ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಕೊರೊನಾ ಗೂಬೆನಾ..!?
ಮೈಸೂರು

ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಕೊರೊನಾ ಗೂಬೆನಾ..!?

December 24, 2020

`ನೈಟ್ ಕಪ್ರ್ಯೂ’ ಘೋಷಣೆಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವ್ಯಂಗ್ಯ
ಬೆಂಗಳೂರು: ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಅದೇನು ಕೊರೊನನಾ ಇಲ್ಲವಾ ಗೂಬೆನಾ..!? ಎಂದು ‘ನೈಟ್ ಕಪ್ರ್ಯೂ’ಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕಪ್ರ್ಯೂ ಜಾರಿಗೊಳಿಸಲಾಗಿದ್ದು, ಸರ್ಕಾರದ ನಡೆಗೆ ಭಾರೀ ಟೀಕೆ, ವಿರೋಧ ಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ರಾತ್ರಿ ಮಾತ್ರ ಎಚ್ಚರವಿರುವುದಕ್ಕೆ ಅದೇನು ಕೊರೊನನಾ ಇಲ್ಲವಾ ಗೂಬೆನಾ..? ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಎಂದು ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

Translate »