ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ
ಮೈಸೂರು

ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

December 24, 2020

ಮೈಸೂರು,ಡಿ.23-ಮೈಸೂರಿನ ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜ ನೆಯ ವತಿಯಿಂದ ಭಾರತದ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ “ರಾಷ್ಟ್ರೀಯ ರೈತ ದಿನಾಚರಣೆ”ಯನ್ನು ಏರ್ಪಡಿಸಲಾಗಿತ್ತು. ಚರಣ್ ಸಿಂಗ್ ಅವರು ಕೃಷಿ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಗಳಿಂದಾಗಿ ಅವರ ಹುಟ್ಟಿದ ದಿನವನ್ನು 2001ರಿಂದ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿ ಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್.ಜಯಕುಮಾರಿ ಮಾತನಾಡಿ, ರೈತ ದೇಶದ ಬೆನೆÀ್ನಲುಬು. ಸದಾ ಕಾಲ ಭೂತಾಯಿಯೊಂದಿಗೆ ಒಡ ನಾಟವನ್ನಿಟ್ಟುಕೊಂಡು ಹಗಲಿರುಳು ದುಡಿದು ಇಡೀ ಮಾನವ ಕುಲಕ್ಕೆ ಆಹಾರ ಒದಗಿಸುತ್ತಿದ್ದಾನೆ. ಆದರೆ ಈಗ ಸ್ವಾಭಿಮಾನಿ ರೈತನ ಬದುಕು ಬಹಳ ಶೋಚನೀಯವಾಗಿದೆ. ಅವನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾನೆ ಎಂದು ವಿಷಾದಿಸಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ರೈತರು ಬೆಳೆದ ಬೆಳೆಗಳನ್ನು ನಾವು ಕೊಂಡುಕೊಳ್ಳುವಾಗ ಚೌಕಾಸಿ ಮಾಡುತ್ತೇವೆ. ಆದರೆ. ಎಂ.ಎನ್.ಸಿ. ಕಂಪನಿಗಳ ವಸ್ತುಗಳಿಗೆ ಅವರು ಕೇಳಿದಷ್ಟು ಹಣವನ್ನು ಕೊಟ್ಟು ಕೊಂಡು ಕೊಳ್ಳುತ್ತೇವೆ. ಕೇವಲ ಭಾರತದ ರೈತನ ಸ್ಥಿತಿ ಮಾತ್ರ ಶೋಚನೀಯವಾಗಿಲ್ಲ ಇಡೀ ವಿಶ್ವದ ರೈತರ ಬದುಕು ಅತಂತ್ರವಾಗಿದೆ. ಮುಂದುವರೆದ ದೇಶಗಳಲ್ಲೇ ಕೃಷಿ ಎಂಎನ್‍ಸಿ ಕಂಪನಿಗಳ ಪಾಲಾಗಿದೆ. ಸರ್ಕಾರಗಳು ರೈತಪರ ಕಾಯ್ದೆಗಳನ್ನು ಜಾರಿಗೆ ತಂದು ಅವನು ಬೆಳೆಯುವ ಬೆಳೆಗಳಿಗೆ ಸೂಕ್ತವಾದ ಬೆಲೆಯನ್ನು ನಿಗದಿಪಡಿಸಿ ರೈತನ ಬದುಕನ್ನು ಹಸÀ ನ್ನಾಗಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ.ಧರ್ಮೇಶ, ಬೋಧಕ ಹಾಗೂ ಬೋಧಕೇತರ ವರ್ಗದವರು, ಸ್ವಯಂ ಸೇವಕರಾದ ಸಿದ್ದಾರ್ಥ, ಹೃತಿಕ್‍ಗೌಡ, ದಿವ್ಯಶ್ರೀ, ಗೌರವ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »