ಡಾ.ಎ.ಪಿ.ಜ್ಞಾನಪ್ರಕಾಶ್ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ
ಮೈಸೂರು

ಡಾ.ಎ.ಪಿ.ಜ್ಞಾನಪ್ರಕಾಶ್ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ

December 24, 2020

ಮೈಸೂರು, ಡಿ.23(ಆರ್‍ಕೆ)-ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ರನ್ನಾಗಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜ್ಞಾನಪ್ರಕಾಶ್ ಕುಲಸಚಿವ (ಪರೀಕ್ಷಾಂಗ) ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಮಹೇಶ್, ಇಂದು ಹೊರಡಿಸಿ ರುವ ಆದೇಶದಲ್ಲಿ ತಿಳಿಸಿದ್ದಾರೆ. ಈವರೆಗೆ ಪರೀಕ್ಷಾಂಗ ಕುಲ ಸಚಿವ ರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ.ಕೆ.ಎಂ.ಮಹದೇವನ್ ಅವರ ಸೇವೆಯನ್ನು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸಲಾಗಿದೆ.

ಡಾ. ಎ.ಪಿ.ಜ್ಞಾನಪ್ರಕಾಶ್ ಅವರು ಇಂದು ಸಂಜೆ ಕ್ರಾಫರ್ಡ್ ಭವನದಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡರು. ಎಂ.ಎಸ್ಸಿ, ಎಂ.ಫಿಲ್, ಪಿಹೆಚ್.ಡಿ. ಪದವೀಧರರಾದ ಅವರು, ತೈವಾನಿನ ನ್ಯಾಷನಲ್ ಡೊಂಗ್ ಹ್ವಾ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಆಗಿ, ಯುಎಸ್‍ಎಯ ಜಾರ್ಜಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನ ಶ್ರೀನಿವಾಸ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

Translate »