ಯು.ಟಿ.ಖಾದರ್ ಹಿಂಬಾಲಿಸಿದ ಆಗಂತುಕರು
ಮೈಸೂರು

ಯು.ಟಿ.ಖಾದರ್ ಹಿಂಬಾಲಿಸಿದ ಆಗಂತುಕರು

December 24, 2020

ಮಂಗಳೂರು,ಡಿ.23-ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ಇಬ್ಬರು ಆಗಂತು ಕರು ಅನುಮಾನಾಸ್ಪದವಾಗಿ ಬೈಕ್‍ನಲ್ಲಿ ಹಿಂಬಾಲಿಸಿದ ಘಟನೆ ನಡೆದಿದೆ.

ಖಾದರ್ ಅವರು ತಮ್ಮ ಕಾರಿನಲ್ಲಿ ಮಂಗಳೂರಿನ ಬಜ್ಬೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಇಬ್ಬರು ಆಗಂತುಕರು ಬೈಕ್‍ನಲ್ಲಿ ಅವರ ಕಾರನ್ನು ಹಲವಾರು ಕಿಲೋಮೀಟರ್‍ವರೆಗೆ ಹಿಂಬಾಲಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಖಾದರ್, ತಮ್ಮ ಮೊಬೈಲ್ ಮೂಲಕ ಬೆಂಗಾವಲು ವಾಹನದಲ್ಲಿದ್ದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ತಡೆಯಲು ಪ್ರಯತ್ನಿಸಿದಾಗ ಆಗಂತುಕರು ರಾಂಗ್ ಸೈಡ್‍ನಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡಿ ಪರಾರಿಯಾಗಿದ್ದಾರೆ. ಬೆಂಗಾವಲು ವಾಹನದಲ್ಲಿದ್ದ ಪೊಲೀಸರು ಬೈಕ್ ನಂಬರ್ ಗುರುತು ಹಾಕಿಕೊಂಡಿದ್ದಾರೆ. ಈ ಘಟನೆಯನ್ನು ಮಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆಗಂತುಕರ ಸೆರೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Translate »