ಬೈಕ್‌ಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ತಂದೆ-ಮಗ ಸಾವು
ಮೈಸೂರು

ಬೈಕ್‌ಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ ತಂದೆ-ಮಗ ಸಾವು

May 11, 2022

ಪತ್ನಿ, ಮತ್ತೊಬ್ಬ ಪುತ್ರನಿಗೆ ಗಂಭೀರ ಗಾಯ

ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ದುರ್ಘಟನೆ

ಬೇಗೂರು,ಮೇ ೧೦(ಕಿರಣ್)-ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮತ್ತೊಬ್ಬ ಪುತ್ರ ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಸಮೀಪದ ಹಿರಿ ಕಾಟಿ ಗೇಟ್ ಬಳಿ ಮಂಗಳವಾರ ನಡೆದಿದೆ.ನಂಜನಗೂಡು ಪಟ್ಟಣದ ಶಶಿಕುಮಾರ್ (೩೫), ಅವರ ಪುತ್ರ ದರ್ಶನ್(೬) ಸಾವ ನ್ನಪ್ಪಿದ್ದು, ಶಶಿಕುಮಾರ್ ಪತ್ನಿ ಚೈತ್ರಾ (೨೮) ಹಾಗೂ ಮತ್ತೊಬ್ಬ ಪುತ್ರ ಗಗನ್ (೫) ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕುಮಾರ್ ತಮ್ಮ ಬೈಕ್‌ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕ ಳೊಂದಿಗೆ ಬೇಗೂರಿನಿಂದ ಮೈಸೂರಿಗೆ ಕಾರ್ಯ ನಿಮಿತ್ತ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರೊಂದು ಬೇಗೂರು ಸಮೀಪದ ಹಿರಿಕಾಟಿ ಗೇಟ್‌ನ ಪೆಟ್ರೋಲ್ ಬಂಕ್ ಬಳಿಯ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಶಶಿಕುಮಾರ್ ಹಾಗೂ ಅವರ ಮೊದಲ ಪುತ್ರ ದರ್ಶನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರ ಪತ್ನಿ ಚೈತ್ರಾ ಹಾಗೂ ಮತ್ತೊಬ್ಬ ಪುತ್ರ ಗಗನ್ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಬೇಗೂರು ಠಾಣೆ ಪೊಲೀಸರು ಮೃತರ ದೇಹವನ್ನು ಬೇಗೂರು ಆರೋಗ್ಯ ಕೇಂದ್ರಕ್ಕೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »