ನಮ್ಮ ನಿರ್ದೇಶನ ಪಾಲಿಸಿ…: ಸಿಎಂಗೆ ವರಿಷ್ಠರ ಸಲಹೆ
ಮೈಸೂರು

ನಮ್ಮ ನಿರ್ದೇಶನ ಪಾಲಿಸಿ…: ಸಿಎಂಗೆ ವರಿಷ್ಠರ ಸಲಹೆ

May 11, 2022

ಬೆಂಗಳೂರು, ಮೇ೧೦(ಕೆಎಂಶಿ)-ನಮ್ಮ ನಿರ್ದೇ ಶನವನ್ನು ಪಾಲನೆ ಮಾಡಿ ಎಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ವರಿಷ್ಠರು ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗ ವಹಿಸಲೆಂದು ದೆಹಲಿಗೆ ತೆರಳಿದ್ದ ಸಿಎಂಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ತಾವು ಪಕ್ಷದ ರಾಷ್ಟಿçÃಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಲು ಸಾಧ್ಯ ವಾಗಲಿಲ್ಲ. ಆದರೆ ವರಿಷ್ಠರು ಸೂಚಿಸಿದ ವ್ಯಕ್ತಿ ಯೊಬ್ಬರನ್ನು ಭೇಟಿಯಾಗಿ, ಇತರೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಅಮಿತ್ ಷಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಲೆಂದೇ ನಗರಕ್ಕೆ ಹಿಂತಿರುಗುವ ಕಾರ್ಯಕ್ರಮ ವನ್ನು ಅಂತಿಮಗೊಳಿಸಿಲ್ಲ. ಅಷ್ಟೇ ಅಲ್ಲ ನಾಳೆ ನಡೆಯಬೇಕಿದ್ದ ಸಂಪುಟ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ. ಮುಖ್ಯಮಂತ್ರಿಯವರು ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿಯಾವ ಸಚಿವರನ್ನು, ಶಾಸಕರನ್ನು ಕರೆದುಕೊಂಡು ಹೋಗಿಲ್ಲ. ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಾರೆ ಎಂದರೆ ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆಯಾಗುತ್ತದೆ ಎಂದು ಹಲವಾರು ಆಕಾಂಕ್ಷಿಗಳ ಹಿಂಡೇ ಅವರ ಹಿಂದೆ ತೆರಳುತ್ತಿತ್ತು. ಆದರೆ ಈ ಬಾರಿ ಯಾವ ಆಕಾಂಕ್ಷಿಯು ತೆರಳಿಲ್ಲ. ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆಗಾಗಿ ಮುಖ್ಯಮಂತ್ರಿಯವರು ಈ ಹಿಂದೆ ಹಲವಷ್ಟು ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದರು.

ಆದರೆ ಅದು ಯಶಸ್ವಿ ಆಗಲಿಲ್ಲ. ಇದನ್ನು ಅರಿತ ಯಾವ ಆಕಾಂಕ್ಷಿಗಳು ದೆಹಲಿಗೆ ತೆರಳಿಲ್ಲ. ಸಿಎಂ ದೆಹಲಿಯಲ್ಲಿ ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರೊಟ್ಟಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ, ನಂತರ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಸಂಜೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣ ಅವರು ಏರ್ಪಡಿಸಿದ್ದ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

 

Translate »