ಮೈಸೂರು ಜಿಲ್ಲೆ; ಕೊರೊನಾಗೆ ಇಬ್ಬರು ಸಾವು
ಮೈಸೂರು

ಮೈಸೂರು ಜಿಲ್ಲೆ; ಕೊರೊನಾಗೆ ಇಬ್ಬರು ಸಾವು

December 24, 2020

ಮೈಸೂರು, ಡಿ.23(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಬುಧ ವಾರ ಸೋಂಕಿತರಷ್ಟೇ ಪ್ರಮಾಣದಲ್ಲಿ ಗುಣವಾದವರೂ ಇದ್ದರು. 43 ಮಂದಿಗೆ ಸೋಂಕು ತಗುಲಿದ್ದರೆ, 41 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 51,957 ಮಂದಿಗೆ ಸೋಂಕು ತಗುಲಿದಂತಾಗಿದೆ. ಅದೇ ವೇಳೆ 50,505 ಮಂದಿ ಗುಣ ಕಂಡಿದ್ದಾರೆ. 444 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಕೊರೊನಾ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 1008ಕ್ಕೇರಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಂಕಿಯಿಂದ ಮೂರಂಕಿಗೆ ಇಳಿದಿದೆ. ಬುಧವಾರ ಗುಣವಾ ದವರ ಸಂಖ್ಯೆಯೇ ಹೆಚ್ಚಿತ್ತು. ಬುಧವಾರ 958 ಮಂದಿಗೆ ಹೊಸ ದಾಗಿ ಸೋಂಕು ತಗುಲಿದೆ. 1,206 ಮಂದಿಗೆ ಗುಣವಾಗಿದೆ. ಇದ ರೊಟ್ಟಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,12,340ಕ್ಕೆ ಏರಿಕೆ ಯಾಗಿದೆ, 8,86,547 ಮಂದಿ ಗುಣ ಕಂಡಿದ್ದಾರೆ. ಇನ್ನೂ 13,736 ಸಕ್ರಿಯ ಪ್ರಕರಣಗಳಿವೆ. ಇಂದು 9 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 12,038 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಬಾಗಲಕೋಟೆ 1, ಬಳ್ಳಾರಿ 20, ಬೆಳ ಗಾವಿ 22, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 550, ಬೀದರ್ 6, ಚಾಮರಾಜನಗರ 27, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 7, ಚಿತ್ರದುರ್ಗ 18, ದಕ್ಷಿಣ ಕನ್ನಡ 14, ದಾವಣ ಗೆರೆ 7, ಧಾರವಾಡ 12, ಗದಗ 8, ಹಾಸನ 26, ಹಾವೇರಿ 2, ಕಲಬುರಗಿ 18, ಕೊಡಗು 1, ಕೋಲಾರ 14, ಕೊಪ್ಪಳ 5, ಮಂಡ್ಯ 15, ಮೈಸೂರು 43, ರಾಯಚೂರು 7, ರಾಮನಗರ 8, ಶಿವಮೊಗ್ಗ 13, ತುಮಕೂರು 50, ಉಡುಪಿ 8, ಉತ್ತರಕನ್ನಡ 13, ವಿಜಯಪುರ 17, ಯಾದಗಿರಿ 2 ಪ್ರಕರಣಗಳು ವರದಿಯಾಗಿವೆ.

 

 

Translate »