ರಾತ್ರಿ 1೦ರಿಂದ ಮುಂಜಾನೆ 6ರವರೆಗೆ ನಿಷಿದ್ಧ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಡೆಸಿಬಲ್ ನಿಗದಿ
ಮೈಸೂರು

ರಾತ್ರಿ 1೦ರಿಂದ ಮುಂಜಾನೆ 6ರವರೆಗೆ ನಿಷಿದ್ಧ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಡೆಸಿಬಲ್ ನಿಗದಿ

May 11, 2022

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರು ವಂತೆ ಕ್ರಮ ವಹಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂಬAಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಕುರಿತು ತೀರ್ಮಾನಕ್ಕೆ ಬರುವ ಸಲುವಾಗಿ ಮುಖ್ಯ ಕಾರ್ಯ ದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿ ಹಾಗೂ ಐಜಿಪಿ, ಹೆಚ್ಚುವರಿ ಅಡ್ವೊಕೇಟ್ ಜನರಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂ ದಿಗೆ ಸಭೆ ನಡೆಸಿ, ಚರ್ಚಿಸಿದ್ದರು.
ಈ ಸಂದರ್ಭದಲ್ಲಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಸುಪ್ರೀಂಕೋರ್ಟ್ ಹೊರಡಿಸಿರುವ ಆದೇಶ, ರಾಜ್ಯ ಸರ್ಕಾರವು ಶಬ್ಧಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ರೂಪಿಸಿರುವ ನಿಯಮ ಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆ ಬಳಿಕ ಕೆಲವು ಅಂಶಗಳನ್ನು ಜಾರಿಗೆ ತರಲು ಮುಖ್ಯ ಮಂತ್ರಿ ಬೊಮ್ಮಾಯಿ ಆದೇಶ ನೀಡಿದ್ದಾರೆ.

ಶಬ್ಧಮಾಲಿನ್ಯ(ನಿಯಂತ್ರಣ ಮತ್ತು ನಿಯಂತ್ರಣ) ನಿಯಮ ಗಳು-೨೦೦೦, ನಿಯಮ ೩(೧) ಅಡಿಯಲ್ಲಿ ಹೇಳಿರುವಂತೆ ಹಗಲಿನ ಸಮಯ ಎಂದರೆ ಬೆಳಗ್ಗೆ ೬ರಿಂದ ರಾತ್ರಿ ೧೦ರವರೆಗೆ ನಿಗದಿತ ಡೆಸಿಬಲ್‌ನಲ್ಲಿ ಬಳಸಬಹುದು. ಆದರೆ ರಾತ್ರಿ ೧೦ರಿಂದ ಬೆಳಗಿನ ಜಾವ ೬ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು. ಮಾರ್ಗಸೂಚಿ ಪ್ರಕಾರ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆ ದಾರರು ೧೫ ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯಬೇಕು. ಪಡೆಯದವರು ಸ್ವಯಂ ಪ್ರೇರಣೆಯಿಂದ ತೆಗೆದುಹಾಕಬೇಕು ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.

ಅನುಮತಿ ನೀಡುವ ಪ್ರಾಧಿಕಾರಗಳು: ಎಲ್ಲ ಪೊಲೀಸ್ ಕಮಿಷನ ರೇಟ್ ಪ್ರದೇಶಗಳಲ್ಲಿ ಸಹಾಯಕ ಪೊಲೀಸ್‌ಕಮಿಷನರ್ ಜುರಿಸ್ಡಿಕ್ಷನಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂ ತ್ರಣ ಮಂಡಳಿಯ ಪ್ರತಿನಿಧಿ. ಇತರ ಪ್ರದೇಶಗಳಲ್ಲಿ ಡಿವೈಎಸ್‌ಪಿ, ತಾಲೂಕು ದಂಡಾ ಧಿಕಾರಿ (ತಹಸೀಲ್ದಾರ್). ಲೌಡ್ ಸ್ಪೀಕರ್‌ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆ ಯನ್ನು ಬಳಸುವ ಎಲ್ಲಾ ಆವರಣಗಳಿಗೆ ಇದು ಅನ್ವಯಿಸುತ್ತದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಕಾರ್ಯಗತಗೊಳಿಸಲು ಅಗತ್ಯವಿರುವ ಸರ್ಕಾರಿ ನಿರ್ದೇ ಶನಗಳನ್ನು ಸಂಬAಧಪಟ್ಟವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ನಿರ್ಬಂಧಿಸಿದ ವೇಳೆಗಳಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ಆಜಾನ್‌ಗೆ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿ ದೇವಸ್ಥಾನಗಳಲ್ಲಿ ಸುಪ್ರಭಾತ, ಭಜನೆ ಮತ್ತು ಹನುಮಾನ್ ಚಾಲೀಸ್ ಅನ್ನು ಮೇ ೯ರ ಬೆಳಗ್ಗಿನ ಜಾವದಿಂದ ಆರಂಭಿಸಿವೆ ಎಂಬುದನ್ನು ಸ್ಮರಿಸಬಹುದು. ಜನವಸತಿ ಪ್ರದೇಶದಲ್ಲಿ ವಾಹನಗಳ ಶಬ್ಧ ಕೂಡ ರಾತ್ರಿ ೧೦ರಿಂದ ಮುಂಜಾನೆ ೬ರವರೆಗೆ ಕೆಲವೊಂದು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ನಿರ್ಬಂಧಿಸಲಾಗಿದೆ.

ಇನ್ನು ಮುಂದೆ ಮೈಕ್ ಬಳಸಲು ಧಾರ್ಮಿಕ ಕೇಂದ್ರ ಗಳು ಅನುಮತಿ ಪಡೆಯುವುದು ಕಡ್ಡಾಯ. ರಾತ್ರಿ ೧೦ ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು. ಧ್ವನಿವರ್ಧಕವನ್ನು ನಿಗದಿತ ಡೆಸಿಬಲ್‌ಗಿಂತ ಹೆಚ್ಚಿಸಬಾರದು. ಕೈಗಾರಿಕಾ ಪ್ರದೇಶದಲ್ಲಿ ಹಗಲು ೭೫-ರಾತ್ರಿ ೭೦ ಡೆಸಿಬಲ್, ವಾಣ ಜ್ಯ ಪ್ರದೇಶಗಳಲ್ಲಿ ಹಗಲು ೬೫-ರಾತ್ರಿ ೫೫ ಡೆಸಿಬಲ್. ಜನವಸತಿ ಪ್ರದೇಶದಲ್ಲಿ ಹಗಲು ೫೫-ರಾತ್ರಿ ೪೫ ಡೆಸಿಬಲ್. ಸೈಲೆಂಟ್ ಜೋನ್‌ನಲ್ಲಿ ಹಗಲು ೫೦- ರಾತ್ರಿ ೪೦ ಡೆಸಿಬಲ್ ಶಬ್ಧ ಪ್ರಮಾಣ ಕಾಯ್ದುಕೊಳ್ಳಬೇಕು.

Translate »