ಡಿ.28ಕ್ಕೆ ಸಾವರಿನ್ ಗೋಲ್ಡ್ ಬಾಂಡ್ ಪ್ರಾರಂಭ
ಮೈಸೂರು

ಡಿ.28ಕ್ಕೆ ಸಾವರಿನ್ ಗೋಲ್ಡ್ ಬಾಂಡ್ ಪ್ರಾರಂಭ

December 24, 2020

ಮೈಸೂರು, ಡಿ.23-2020-2021ನೇ ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಪ್ರಾರಂಭವಾಗುತ್ತಿದ್ದು, ಗ್ರಾಹಕರು ಡಿ.28ರಿಂದ ಜ.1ರ ತನಕ ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್‍ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು. ಸಾವರಿನ್‍ಗೋಲ್ಡ್ ಬಾಂಡ್ ವೈಶಿಷ್ಟ್ಯಗಳೆಂದರೆ ಕನಿಷ್ಠ ಹೂಡಿಕೆ 1 ಗ್ರಾಂ ಆಗಿದ್ದು, ವ್ಯಕ್ತಿ ಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ. ಬಾಂಡ್ ಅವಧಿ 8 ವರ್ಷ. ಬಾಂಡ್ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ದರ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ.2.5ರಷ್ಟು ನಿಶ್ಚಿತ ಬಡ್ಡಿಯೂ ಲಭ್ಯ. (ಅರ್ಧ ವಾರ್ಷಿಕ-ವರ್ಷಕ್ಕೆ 2 ಬಾರಿ). 5,6, ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 0821-2417308,2017307, 9845107947ಗೆ ಸಂಪರ್ಕಿಸಬಹುದು.

 

 

 

 

Translate »