ಶಾಸಕ ಎಲ್.ನಾಗೇಂದ್ರರಿಂದ ಭೋಜನಾಲಯ ಕಾಮಗಾರಿಗೆ ಚಾಲನೆ
ಮೈಸೂರು

ಶಾಸಕ ಎಲ್.ನಾಗೇಂದ್ರರಿಂದ ಭೋಜನಾಲಯ ಕಾಮಗಾರಿಗೆ ಚಾಲನೆ

December 24, 2020

ಮೈಸೂರು, ಡಿ.23(ಪಿಎಂ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಕುಂಚಿಟಿಗರ ಧರ್ಮರಾರಾಯಿಣಿ ಶ್ರೀಮತಿ ಆಲಮ್ಮನವರ ಛತ್ರದ ಆವರಣದಲ್ಲಿ ಶಾಸ ಕರ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಂಗಳವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಶ್ರೀಮತಿ ಆಲಮ್ಮನವರು ಸಮಾಜಕ್ಕೆ ಹಾಗೂ ಅವರ ಜನಾಂಗಕ್ಕೆ ನೀಡಿದ ಸೇವೆ ಅಪಾರ. ಅವರ ಧರ್ಮ ಛತ್ರಕ್ಕೆ ಭೋಜನ ಮಂದಿರದ ಕೊರತೆ ಇರುವುದು ಕುಂಚಿಟಿಗರ ಸಂಘದ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದರು. ಕೂಡಲೇ ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದೇನೆ. ಉಳಿದ ಕಾಮ ಗಾರಿಗೆ ಹಣದ ಕೊರತೆ ಉಂಟಾದರೆ ಪಕ್ಷದ ಸಂಸದರು ಅಥವಾ ವಿಧಾನಪರಿಷತ್ ಸದ ಸ್ಯರ ಅನುದಾನದಲ್ಲಿ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ನಂತರ ಸಂಘದ ಖಜಾಂಚಿ ಎನ್. ಪ್ರದೀಪ್‍ಕುಮಾರ್ ಸಂಘದ ಪರವಾಗಿ ಶಾಸಕರಿಗೆ ಅಭಿನಂದಿಸಿದರು. ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ನಗರ ಬಿಜೆಪಿ ಉಪಾಧ್ಯಕ್ಷ ಶ್ರೀಹರ್ಷ, ಪ್ರಧಾನ ಕಾರ್ಯ ದರ್ಶಿ ರಮೇಶ್, ಆಶ್ರಯ ಸಮಿತಿ ಸದಸ್ಯ ಅನೂಜ್, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಎಸ್‍ಟಿ ಮೋರ್ಚಾ ಮುಖಂಡರಾದ ಪ್ರೇಮ ಕುಮಾರ್, ಬಿಜೆಪಿ ಮುಖಂಡರಾದ, ಮೈ. ಪು.ರಾಜೇಶ್, ರಂಗಸ್ವಾಮಿ, ಚಿಕ್ಕವೆಂಕಟು, ಪರಮೇಶ್‍ಗೌಡ, ಭದ್ರಿನಾಥ್, ರಾಜೇಂದ್ರ. ಚರಣ್, ಯೋಗಿ, ರಮೇಶ್, ಶ್ರೀಖಂಡೇಶ್, ಅರವಿಂದ, ಹರೀಶ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Translate »