ಮೈಸೂರು, ಡಿ.23-ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದು, ತಿ.ನರಸೀಪುರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿ ರುವ ಸೋಮಶೇಖರ್ ಎಂಬುವರ ಪುತ್ರಿ ಕಾವ್ಯಾ(19) ನಾಪತ್ತೆಯಾದವ ರಾಗಿದ್ದು, ತಂದೆ, ತಾಯಿ ಅಂಗಡಿ ವ್ಯಾಪಾರಕ್ಕಾಗಿ ತಿ.ನರಸೀಪುರಕ್ಕೆ ತೆರಳಿದ್ದಾಗ ಡಿ.20ರಂದು ಮನೆಯಲ್ಲಿದ್ದ ತಮ್ಮ ಮತ್ತು ತಂಗಿಯನ್ನು ತಿಂಡಿ ತರಲು ಅಂಗಡಿಗೆ ಕಳುಹಿಸಿದ ಕಾವ್ಯಾ, 130 ಗ್ರಾಂ ತೂಕದ ಚಿನ್ನಾಭರಣ ಮತ್ತು 1 ಲಕ್ಷ ರೂ. ನಗದು, ಶೈಕ್ಷಣಿಕ ದಾಖಲೆಗಳು ಹಾಗೂ ತನ್ನ ಆಧಾರ್ ಕಾರ್ಡ್‍ನೊಂದಿಗೆ ನಾಪತ್ತೆಯಾಗಿದ್ದಾಳೆ. ಈಕೆಯನ್ನು ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾಂತರಾಜು ಎಂಬಾತ ಕರೆದುಕೊಂಡು ಹೋಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿ ಸೋಮಶೇಖರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 0821-2418339 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.