ಮೈಸೂರಲ್ಲಿ ಇಂದಿನಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ
ಮೈಸೂರು

ಮೈಸೂರಲ್ಲಿ ಇಂದಿನಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ

December 24, 2020

ಮೈಸೂರು, ಡಿ.23(ಆರ್‍ಕೆ)-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕ ಳನ್ನು ಗುರುತಿಸಲು ನಾಳೆ (ಡಿ.24)ಯಿಂದ ಸಮೀಕ್ಷಾ ಕಾರ್ಯ ಆರಂಭವಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ-ಸ್ವಸಹಾಯ ಸಂಘಗಳ ಪ್ರತಿ ನಿಧಿಗಳು ಗುರುವಾರದಿಂದ 2021ರ ಫೆಬ್ರವರಿ 14ರವರೆಗೆ ಮೈಸೂರು ನಗ ರದ ಎಲ್ಲಾ 65 ವಾರ್ಡುಗಳಲ್ಲಿ ಮನೆ-ಮನೆಗೆ ತೆರಳುವ 220 ಮಂದಿ ಕಾರ್ಯ ಕರ್ತೆಯರು ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರ್ತಿಸಿ ಮಾಹಿತಿ ಕಲೆ ಹಾಕಿ ‘ಏಚಿಡಿಟಿಚಿಣಚಿಞಚಿ ಊ2ಊ ಅhiಟಜಡಿeಟಿ Suಡಿveಥಿ ಂಠಿಠಿ’ಗೆ ಅಪ್‍ಡೇಟ್ ಮಾಡುವರು ಎಂದು ಮೈಸೂರು ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಸಂಜೆ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಶಿಶು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮೀಕ್ಷೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿರುವುದಾಗಿ ತಿಳಿಸಿದರು. 6ರಿಂದ 14 ವರ್ಷದ ಮಕ್ಕಳ ಮಾಹಿತಿ, ಶಾಲೆಗೆ ದಾಖಲಾಗಿರುವ, ವಲಸೆ ಮಕ್ಕಳು, ಕೈಗಾರಿಕಾ ಸ್ಥಳ, ಕೃಷಿ ಕಾರ್ಮಿಕ ವಲಯ, ಕೊಳಗೇರಿ, ಬಸ್-ರೈಲು ನಿಲ್ದಾಣ, ಧಾರ್ಮಿಕ ಕೇಂದ್ರ, ಅನಾಥಾಶ್ರಮ, ಜೈಲು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರ್ತಿಸಿ ಗಣತಿ ಕಾರ್ಯ ನಡೆಸಬೇಕಾಗಿದೆ. ಈ ಕಾರ್ಯಕ್ಕೆ ಅಂಗನವಾಡಿ ಕಾರ್ಯ ಕರ್ತರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಎನ್‍ಜಿಓಗಳನ್ನು ನೇಮಿಸಿ ಗೌರವ ಧನ ಪಾವತಿಸಲು ಬಿಲ್ಲನ್ನು ಪಾಲಿಕೆಗೆ ಸಲ್ಲಿಸುವಂತೆಯೂ ಶಶಿಕುಮಾರ್ ತಿಳಿಸಿದ್ದಾರೆ.

 

 

Translate »