ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆ
ಮೈಸೂರು

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆ

December 24, 2020

ಮೈಸೂರು, ಡಿ.23-ಮೈಸೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ನಿವೃತ್ತ ಡಿವೈಎಸ್ಪಿ ಎಂ.ಸಿ.ಮರಿಸ್ವಾಮಿ ಪುನರಾಯ್ಕೆಯಾಗಿ ದ್ದಾರೆ. ಉಪಾಧ್ಯಕ್ಷರಾಗಿ ಛಾಯಾಪತಿ, ಬಿ.ಎನ್.ಆನಂದರಾವ್, ಎಸ್.ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಶಿವಕುಮಾರಸ್ವಾಮಿ, ಸಹ ಕಾರ್ಯದರ್ಶಿಯಾಗಿ ಕೆ.ಪಟ್ಟಾಭಿರಾಮ್, ಜಂಟಿ ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ, ಖಜಾಂಚಿಯಾಗಿ ಆಲನಹಳ್ಳಿ ಎಂ.ರಾಜು, ಸಹ ಖಜಾಂಚಿ ಯಾಗಿ ನಾಗಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾಗಿ ಮಂಚಪ್ಪ, ಆರ್.ಎನ್.ಶಂಕರಲಿಂಗೇ ಗೌಡ, ಎಂ.ಪುಟ್ಟಸ್ವಾಮಿ, ಪತ್ರಿಕಾ ಕಾರ್ಯದರ್ಶಿಗಳಾಗಿ ಜೆ.ಚಾಮಯ್ಯ, ನಾರಾಯಣಸ್ವಾಮಿ, ಡಿ.ಶಿವರಾಂ, ಸ್ನೇಹ ಹಸ್ತ ಕಾರ್ಯದರ್ಶಿಯಾಗಿ ವಿ.ರಾಜು, ಮಹಿಳಾ ಸಂಘಟನಾ ಕಾರ್ಯ ದರ್ಶಿಯಾಗಿ ಕಮಲಮ್ಮ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ರಾಚಯ್ಯ, ಸಯ್ಯದ್ ಅಮೀರ್, ಎಂ.ಬಸಪ್ಪ, ಬಿಳಿಕೆರೆ ಮಹದೇವು, ಪಿ.ಎಲ್.ಚಿನ್ನಸ್ವಾಮಿ, ಆನಂದ್, ಜಯಪಾಲ್, ಬಿ.ಜವರಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Translate »