ಮೈಸೂರು ವಿಜಯನಗರ ಎರಡನೇ ಹಂತದಲ್ಲಿ ಅಕ್ರಮ ಡಿ-ನೋಟಿಫೈ ಆಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ
ಮೈಸೂರು

ಮೈಸೂರು ವಿಜಯನಗರ ಎರಡನೇ ಹಂತದಲ್ಲಿ ಅಕ್ರಮ ಡಿ-ನೋಟಿಫೈ ಆಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ

May 11, 2022

೧.೧೫ ಎಕರೆ ಭೂಮಿ ಮುಡಾ ವಶಕ್ಕೆ ಮುಡಾ ಹಿಂದಿನ ಆಯುಕ್ತ ಡಾ. ಡಿ.ಬಿ.ನಟೇಶ್ ಆದೇಶ

ಮೈಸೂರಿನ ವಿಜಯನಗರ ೨ನೇ ಹಂತದ ಹಿನಕಲ್ ಸರ್ವೆ ನಂಬರ್ ೧೦೫ರ ಭೂಮಿ.

ಮೈಸೂರು, ಮೇ ೧೦-ಇತ್ತೀಚಿನ ದಿನ ಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಇದೇ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಭೂಮಿ ಕಬಳಿಸುವ ದಂಧೆಯೂ ಹೆಚ್ಚಾಗು ತ್ತಿದೆ. ವಿಶೇಷವಾಗಿ ಮೈಸೂರು ನಗರ ಮತ್ತು ಇದಕ್ಕೆ ಹೊಂದಿಕೊAಡAತಿರುವ ಖಾಲಿ ಭೂಮಿ, ನಿವೇಶನಗಳು ಹಾಗೂ ಅದರಲ್ಲೂ ಸರ್ಕಾರಿ ಜಾಗದ ಮೇಲೆ ಕಣ ್ಣಟ್ಟಿರುವ ಭೂಗಳ್ಳರು ಕೋಟ್ಯಾಂ ತರ ರೂ. ಬೆಲೆಬಾಳುವ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಇತ್ತೀಚೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಭಾರೀ ಬೆಲೆಬಾಳುವಂತಹ ಆಸ್ತಿಗಳ ಕಡತಗಳ ಲ್ಲಿನ ಪುಟಗಳನ್ನೇ ಹರಿದು ಎಗರಿಸಿ, ನಕಲಿ ದಾಖಲೆ ಸೃಷ್ಟಿಸಿ, ಅವುಗಳಲ್ಲಿ ಸೇರಿಸಿ ಭಾರೀ ಅವ್ಯವಹಾರ ನಡೆಸಿರುವುದು ಬಯಲಾಗಿದೆ. ಅದರ ಬೆನ್ನಲ್ಲೇ ವಸತಿ ಬಡಾವಣೆಗೆಂದು ವ್ಯವ ಸ್ಥಿತವಾಗಿ ಅಧಿಸೂಚನೆ ಹೊರಡಿಸಿ, ಮಾಲೀಕ ರಿಗೆ ಪರಿಹಾರ ಕಲ್ಪಿಸಲಾಗಿರುವ ಮೈಸೂರಿನ ವಿಜಯನಗರ ೨ನೇ ಹಂತ ಬಡಾವಣೆಯ ಹಿನಕಲ್ ಗ್ರಾಮದ ಸರ್ವೆ ನಂ.೧೦೫ ರ ಪೈಕಿ ಕೋಟ್ಯಾಂತರ ರೂ. ಬೆಲೆಬಾಳುವ ೧.೧೫ ಎಕರೆ ಭೂಮಿಯನ್ನು ಮುಡಾ ಅಧಿಕಾರಿಗಳೇ ಶಾಮೀಲಾಗಿ, ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಿದ್ದು, ಸದರಿ ಆಸ್ತಿಯನ್ನು ರಕ್ಷಿಸಲು ಪಣತೊಟ್ಟಿದ್ದ ಮುಡಾದ ಈ ಹಿಂದಿನ ಆಯುಕ್ತ ಡಾ.ಡಿ.ಬಿ. ನಟೇಶ್, ಇದರ ಖಾತೆ ರದ್ದುಪಡಿಸುವಂತೆ ಕೋರಿ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸದರಿ ಆಸ್ತಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲು ಕ್ರಮಕೈಗೊಳ್ಳುವಂತೆ ಮಾರ್ಚ್ ೪ ರಂದು ಅಧೀನ ಅಧಿಕಾರಿಗಳಿಗೆ ಸೂಚಿಸಿ, ಆದೇಶಿಸಿದ್ದಾರೆ.

ಹಿನಕಲ್ ಸರ್ವೆ ನಂ.೧೦೫ ರಲ್ಲಿ ಬರುವ ಈ ೧.೧೫ ಎಕರೆ ಭೂಮಿಯನ್ನು ೧೯೮೪ರ ಮಾರ್ಚ್ ೨೯ರಂದು ಅಧಿಸೂಚನೆ ಹೊರಡಿಸಿ, ೧೯೮೫ ರ ಆಗಸ್ಟ್ ೬ ರಂದು ಭೂ ಸ್ವಾಧೀನ ಪಕ್ರಿಯೆ ಮುಗಿದ ನಂತರ ಆರ್‌ಟಿಸಿಯಲ್ಲಿ ಮುಡಾಗೆ ಭೂ ಸ್ವಾಧೀನ ಎಂದು ಇಂಡಿಕರಣವಾಗಿತ್ತು. ಆದರೆ ನಂತರ ೨೦೦೬ ರ ಫೆಬ್ರವರಿ ೭ ರಂದು ಅಂದಿನ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಯಾವುದೇ ಸರ್ಕಾರಿ ಆದೇಶ ಅಥವಾ ನ್ಯಾಯಾಲಯದ ನಿರ್ದೇಶನ ಇಲ್ಲದೆಯೂ ಸದರಿ ಭೂಮಿಯನ್ನು ಡಿ-ನೋಟಿಫೈ ಮಾಡಿದ್ದರು. ಆ ಡಿ-ನೋಟಿಫಿಕೇಷನ್ ಆದೇಶ ಪ್ರತಿ ಆಧರಿಸಿ ಅಂದಿನ ಮೈಸೂರು ತಾಲೂಕು ತಹಸೀಲ್ದಾರ್, ಬೇರೊಬ್ಬ ಮಹಿಳೆಗೆ ಖಾತೆ ಮಾಡಿಕೊಟ್ಟಿದ್ದರು. ನಂತರವೂ ತಪ್ಪು ಮಾಹಿತಿ ನೀಡಿ, ವೆಂಕಟಾಚಲ ರೆಡ್ಡಿ ಬಿನ್ ಲೇಟ್ ಕೊಂಡಾರೆಡ್ಡಿ ಎಂಬುವವರ ಹೆಸರಿಗೆ ಎಂಆರ್‌ಹೆಚ್೪/೨೦೧೪-೧೫ ರಂತೆ ೨೦-೨-೨೦೨೧ ರಂತೆ ಪಹಣ ಯಲ್ಲಿ ಬದಲಾವಣೆ ಮಾಡಿ ಅಕ್ರಮವೆಸಗಲಾಗಿದೆ. ಮುಡಾ ವಸತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನ್ಯಾಯಾಲಯದ ಆದೇಶ ಹೊರತುಪಡಿಸಿ ಡಿ-ನೋಟಿಫೈ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದು ಗೊತ್ತಿದ್ದೂ, ವಿಶೇಷ ಭೂ ಸ್ವಾಧೀನಾಧಿಕಾರಿ ಅಧಿಸೂಚನೆಯಿಂದ ಕೈಬಿಟ್ಟಿದ್ದಲ್ಲದೇ ಭೂ ಮಾಲೀಕರಿಗೂ ಖಾತೆ ಮಾಡದೇ ಸದರಿ ಜಮೀನನ್ನು ಬೇರೊಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದುದು ಭಾರೀ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಈ ಎಲ್ಲಾ ಬೆಳವಣ ಗೆಯಿಂದಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿದ್ದ ಮುಡಾ ಹಿಂದಿನ ಆಯುಕ್ತ ಡಾ.ಡಿ.ಬಿ. ನಟೇಶ್, ಅಕ್ರಮವಾಗಿ ಮಾಡಿರುವ ಖಾತೆಯನ್ನು ರದ್ದುಪಡಿಸಿ ತಕ್ಷಣದಿಂದಲೇ ವಶಕ್ಕೆ ಪಡೆಯುವಂತೆ ಆದೇಶಿಸಿದ್ದಾರೆ.

 

ಆಯುಕ್ತರೊಂದಿಗೆ ಚರ್ಚಿಸಿ ಕ್ರಮಕ್ಕೆ ತಹಸೀಲ್ದಾರ್‌ಗೆ ಪತ್ರ ಬರೆಯುತ್ತೇವೆ
ಮೈಸೂರು: ಮುಡಾ ಈ ಹಿಂದಿನ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು ಮಾಡಿರುವ ಆದೇ ಶದ ಕಡತವನ್ನು ಹಾಲಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರಿಗೆ ತೋರಿಸಿ, ಅವರೊಂದಿಗೆ ಚರ್ಚಿಸಿ ತಹಸೀಲ್ದಾರರಿಗೆ ಪತ್ರ ಬರೆಯುತ್ತೇನೆ ಎಂದು ಮುಡಾ ವಿಶೇಷ ಭೂಸ್ವಾಧೀನಾ ಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.

ಭೂಸ್ವಾಧೀನವಾಗಿ ಅವಾರ್ಡ್ ಆಗಿದ್ದಾಗ್ಯೂ ಹಿಂದಿನ ಭೂಸ್ವಾಧೀನಾಧಿಕಾರಿಗಳು ಹೇಗೆ ಡಿ-ನೋಟಿಫೈ ಮಾಡಿದ್ದಾರೆಂಬುದು ಗೊತ್ತಿಲ್ಲ. ಭೂಸ್ವಾಧೀನದಿಂದ ಕೈಬಿಡಲು ಅಧಿಕಾರವಿಲ್ಲ ದಿದ್ದರೂ ಪ್ರಕ್ರಿಯೆ ನಡೆಸಿ ಖಾಸಗಿ ವ್ಯಕ್ತಿಗಳ ಹೆಸ ರಿಗೆ ಭಾರೀ ಬೆಲೆ ಬಾಳುವ ಆಸ್ತಿಯನ್ನು ಖಾತೆ ಮಾಡಿಕೊಟ್ಟಿರುವ ಬಗ್ಗೆ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇದೀಗ ಖಾತೆ ರದ್ದುಪಡಿಸುವಂತೆ ಆಯುಕ್ತರು ಸಂಬAಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲು ಆದೇಶಿಸಿದ್ದಾರೆ. ಅದರನ್ವಯ ಪ್ರಸ್ತುತ ಆಯುಕ್ತರ ಜೊತೆ ಚರ್ಚಿಸಿ ತಹಸೀಲ್ದಾರ್ ಅವರಿಗೆ ಪತ್ರ ಬರೆಯುತ್ತೇವೆ ಎಂದು ಹರ್ಷ ವರ್ಧನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಎಸ್.ಟಿ.ರವಿಕುಮಾರ್

Translate »