ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಸೂಚನೆ
ಮೈಸೂರು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಸೂಚನೆ

May 11, 2022
  • ಮಧ್ಯಪ್ರದೇಶ, ಮಹಾರಾಷ್ಟçಕ್ಕೆ ಸಂಬAಧಿಸಿದ ಅರ್ಜಿಗಳ ವಿಚಾರಣೆ ನಂತರ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಹತ್ವದ ತೀರ್ಪು
  • ೩ ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗದ ಕಾರಣ ಚುನಾವಣೆ ನೆನೆಗುದಿಗೆ

ಬೆಂಗಳೂರು, ಮೇ ೧೦- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬAಧಿಸಿದAತೆ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವಂತೆ ಸುಪ್ರೀಂಕೋರ್ಟ್ ಮಂಗಳ ವಾರ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ಮೂರು ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಟಿಯಾಗಲು ಬಿಡದೇ ಚುನಾ ವಣೆ ನಡೆಸುವುದು ರಾಜ್ಯಗಳ ಸಾಂವಿಧಾನಿಕ ಹೊಣೆ ಗಾರಿಕೆಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸುರೇಶ್ ಮಹಾಜನ್ ವರ್ಸಸ್ ಮಧ್ಯಪ್ರದೇಶ ಸರ್ಕಾರದ ನಡುವಿನ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಎಎಂ ಖಾನ್‌ವಿಲ್ಕರ್, ಎಎಸ್ ಒಕಾ, ಸಿ.ಟಿ.ರವಿಕುಮಾರ್
ಅವರಿದ್ದ ಸುಪ್ರೀಂನ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಯಾವುದೇ ವಿಳಂಬ ವಿಲ್ಲದೇ ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಈಗ ಇರುವ ವಾರ್ಡ್ಗಳ ಸಂಖ್ಯೆ ಆಧರಿಸಿಯೇ ಚುನಾವಣೆ ನಡೆಸಿ. ಎರಡು ವಾರದಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಿ ಎಂದು ಮಧ್ಯಪ್ರದೇಶ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಅದಲ್ಲದೇ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಮತ್ತೊಂದು ಅಂಶವನ್ನು ಸ್ಪಷ್ಟಡಿಸಿದ್ದು, ಈ ಆದೇಶ ಕೇವಲ ಮಧ್ಯಪ್ರದೇಶಕ್ಕೆ ಮತ್ತು ಮಹಾರಾಷ್ಟçಕ್ಕೆ ಮಾತ್ರ ಸೀಮಿತವಲ್ಲ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಅಲ್ಲಿನ ಚುನಾವಣಾ ಆಯೋಗಗಳು ಯಾವುದೇ ವಿಳಂಬವಿಲ್ಲದೇ ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.

ಶೀಘ್ರದಲ್ಲಿಯೇ ಬಿಬಿಎಂಪಿ ಚುನಾವಣೆ!:ವಾರ್ಡ್ ವಿಂಗಡಣೆ ಸೇರಿ ಹಲವು ಕಾರಣಗಳಿಂದ ಭಾಗಶಃ ಎರಡು ವರ್ಷ ವಿಳಂಬವಾಗಿದ್ದ ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಸಿದ್ಧತೆ ನಡೆಸಬೇಕಿದೆ. ಈ ಹಿಂದಿನ ಜನಪ್ರತಿನಿಧಿ ಗಳ ಆಡಳಿತ ಅವಧಿ ಸೆಪ್ಟೆಂಬರ್ ೨೦೨೦ರಲ್ಲಿಯೇ ಅಂತ್ಯವಾಗಿತ್ತು. ಆದರೆ, ಕೊರೊನಾ ಕಾಟ, ವಾರ್ಡ್ ವಿಂಗಡಣೆ ವಿಚಾರವಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು.

ರಾಜ್ಯ ಸರ್ಕಾರ ೨೪೩ ವಾರ್ಡ್ಗಳಿಗೆ ಚುನಾವಣೆ ನಡೆಸಲು ಚಿಂತಿಸುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಸದ್ಯ ಇರುವ ೧೯೮ ವಾರ್ಡ್ಗಳಿಗೆ ಚುನಾವಣಾ ಆಯೋಗ ಶೀಘ್ರ ಚುನಾವಣೆ ನಡೆಸುವ ಸಾಧ್ಯತೆ ಇದೆ.ಚುನಾವಣೆಗೆ ನಾವ್ ರೆಡಿ: ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಸಂಬAಧ ಪ್ರತ್ಯೇಕ ಪ್ರಕರಣವಿತ್ತು. ಲೀಸ್ಟ್ ಆಗಲು ೩ ತಿಂಗಳು ಇತ್ತು. ಆದರೆ, ಮಧ್ಯ ಪ್ರದೇಶಕ್ಕೆ ನೀಡಿದ ಆದೇಶವಾದರೂ ಅದು ಎಲ್ಲ ರಾಜ್ಯಕ್ಕೂ ಅನ್ವಯ ಅಂತ ಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸಿದೆ. ಹೀಗಾಗಿ ೧೯೮ ವಾರ್ಡ್ ಪ್ರಕಾರವೇ ಬಿಬಿಎಂಪಿ ಚುನಾವಣೆ ನಡೆಯಬೇಕಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.

 

ಮೀಸಲಾತಿ ಉದ್ದೇಶ,ಸ್ವರೂಪ ಬೇರೆಯಾಗಿವೆ
ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾತಿ ಸ್ವರೂಪ ಹಾಗೂ ಉದ್ದೇಶವೇ ಬೇರೆ, ಶಿಕ್ಷಣ, ಉದ್ಯೋಗ ದಲ್ಲಿ ನೀಡಿರುವ ಮೀಸಲಾತಿಯೇ ಬೇರೆ ಎಂಬು ದನ್ನು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಈಗಾಗಲೇ ವ್ಯಾಖ್ಯಾನಿಸಿದೆ. ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬAಧಿಸಿ ೩ ಹಂತದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಭವಿಷ್ಯದಲ್ಲಿ ನಡೆಯುವ ಚುನಾವಣೆಗಳಿಗೆ ಮೀಸ ಲಾತಿ ಪರಿಗಣ ಸಬಹುದು. ಆದರೆ, ಸಾಂವಿಧಾನಿಕ ಹೊಣೆಗಾರಿಕೆ ದೃಷ್ಟಿಯಿಂದ ನೋಡಿದಾಗ, ಚುನಾ ವಣೆಗಳು ನಡೆಯಲೇಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನ್ಯಾಯಪೀಠ ಹೇಳಿದೆ.

ಮೀಸಲಾತಿ ಇಲ್ಲದೆಯೇ ಚುನಾವಣೆ ನಡೆದರೆ ಈ ಮಹತ್ತರ ಸಂಗತಿಗಳಿಗೆ ಉತ್ತರ ಕಂಡುಕೊಳ್ಳಬಹುದು
ರಾಜಕೀಯ ಪಕ್ಷಗಳು, ಯಾವ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸ್ಪರ್ಧಿಸಲು, ಹಿಂದುಳಿದ-ಅತಿ ಹಿಂದುಳಿದ ವರ್ಗಗಳಿಗೆ ಅವಕಾಶ ಮಾಡಿಕೊಡುತ್ತವೆ ಎಂಬು ದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ರಾಜಕೀಯ ಪಕ್ಷ ಗಳು ಹಿಂದುಳಿದ -ಅತಿ ಹಿಂದುಳಿದ ವರ್ಗಗಳ ಬಗ್ಗೆ ಇಟ್ಟು ಕೊಂಡಿರುವ ನೈಜ ಒಲವು ತಿಳಿಯುತ್ತದೆ. ಯಾವ ಯಾವ ಜಾತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿವೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ತ್ರಿ-ಸ್ತರ ಪರಿಶೀಲನೆಗೆ ಸ್ಪಷ್ಟ ಹಾಗೂ ಖಚಿತ ಮಾಹಿತಿ ಸಿಗುವ ಸಾಧ್ಯತೆಯಿದೆ. ಆಯೋಗವು, ಯಾವ ಯಾವ ಜಾತಿಗಳು ರಾಜಕೀಯವಾಗಿ ಹಿಂದುಳಿದಿವೆ ಎಂಬುದನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಮಾನದಂಡವೊAದು ರೂಪಿತ ವಾಗುತ್ತದೆ. ಕೇವಲ ಒಂದೇ ಒಂದು ಚುನಾವಣೆ ನಡೆಯು ವುದರಿಂದ ಹಿಂದುಳಿದ-ಅತಿ ಹಿಂದುಳಿದ ವರ್ಗಗಳು ರಾಜ ಕೀಯವಾಗಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಸಂವಿಧಾನಬದ್ಧ ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿ ಹಿಡಿದ ಹಾಗೆ ಆಗುತ್ತದೆ! ಹಾಗೆಯೇ, ಇನ್ನೂ ಕೆಲವು ಪೂರಕ ಅಂಶಗಳನ್ನು ಪಟ್ಟಿ ಮಾಡಲೂಬಹುದು. -ಕೆ.ಎನ್.ಲಿಂಗಪ್ಪ

ಸುಪ್ರೀA ಆದೇಶ ಅಧ್ಯಯನಕ್ಕೆ ಸೂಚನೆ
ನವದೆಹಲಿ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸರ್ವೋಚ್ಛ ನ್ಯಾಯಾ ಲಯದ ಆದೇಶವನ್ನು ಕಾನೂನು ಇಲಾಖೆ ಹಾಗೂ ಅಡ್ವೊಕೇಟ್ ಜನರಲ್ ಅವರಿಗೆ ಸಂಪೂರ್ಣ ಅಧ್ಯಯನ ಮಾಡುವಂತೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಆದೇಶ ಪ್ರತಿ ನಮಗೆ ಬಂದಿಲ್ಲ. ಸರ್ವೋಚ್ಛ ನ್ಯಾಯಾಲಯ ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತಾರೆ ಅದನ್ನು ಪಾಲಿಸಲಾಗುವುದು. ಸರ್ವೋಚ್ಛ ನ್ಯಾಯಾಲಯದ ಆದೇಶ ಎಲ್ಲಾ ರಾಜ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಚುನಾವಣಾ ಆಯೋಗದೊಂದಿಗೆ ಚರ್ಚೆ ಮಾಡಲಾಗುವುದು. ಅವರು ಸೂಚಿಸಿದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

 

Translate »