ರಾಜ್ಯಗಳ ವರದಿ ಆಧರಿಸಿ ಮುಂದಿನ ಮಾರ್ಗಸೂಚಿ ನಿರ್ಧಾರ
ಮೈಸೂರು

ರಾಜ್ಯಗಳ ವರದಿ ಆಧರಿಸಿ ಮುಂದಿನ ಮಾರ್ಗಸೂಚಿ ನಿರ್ಧಾರ

May 12, 2020

ನವದೆಹಲಿ, ಮೇ 11- ಎಲ್ಲಾ ರಾಜ್ಯಗಳು ವಾರದೊಳ ಗಾಗಿ ವಲಯವಾರು ಕೊರೊನಾ ಸಂಬಂಧಪಟ್ಟ ವರದಿ ಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕೆಂದು ಸೂಚಿಸಿದ ಪ್ರಧಾನಿ ಮೋದಿಯವರು, ರಾಜ್ಯಗಳಿಂದ ಬರುವ ವರದಿ ಹಾಗೂ ಇಂದು ಸಿಎಂಗಳ ಜೊತೆ ನಡೆದ ಸಂವಾದದಲ್ಲಿ ಬಂದ ಸಲಹೆಗಳನ್ನು ಕ್ರೋಢೀಕರಿಸಿ ಮಾರ್ಗಸೂಚಿ ರಚಿಸಲಾಗುತ್ತದೆ ಎಂದು ತಿಳಿಸಿದರು.

ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯಕ್ಕೆ ಕೇವಲ 6 ದಿನಗಳು ಮಾತ್ರ ಉಳಿದಿದ್ದು, ಕೊರೊನಾ ನಿಯಂತ್ರ ಣಕ್ಕೆ ಮುಂದಿನ ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಸೋಮವಾರ ಮಧ್ಯಾಹ್ನ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಮಾತನಾಡಿದ ಮೋದಿ, ಲಾಕ್‍ಡೌನ್ ಸುದೀರ್ಘ ಕಾಲ ಮಾಡಲಾಗುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಅದೊಂದು ಆಯುಧ ಅಷ್ಟೇ. ಆದರೆ, ಲಾಕ್‍ಡೌನ್ ನಿಂದಾಗಿ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹರಡುವು ದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ. ಆದರೂ ಇನ್ನು ಮುಂದೆಯೂ ಕೊರೊನಾ ಹರಡುವಿಕೆ ಬಗ್ಗೆ ತೀವ್ರವಾದ ನಿಗಾ ವಹಿಸಿ. ಸ್ಥಗಿತಗೊಂಡಿ ರುವ ಕೆಲಸಗಳನ್ನು ಆರಂಭಿಸಿ, ಸೋಂಕು ಹರಡದಂತೆ ಯಾವ ಹಾದಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸಿ ಎಂದ ಅವರು, ಇಂದಿನ ಬಿಕ್ಕಟ್ಟಿನಿಂದ ರಕ್ಷಿಸಿ ಕೊಳ್ಳುವಲ್ಲಿ ಭಾರತ ಬಹಳ ಮಟ್ಟಿಗೆ ಯಶಸ್ವಿಯಾಗಿದೆ. ರಾಜ್ಯಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿವೆ. ಒಬ್ಬರಿಂದೊಬ್ಬರಿಗೆ ಎರಡು ಗಜ ಅಂತರವಿರಬೇಕು ಎಂಬ ನಿಯಮ ಸಡಿಲವಾಗಿದ್ದರೆ ಬಿಕ್ಕಟ್ಟು ತೀವ್ರಗೊಳ್ಳುತ್ತಿತ್ತು. ಲಾಕ್‍ಡೌನ್ ನನ್ನು ನಿಭಾಯಿಸುವುದು ಬಹಳ ದೊಡ್ಡ ವಿಷಯ. ಇದರಲ್ಲಿ ಎಲ್ಲರದ್ದೂ ಪ್ರಮುಖ ಪಾತ್ರವಿದೆ. ನಾವು ನಮ್ಮ ಪ್ರಯತ್ನದ ಜೊತೆಗೆ ಮನಸ್ಸು ಮಾಡಿ ಕೆಲವು ನಿರ್ಧಾರಗಳನ್ನು ಬದಲಾಯಿಸಬೇಕಾಗಿದೆ ಎಂದರು. ಲಾಕ್‍ಡೌನ್ ಸಡಿಲಿಕೆ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ದೇಶದ ಜನರ ಇಚ್ಛೆಗೆ ತಕ್ಕಂತೆ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು. ಸಂಕಷ್ಟದಲ್ಲಿದ್ದವರನ್ನು ಅವರವರ ಮನೆಗೆ ತಲುಪಿಸುವ ಉದ್ದೇಶದಿಂದ ಲಾಕ್‍ಡೌನ್ ಸಡಿಲ ಮಾಡಲಾಯಿತು. ಎಲ್ಲರೂ ಅವರವರು ಇರುವ ಸ್ಥಳದಲ್ಲೇ ಇರಿ ಎಂದು ಹೇಳಿದ್ದೆವು. ಆದರೆ, ಜನರು ತಮ್ಮ ಮನೆಗಳಿಗೆ ಹೋಗಲೇಬೇಕು ಎಂದು ಹಠ ಹಿಡಿದರು. ಚಲನೆ ಎಂಬುದು ಮನುಷ್ಯನ ಸಹಜ ಗುಣ. ಅದರಿಂದಾಗಿ ಲಾಕ್‍ಡೌನ್ ಸಡಿಲ ಮಾಡಿ ಜನರನ್ನು ಅವರ ಮನೆಗೆ ಹೋಗಲು ಅವಕಾಶ ನೀಡಲಾಯಿತು ಎಂದರು. ಕೊರೊನಾ ವೈರಸ್ ನಿಯಂತ್ರಿಸಲು ಭಾರತ ತೆಗೆದುಕೊಂಡ ಕ್ರಮಗಳಿಗೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಎಲ್ಲಾ ರಾಜ್ಯಗಳ ಸಹಕಾರದೊಂದಿಗೆ ಅದನ್ನು ಸಾಧಿಸ ಲಾಯಿತು ಎಂದ ಅವರು, ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆ ಗಳು ಆರಂಭವಾಗಿದ್ದು, ಹಂತಹಂತವಾಗಿ ಸಾಮಾನ್ಯ ಸ್ಥಿತಿಗೆ ತರಲಾಗುವುದು. ಆದರೆ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಂಡೇ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Translate »