ಮೈಸೂರು, ಡಿ.23(ಪಿಎಂ)- ಮೈಸೂ ರಿನ ಕಳಸ್ತವಾಡಿ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‍ಕೆಡಿಆರ್‍ಡಿಪಿ) ಸಂಕಲ್ಪ ಸೌಧದ ಆವ ರಣದಲ್ಲಿ ಕೃಷಿ ಯಾಂತ್ರೀಕರಣ ದಕ್ಷಿಣ ವಲಯ ನಿರ್ದೇಶಕರ ಕಚೇರಿ ಹಾಗೂ ಕೃಷಿ ಕಟಾವು ಯಂತ್ರಗಳ ಕೇಂದ್ರದ (ಹಾರ್ವೆಸ್ಟರ್ ಬ್ಯಾಂಕ್) ನೂತನ ಕಟ್ಟಡ ಬುಧವಾರ ಉದ್ಘಾಟನೆಗೊಂಡಿತು.
ಉದ್ಘಾಟನೆ ನೆರವೇರಿಸಿದ ಎಸ್‍ಕೆಡಿ ಆರ್‍ಡಿಪಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ.ಎಲ್.ಹೆಚ್.ಮಂಜುನಾಥ್ ಮಾತ ನಾಡಿ, ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆಯವರು ಮೈಸೂರು ಮತ್ತು ದಾವಣಗೆರೆಯಲ್ಲಿ ಹಾರ್ವೆಸ್ಟರ್ ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿದ್ದಾರೆ. ಮೈಸೂರಿ ನಲ್ಲಿ ಹಾರ್ವೆಸ್ಟರ್ ಬ್ಯಾಂಕ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಬ್ಯಾಂಕ್‍ಗೆ ಸಂಬಂಧಿಸಿದ ಕಚೇರಿ ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಯಂತ್ರಶ್ರೀ ಕಾರ್ಯಕ್ರಮ ದಡಿ ಹಾರ್ವೆಸ್ಟರ್ ಬ್ಯಾಂಕ್ ಕಾರ್ಯನಿರ್ವ ಹಿಸಲಿದ್ದು, ಆ ಮೂಲಕ ರೈತರಿಗೆ ಕಟಾವು ಯಂತ್ರಗಳನ್ನು ಕಡಿಮೆ ಬೆಲೆಗೆ ಬಾಡಿಗೆ ನೀಡುವ ವ್ಯವಸ್ಥೆ ಮಾಡಿದ್ದೇವೆ. ಯಂತ್ರಶ್ರೀ ಕಾರ್ಯಕ್ರಮದ ಮೂಲಕ ಭತ್ತ ಬೇಸಾಯ ವನ್ನು ಸಂಪೂರ್ಣ ಯಾಂತ್ರೀಕರಣಗೊಳಿ ಸಲು ರೈತರಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ಭತ್ತ ಬೇಸಾಯದಲ್ಲಿ ರೈತ ರಿಗೆ ಇಂದು ಹೆಚ್ಚು ಲಾಭ ದೊರೆಯು ತ್ತಿಲ್ಲ. ಹೀಗಾಗಿ ಯಂತ್ರಗಳ ಬಳಕೆ ಮತ್ತು ಶ್ರೀಪದ್ಧತಿ (ಭತ್ತ ಬೆಳೆ ಪದ್ಧತಿ) ಬೇಸಾಯ ವಿಧಾನ ಅನುಸರಿಸುವುದರಿಂದ ರೈತರು ಹೆಚ್ಚಿನ ಆದಾಯ ಹಾಗೂ ಇಳುವರಿ ಪಡೆಯಬಹುದು ಎಂದರು.
ಇದಲ್ಲದೆ, ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಕೃಷಿ ಯಂತ್ರೋ ಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಂದ ಈವರೆಗೆ 20 ಲಕ್ಷ ರೈತರಿಗೆ ಅನುಕೂಲವಾಗಿದೆ. ಸಂಸ್ಥೆಯ ಎರಡು ಹಾರ್ವೆಸ್ಟರ್ ಬ್ಯಾಂಕ್‍ಗಳು ಪ್ರಾರಂಭದ ಬಳಿಕ ಸುಮಾರು ಒಂದೂವರೆ ಲಕ್ಷ ರೈತರು ಕೊಯ್ಲು ಯಂತ್ರಗಳನ್ನು ಬಳಸಿಕೊಂಡಿದ್ದಾರೆ. ಒಂದು ಹಾರ್ವೆಸ್ಟರ್ ಯಂತ್ರಕ್ಕೆ 25 ಲಕ್ಷ ರೂ. ಬೆಲೆ ಇದೆ. ಇದು ಒಂದು ಗಂಟೆಗೆ ಒಂದು ಎಕರೆ ಹಾರ್ವೆಸ್ಟ್ (ಕೊಯ್ಲು) ಮಾಡಲಿದೆ ಎಂದು ತಿಳಿಸಿದರು.
`ಯಂತ್ರಶ್ರೀ ಯೋಧ’ ಎಂಬ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾ ಗಲೇ ಹಲವು ಮಂದಿ ನೇಮಕಗೊಂಡಿ ದ್ದಾರೆ. ಇವರು ತಮ್ಮ ಗ್ರಾಮದಲ್ಲಿ ರೈತರನ್ನು ಸಂಪರ್ಕಿಸಿ ಕೃಷಿಯಲ್ಲಿ ಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸಲಿದ್ದಾರೆ. ಇದರ ಜೊತೆಗೆ ಪ್ರತಿ ಗ್ರಾಮದಲ್ಲಿ ಸೇವಾ ಪ್ರತಿನಿಧಿ ನಿಯೋ ಜಿಸಿದ್ದು, ಯಂತ್ರಶ್ರೀ ಯೋಧರನ್ನು ಪ್ರತಿ ಗ್ರಾಮದಲ್ಲೂ ನಿಯೋಜಿಸಲು ಉದ್ದೇ ಶಿಸಲಾಗಿದೆ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಕೃಷಿ ಯಾಂತ್ರೀ ಕರಣ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಎಂ.ಕೆ.ಅಬ್ರಹಾಂ ಮಾತನಾಡಿ, ಮೈಸೂರಿನ ಹಾರ್ವೆಸ್ಟರ್ ಬ್ಯಾಂಕ್ ಸೌಲಭ್ಯ ವನ್ನು ಮೈಸೂರು ಮತ್ತು ಮಂಡ್ಯ ಸೇರಿ ದಂತೆ ಸುತ್ತಮುತ್ತಲ ಜಿಲ್ಲೆಗಳ ರೈತರು ಪಡೆದು ಕೊಳ್ಳಬಹುದು. ಜೊತೆಗೆ 2014ರಿಂದ ರಾಜ್ಯ ಸರ್ಕಾರದ ಕೃಷಿ ಇಲಾಖೆ ಸಹಭಾಗಿತ್ವ ದಲ್ಲಿ ರಾಜ್ಯದಲ್ಲಿ ಆರಂಭಿಸಿರುವ ಕೃಷಿ ಯಂತ್ರ ಕೇಂದ್ರಗಳ ಪ್ರಯೋಜನವನ್ನೂ ರೈತರು ಪಡೆದುಕೊಳ್ಳಬಹುದು. ರಾಜ್ಯದಲ್ಲಿ 164 ಕೃಷಿ ಯಂತ್ರ ಕೇಂದ್ರಗಳು (ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ) ಇದ್ದು, ಈ ಪೈಕಿ ಯೋಜ ನೆಯ ಕೃಷಿ ಯಾಂತ್ರೀಕರಣ ದಕ್ಷಿಣ ವಲಯ ಕಚೇರಿ ವ್ಯಾಪ್ತಿಯಲ್ಲಿ 55 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಕೇಂದ್ರದಲ್ಲಿ 1 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳು ಹಾಗೂ 5 ಕಂಬೈಡ್ ಹಾರ್ವೆಸ್ಟರ್ ಯಂತ್ರ ಗಳು ಲಭ್ಯವಿವೆ ಎಂದು ವಿವರಿಸಿದರು.
ಹೊರ ರಾಜ್ಯದ ಯಂತ್ರಗಳಿಗೆ ದುಬಾರಿ ಬಾಡಿಗೆ ಇರುವ ಹಿನ್ನೆಲೆಯಲ್ಲಿ ರೈತರಿಗೆ ನ್ಯಾಯಯುತ ಬಾಡಿಗೆ ದರದಲ್ಲಿ ಭತ್ತ ಕಟಾವಿಗೆ ಯಂತ್ರಗಳು ದೊರಕಿಸಿ ಕೊಡುವ ಉದ್ದೇಶವನ್ನು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮತ್ತು ಮೈಸೂ ರಿನಲ್ಲಿ ಹಾರ್ವೆಸ್ಟರ್ ಬ್ಯಾಂಕ್‍ಗಳನ್ನು ಆರಂ ಭಿಸಲಾಗಿದೆ ಎಂದು ತಿಳಿಸಿದರು.
ನೂತನ ಕಟ್ಟಡ: ನೂತನ ಕಟ್ಟಡ ಸುಮಾರು 4 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ನೆಲ ಅಂತಸ್ತು ಮತ್ತು ಮೊದಲ ಅಂತಸ್ತು ಒಳಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇ ಶಿಕ ನಿರ್ದೇಶಕ ಪಿ.ಗಂಗಾಧರ ರೈ, ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗ ನಾಳ, ಕೃಷಿ ಯಾಂತ್ರೀಕರಣ ದಕ್ಷಿಣ ವಲ ಯದ ನಿರ್ದೇಶಕ ದಿನೇಶ್, ಹಾರ್ವೆಸ್ಟರ್ ಬ್ಯಾಂಕಿನ ಕೃಷಿ ಅಧಿಕಾರಿ ಸುನಿಲ್ ಮತ್ತಿ ತರರು ಹಾಜರಿದ್ದರು.