ಪೊಲೀಸ್ ಕಣ್ಗಾವಲಲ್ಲಿ ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ
ಮೈಸೂರು

ಪೊಲೀಸ್ ಕಣ್ಗಾವಲಲ್ಲಿ ಮೇ 21, 22ರಂದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ

May 11, 2022

ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತ ಸರ್ಕಾರ

ಮೂರು ಹಂತದಲ್ಲಿ ತಪಾಸಣೆ, ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾ

ಕೆಲವು ಕೇಂದ್ರದಲ್ಲಿ ಲೋಹ ಶೋಧಕ ದ್ವಾರ ವ್ಯವಸ್ಥೆ

೪೩೫ ಪರೀಕ್ಷಾ ಕೇಂದ್ರಗಳಲ್ಲಿ ೧.೦೬ ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ

ಬೆಂಗಳೂರು, ಮೇ೧೦(ಕೆಎಂಶಿ) -ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ೧೫ ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯು, ಪೊಲೀಸ್ ಕಣ್ಗಾವಲಿನಲ್ಲಿ ನಡೆಯಲಿದೆ.

ಮೇ ೨೧ ಮತ್ತು ೨೨ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ರಾಜ್ಯಾ ದ್ಯಂತ ೪೩೫ ಕೇಂದ್ರಗಳಲ್ಲಿ ೧.೦೬ ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಮತ್ತು ಹಗರಣದಿಂದ ಎಚ್ಚೆತ್ತ ಸರ್ಕಾರ ಈ ಪರೀಕ್ಷೆಯನ್ನು ಪೊಲೀಸ್ ಕಣ್ಗಾವಲಿ ನಲ್ಲಿ ನಡೆಸಲು ತೀರ್ಮಾನಿಸಿದೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ಉದ್ದೇಶ ದಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಪೊಲೀಸ್ ಹಿರಿಯ ಅಧಿಕಾರಿಗಳೊಟ್ಟಿಗೆ ಸಮಾ ಲೋಚಿಸಿ, ಕೆಲವು ಕಠಿಣ ತೀರ್ಮಾನ ಕೈಗೊಂಡಿದ್ದಾರೆ. ಸಭೆ ನಂತರ ಈ ವಿಷಯ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪರೀಕ್ಷಾ ಕೊಠಡಿಗಳಿಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ. ನಿರಂತರವಾಗಿ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಲು ಅಧಿಕಾರಿಗಳ ತಂಡವನ್ನು ನೇಮಿಸಲಾಗುವುದು ಎಂದರು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಕೈಗಡಿಯಾರ ಹಾಗೂ ಯಾವುದೇ ರೀತಿಯ ಎಲೆಕ್ಟಾçನಿಕ್ ಸಾಧನ ತರಲು ಅವಕಾಶವಿಲ್ಲ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಲೋಹಶೋಧಕ ಅಳವಡಿಸಲಾಗುವುದು. ಅಭ್ಯರ್ಥಿಗಳು ೧ ಗಂಟೆ ಮುನ್ನವೇ ಕೊಠಡಿಗಳಿಗೆ ತೆರಳಬೇಕು. ಕೇಂದ್ರ ಪ್ರವೇಶಿಸುವ ಮುನ್ನ ೩ ಹಂತದಲ್ಲಿ ತಪಾಸಣೆ ನಡೆಯಲಿದೆ ಎಂದರು.

ಮೇ ಮೂರನೇ ವಾರ sslc ಫಲಿತಾಂಶ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ ಮೂರನೇ ವಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೌಲ್ಯಮಾಪನ ಮುಕ್ತಾಯವಾಗಿದ್ದು, ಫಲಿತಾಂಶದ ತಯಾರಿ ಮಾಡಲಾಗುತ್ತಿದೆ. ೩ನೇ ವಾರ ಫಲಿತಾಂಶ ಪ್ರಕಟಿಸುತ್ತೇವೆ ಎಂದರು. ಶೀಘ್ರವೇ ದಿನಾಂಕ ಕೂಡ ತಿಳಿಸಲಾಗುವುದು ಎಂದರು. ಮೇ ೧೬ರಿಂದಲೇ ಶಾಲೆಗಳು ಪ್ರಾರಂಭ ವಾಗಲಿವೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂಎಲ್‌ಸಿಗಳು, ಸಭಾಪತಿ ಗಳು, ಎಂಎಲ್‌ಎಗಳು ಪತ್ರ ಬರೆದು ಹೆಚ್ಚು ಬಿಸಿಲು ಇರುತ್ತೆ, ಶಾಲೆ ಪ್ರಾರಂಭ ಮುಂದಕ್ಕೆ ಹಾಕಿ ಅಂತ ಮನವಿ ಮಾಡಿದ್ದಾರೆ. ಆದರೆ ನಾವು ಹವಾಮಾನ ಇಲಾಖೆ ವರದಿ ಪಡೆದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ಅದೇ ಪ್ರಮಾಣದಲ್ಲಿ ಬಿಸಿಲು ಇರಲಿದೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಎರಡು ವರ್ಷ ಕೊರೊನಾ ದಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಕ್ಕಿಲ್ಲ. ಹೀಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ತುಮಕೂರಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇದೇ ಮೇ ೧೬ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

Translate »