ವಿಧಾನಸಭೆಯಿಂದ ಪರಿಷತ್ ಚುನಾವಣೆ ತೆರವಾಗುವ 7 ಸ್ಥಾನಕ್ಕೆ ಜೂ.3ರಂದು ಮತದಾನ
ಮೈಸೂರು

ವಿಧಾನಸಭೆಯಿಂದ ಪರಿಷತ್ ಚುನಾವಣೆ ತೆರವಾಗುವ 7 ಸ್ಥಾನಕ್ಕೆ ಜೂ.3ರಂದು ಮತದಾನ

May 11, 2022

ಬೆಂಗಳೂರು, ಮೇ೧೦ (ಕೆಎಂಶಿ) -ವಿಧಾನಸಭೆಯಿಂದ ವಿಧಾನಪರಿ ಷತ್‌ನ ೭ ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೆöÊ ವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಜೂ.೩ರಂದು ಮತದಾನ ನಡೆಯಲಿದೆ. ಜೂ.೧೪ರಂದು ನಿವೃತ್ತಿಯಾಗಲಿರುವ ಪರಿಷತ್‌ನ ೭ ಸದಸ್ಯ ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಪರಿಷತ್ ಸದಸ್ಯರಾದ ಮಾಜಿ ಉಪಮುಖ್ಯಮಂತ್ರಿ ಲಕ್ಷ÷್ಮಣ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೇಶ್ ಗೌಡ, ಎಸ್.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ ಹಾಗೂ ಲೆಹರ್ ಸಿಂಗ್ ಶಿರೋಯಾ ಅವರು ಜೂ.೧೪ರಂದು ನಿವೃತ್ತಿಯಾಗುತ್ತಿದ್ದಾರೆ.

ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ ೧೭ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದಿ ನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ಮೇ ೨೪ ಕಡೇ ದಿನವಾಗಿದೆ. ಮೇ ೨೫ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂಪಡೆಯಲು ಮೇ ೨೭ರವರೆಗೂ ಕಾಲಾವಕಾಶವಿದೆ. ಜೂ.೩ರಂದು ಬೆಳಗ್ಗೆ ೯ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ ೫ ಗಂಟೆ ನಂತರ ಮತ ಎಣ ಕೆ ನಡೆದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜೂ.೭ರ ಒಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಆಯೋಗ ಸೂಚಿಸಿದೆ. ನಿವೃತ್ತಿಯಾಗು ತ್ತಿರುವ ಏಳು ಸದಸ್ಯರ ಪೈಕಿ ಕಾಂಗ್ರೆಸ್‌ನ ಮೂರು, ಬಿಜೆಪಿ ಹಾಗೂ ಜೆಡಿಎಸ್‌ನ ತಲಾ ಇಬ್ಬರು ಸದಸ್ಯರು ಸೇರಿದ್ದಾರೆ. ವಿಧಾನಸಭೆಯಲ್ಲಿ ಮೂರೂ ಪಕ್ಷಗಳು ಹೊಂದಿರುವ ಬಲಾಬಲದ ಆಧಾರದ ಮೇಲೆ ಈಗ ಆಡಳಿತಾರೂಢ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬಹುದಾಗಿದೆ.

ಈ ಚುನಾವಣೆ ನಂತರ ಪರಿಷತ್ ಸದಸ್ಯರ ಸಂಖ್ಯೆಯಲ್ಲೂ ವ್ಯತ್ಯಾಸವಾಗಲಿದ್ದು, ಆಡಳಿತಾರೂಢ ಬಿಜೆಪಿಗೆ ಬಹುಮತ ದೊರೆಯಲಿದೆ. ೭೫ ಸದಸ್ಯ ಬಲದ ಪರಿಷತ್ ನಲ್ಲಿ ಪ್ರಸ್ತುತ ಬಿಜೆಪಿ ೩೭, ಕಾಂಗ್ರೆಸ್ ೨೬, ಜೆಡಿಎಸ್ ೧೦ ಸದಸ್ಯರನ್ನು ಹೊಂದಿದೆ. ಚುನಾವಣಾ ಫಲಿತಾಂಶದ ನಂತರ ಬಿಜೆಪಿ ೩೯, ಕಾಂಗ್ರೆಸ್ ೨೪, ಜೆಡಿಎಸ್ ೯ ಸದಸ್ಯರನ್ನು ಹೊಂದುವ ಸಾಧ್ಯತೆಗಳಿವೆ. ವಿಧಾನಸಭೆಯಲ್ಲಿ ಬಿಜೆಪಿ ೧೧೯, ಕಾಂಗ್ರೆಸ್ ೬೯, ಜೆಡಿಎಸ್ ೩೨ ಶಾಸಕರನ್ನು ಹೊಂದಿವೆ. ಬಿಎಸ್‌ಪಿ ೧, ಇಬ್ಬರು ಪಕ್ಷೇತರರು, ಸಭಾಧ್ಯಕ್ಷರು ಹಾಗೂ ಒಬ್ಬರು ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಚುನಾಯಿತರಾಗಲು ಕನಿಷ್ಠ ೩೩ ಶಾಸಕರ ಮತಗಳ ಅವಶ್ಯಕತೆ ಇದೆ. ರಹಸ್ಯ ಮತದಾನವಾಗಿರುವುದರಿಂದ ಅಡ್ಡಮತದಾನವಾದರೂ ಆಶ್ಚರ್ಯಪಡ ಬೇಕಿಲ್ಲ. ೭ ಸದಸ್ಯರಿಗಿಂತ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದರೆ ಮತದಾನ ನಡೆಯಲಿದೆ. ಇಲ್ಲದಿದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.

Translate »