ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆ
ಮೈಸೂರು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆ

December 24, 2020

ಮೈಸೂರು, ಡಿ.23-ಶ್ರೀ ಶ್ರೀ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ವರಹಾ ದ್ವಾರ ವ್ಯಾಪಾರಿಗಳ ಸಂಘದ ವತಿಯಿಂದ ಮೈಸೂರು ರಾಜವಂಶಜ ಶ್ರೀ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ 7ನೇ ವರ್ಷದ ಪುಣ್ಯಸ್ಮರಣೆಯನ್ನು ಮೈಸೂರು ಅರಮನೆಯ ವರಹಾ ದ್ವಾರದ ಬಳಿ ಒಡೆ ಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಭಾರತ ದಲ್ಲೇ ಮೈಸೂರು ಸಂಸ್ಥಾನ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಕನ್ನಡ ಮತ್ತು ಸಾಹಿ ತ್ಯಕ ಪರಂಪರೆಗೆ ಕೊಡುಗೆ ನೀಡಿದೆ. ಮೈಸೂ ರಿನ ಸಂಸದರಾಗಿ, ರಾಜ್ಯ ಕ್ರಿಕೆಟ್ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನ ಪೆÇೀಷಕರಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಡಿಗೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ದಸರಾ ಧಾರ್ಮಿಕ ಪರಂಪರೆ ಯನ್ನು ಭಕ್ತಿ, ಗೌರವಗಳಿಂದ ಮುನ್ನಡೆ ಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ಇವರೊಬ್ಬ ನಿರ್ಗರ್ವಿ, ಜನಮುಖಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವದವ ರಾಗಿದ್ದರು ಎಂದರು. ಈ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಬ್ಯಾಂಕ್ ನಿರ್ದೇಶಕ, ಸಂಘದ ಗೌರವಾ ಧ್ಯಕ್ಷ ಎಂ.ಕೆ.ಅಶೋಕ, ವ್ಯಾಪಾರಿಗಳ ಸಂಘದ ಅಧ್ಯಕ್ಷ ರಸೂಲ್, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕೆಎಂಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಕುಂಚಿಟಿಗರ ಸಂಘದ ನಿರ್ದೇಶಕರಾದ ರವಿ, ಕರುಣಾ ಮಯಿ ಸಂಘದ ಅಧ್ಯಕ್ಷ ಎಸ್.ಎನ್. ರಾಜೇಶ್, ರಾಕೇಶ್ ಕುಂಚಿಟಿಗ, ರವಿ ಕುಂಚಿಟಿಗ ಮತ್ತಿತರರು ಹಾಜರಿದ್ದರು.

Translate »