ಡಾ. ಡಿ.ಬಿ. ನಟೇಶ ಅವರು, ೨೦೨೨ರ ಏ. ೨೯ರಂದು ಜ್ಞಾಪನ ಪತ್ರ ಹೊರಡಿಸಿದ್ದು, ಮೈಸೂರು ತಹಸೀಲ್ದಾರ್‌ಗೆ ಪತ್ರ ಬರೆದು ಆರ್‌ಟಿಸಿಯ ೯ನೇ ಕಲಂನಲ್ಲಿ ನಮೂದಾಗಿರುವುದನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಿ ಮುಡಾ ಹೆಸರಿಗೆ ಇಂಡೀ ಕರಿಸು ವಂತೆ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಈ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿನಂತಿ ಪತ್ರ ಬರೆಯುವಂತೆಯೂ ಸೂಚಿಸಿರುವ ಡಾ.ನಟೇಶ್, ಕೂಡಲೇ ಸಂಬAಧಪಟ್ಟ ಭೂಸ್ವಾಧೀನದ ಕಡತದೊಂದಿಗೆ ಪೊಲೀಸ್ ರಕ್ಷಣೆ ಪಡೆದು ಜಾಗದಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ ಆಸ್ತಿಯನ್ನು ಮುಡಾ ವಶಕ್ಕೆ ಪಡೆಯುವಂತೆಯೂ ಆದೇಶಿಸಿದ್ದಾರೆ. ಹಿನಕಲ್ ಗ್ರಾಮದ ಸರ್ವೆ ನಂ.೨೯೨/೩ರಲ್ಲಿ ೧.೯ ಎಕರೆ ಮತ್ತು ೨೯೩ ರಲ್ಲಿ ೧.೩೮ ಎಕರೆ ಭೂಮಿಗೆ ಸಂಬAಧಿಸಿದAತೆ ೧೯೮೧ರ ಜೂನ್ ೨೫ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ನಂತರ ೧೯೮೪ರ ಮಾರ್ಚ್ ೩೧ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ ಸರ್ವೆ ನಂ.೨೯೩ರ ೧.೩೮ ಎಕರೆ ಭೂಮಿಯು ಯುಎಲ್‌ಎ ಹೆಚ್ಚುವರಿ ನಗರಾಸ್ತಿ ಎಂದು ಘೋಷಿಸಿ ೧೯೮೫ರ ಸೆಪ್ಟೆಂಬರ್ ೨೫ರಂದು ಅಂದಿನ ಡಿಸಿ ಆದೇಶಿಸಿದ್ದರು.

ಸದರಿ ಭೂಸ್ವಾಧೀನ ನಡಾವಳಿ ಪ್ರಶ್ನಿಸಿದ ಭೂ ಮಾಲೀಕರು ಸಲ್ಲಿಸಿದ್ದ ರಿಟ್ ಪಿಟೀಷನ್ ಅನ್ನು ರಾಜ್ಯ ಉಚ್ಛ ನ್ಯಾಯಾಲಯವು ೨೦೦೯ರ ಜನವರಿ ೭ರಂದು ವಜಾಗೊಳಿಸಿದೆ. ನಂತರ ಸದರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸು ವಂತೆ ೨೦೧೧ರ ಮಾರ್ಚ್ ೨೩ರಂದು ಆಯುಕ್ತರು ಆದೇಶಿಸಿದ್ದರಾದರೂ, ಮುಡಾ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಿನಕಲ್ ಸರ್ವೆ ನಂ.೨೯೨/೩ರಲ್ಲಿ ೩೦ ಗಂಟೆ, ೨೯೩ರಲ್ಲಿ ೧.೩೮ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಲ್ಲ ಎಂದು ನಿರಾಕ್ಷೇಪಣಾ ಪತ್ರ ನೀಡಿರು ವುದು ದಾಖಲೆಗಳಿಂದ ದೃಢಪಟ್ಟಿದೆ ಎಂದು ಆಯುಕ್ತರು ತಮ್ಮ ಜ್ಞಾಪನದಲ್ಲಿ ತಿಳಿಸಿದ್ದಾರೆ.

ಅದರಿಂದಾಗಿ ಎಂಆರ್-೬೩/೨೦೦೬-೦೭ರAತೆ ಪ್ರಾಧಿಕಾರದ ಹೆಸರಿಗೆ ಇಂಡೀ ಕರಣವಾಗಿದ್ದು, ನಮೂದುಗಳನ್ನು ಎಸಿ ಕೋರ್ಟ್ ಆದೇಶದಂತೆ ೨೦೧೯ರ ಸೆಪ್ಟೆಂ ಬರ್ ೨೩ರಂದು ಭೂ ಮಾಲೀಕರಾದ ಬಸವಯ್ಯ ಮತ್ತು ಬಸವರಾಜು ಮತ್ತಿತರರ ಹೆಸರಿಗೆ ಜಂಟಿಯಾಗಿ ಖಾತೆ ವರ್ಗಾ ಯಿಸಲಾಗಿದೆ. ಭೂ ಸ್ವಾಧೀನ ನಡಾವಳಿಯಂತೆ ಭೂ ಪರಿಹಾರ ಹಣ ಪಡೆಯಲು ಮಾಲೀಕರಿಗೆ ಅವಕಾಶವಿದೆಯೇ ಹೊರತು, ಸ್ವತ್ತನ್ನು ಅಧಿಸೂಚನೆಯಿಂದ ಕೈಬಿಟ್ಟಿಲ್ಲ ಎಂಬುದು ಸ್ಪಷ್ಟವಾಗಿದ್ದಾಗ್ಯೂ ಸದರಿ ಭೂಮಿ ಸಂಬAಧ ಗೊಂದಲ ಸೃಷ್ಟಿಸಿ, ಅಧಿಸೂಚಿತ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ವರ್ಗಾವಣೆ ಮಾಡಿ ಅಕ್ರಮವೆಸಗಿರುವುದು ದೃಢಪಟ್ಟಿರುವುದರಿಂದ ತಕ್ಷಣವೇ ಕ್ರಮ ಕೈಗೊಂಡು ಮುಡಾ ವಶಕ್ಕೆ ಪಡೆಯಬೇಕೆಂದು ಆಯುಕ್ತರು ಆದೇಶಿಸಿದ್ದಾರೆ. ಅಲ್ಲದೇ ಮೇ ೨ರಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ಸದರಿ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಭೂಮಿಯನ್ನು ವಶಕ್ಕೆ ಪಡೆಯಬೇಕೆಂದು ಆಜ್ಞಾಪನ ವಾಗಿದ್ದರೂ, ಅಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದ ಕಾರಣ ಅದು ಸಾಕಾರ ಗೊಳ್ಳಲಿಲ್ಲ ಎಂಬುದಾಗಿ ಮುಡಾ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದೀಗ ಆಯುಕ್ತರಾಗಿದ್ದ ಡಾ. ನಟೇಶ್ ವರ್ಗಾವಣೆಗೊಂಡಿರುವುದರಿAದ ಈ ವಿಷಯವನ್ನೇ ಮರೆತಿರುವ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಆಸ್ತಿ ಕಬಳಿಸಲು ಅನುಕೂಲವಾಗುವಂತೆ ದಾಖಲೆಗಳನ್ನು ಮತ್ತೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Translate »