ಯಾವುದೇ ಸಾಧನೆಗೆ ತಾರತಮ್ಯವಿಲ್ಲ,  ಅದಕ್ಕೆ ಅಗತ್ಯವಿರುವ ತಯಾರಿ ಮುಖ್ಯ
ಮೈಸೂರು

ಯಾವುದೇ ಸಾಧನೆಗೆ ತಾರತಮ್ಯವಿಲ್ಲ, ಅದಕ್ಕೆ ಅಗತ್ಯವಿರುವ ತಯಾರಿ ಮುಖ್ಯ

August 24, 2021

ಮೈಸೂರು,ಆ.23-ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿ ಯಾಗುತ್ತಾರೆ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಟಿ.ಹೀರಾಲಾಲ್ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾ ತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಜ್ಞಾನೋದಯ ಪದವಿ ಪೂರ್ವ ಕಾಲೇ ಜಿನ (ಜ್ಞಾನಶಾರದಾ) ಶ್ರೀ ವಿದ್ಯಾ ತೀರ್ಥ ಇನ್ಸಿಟಿಟ್ಯೂಟ್ ಆಫ್ ಕಲ್ಚರ್ ಸಹಯೋಗದಲ್ಲಿ ಆಯೋಜಿಸಿದ್ದ 26 ದಿನಗಳ ಪಿಯು-ಸಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಶುಭ ಹಾರೈಸಿ ಅವರು ಮಾತನಾಡಿದರು.

ಎಲ್ಲರಲ್ಲೂ ಜಾಣತನ ಇದ್ದೇ ಇರುತ್ತದೆ. ಇದರೊಟ್ಟಿಗೆ ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಅಧ್ಯಾಪಕನೋ, ಎಂಜಿ ನಿಯರೋ, ವೈದ್ಯನೋ ಅಥವಾ ಸಾರ್ವಜನಿಕ ಸೇವಕನೋ ಎನ್ನುವುದನ್ನು ನಿರ್ಧರಿಸಿಕೊಂಡು ತಯಾರಿ ಮಾಡಿಕೊಳ್ಳಿ. ನಾನು ಹಳ್ಳಿಯಿಂದ ಬಂದವನು. ನನ್ನ ತಂದೆ ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷರಾಗಿದ್ದವರು. ಆದರೆ ಶಿಕ್ಷಣವೇ ನನ್ನ ಮೊದಲ ಆದ್ಯತೆಯಾಗಿತ್ತು. ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮ ದಲ್ಲಿಯೇ ಶಿಕ್ಷಣ ಪಡೆದು ನಂತರ ಕೃಷಿಯಲ್ಲಿ ಪದವಿ ಪಡೆದು ಐಎಫ್‍ಎಸ್ ಪರೀಕ್ಷೆಯನ್ನು 24ನೇ ರ್ಯಾಂಕ್ ನೊಂದಿಗೆ ಉತ್ತೀರ್ಣನಾದೆ. ಅಂದರೆ ನಿಮ್ಮ ಗುರಿ, ಅಧ್ಯ ಯನದ ಕ್ರಮದಿಂದಲೇ ಬದುಕು ಕಟ್ಟಿಕೊಳ್ಳಬಹುದೇ ಹೊರತು ಅದೃಷ್ಟದಿಂದ ಅಲ್ಲವೇ ಅಲ್ಲ ಎಂದು ನುಡಿದರು.

ಗೂಗಲ್ ಎನ್ನುವುದು ಈಗ ಜ್ಞಾನದ ಆಗರ. ಇಂಟ ರ್ನೆಟ್ ಇದಕ್ಕೆ ಬೇಕಾದ ಪೂರಕ ಮಾರ್ಗ. ಹಿಂದೆಯೆಲ್ಲಾ ಮಾಹಿತಿಗೆ ಗ್ರಂಥಾಲಯಗಳಿಗೆ ಹೋಗಿ ಅಧ್ಯಯನ ಮಾಡಬೇಕಾಗಿತ್ತು. ತಂದೆ ತಾಯಿ ಬಿಟ್ಟು ಬೇರೆಲ್ಲವೂ ಇಂಟರ್ನೆಟ್ನಲ್ಲೇ ಸಿಗುತ್ತದೆ ಎನ್ನುವ ಪರಿಸ್ಥಿತಿಯಿದೆ. ಈಗ ಬೆರಳ ತುದಿಯಲ್ಲೇ ಮಾಹಿತಿ ಸಿಗುವುದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಒಮ್ಮೆ ಮರ ಕಡಿಯಲು ವ್ಯಕ್ತಿಯೊಬ್ಬ 8ರಿಂದ 10 ಗಂಟೆ ತೆಗೆದುಕೊಂಡ. ಏಕೆಂದು ನೋಡಿದರೆ ಗರಗಸ ಮೊಂಡಾ ಗಿತ್ತು. ಅರ್ಧಗಂಟೆ ಅದಕ್ಕೆ ಸಾಣೆ ಹಿಡಿದ ನಂತರ ಮರ ಕತ್ತರಿಸಿದರೆ ಅರ್ಧ ಗಂಟೆಯಲ್ಲೇ ಕೆಲಸ ಮುಗಿಯಿತು. ನಿಮ್ಮ ಕೌಶಲ್ಯಗಳು ನಿಂತ ನೀರಾಗದಿರಲಿ. ಅವುಗಳಿಗೆ ಆಗಾಗ ಸಾಣೆ ಹಿಡಿಯುತ್ತಾ ಇರಿ. ಇದರಿಂದ ಖಂಡಿತಾ ನಿಮ್ಮಲ್ಲಿ ಬದಲಾ ವಣೆ ಕಾಣುತ್ತದೆ ಎಂದು ಹೀರಾಲಾಲ್ ಉದಾಹರಣೆ ನೀಡಿದರು.
ಯಶಸ್ಸು ಎಂದರೆ ಅಧಿಕಾರ, ದುಡ್ಡು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಅಧಿಕಾರ, ದುಡ್ಡು ಎಲ್ಲರಿಗೂ ಬರಬಹುದು. ಇದರಿಂದ ಖಂಡಿತಾ ಯಶಸ್ಸು ಸಿಗುವು ದಿಲ್ಲ. ನಿಮ್ಮ ಬಳಿ ಇರುವ ದುಡ್ಡು, ಅಧಿಕಾರವನ್ನು ಜನರ ಒಳಿತಿಗೆ ಬಳಸುವ ಮನೋಭಾವ ಬಳಸಿಕೊಂಡು ನಾಲ್ಕು ಜನ ನಿಮ್ಮಿಂದ ಖುಷಿಯಾದರೆ ಅದೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪೆÇ್ರ.ಆರ್.ರಾಜಣ್ಣ ಮಾತ ನಾಡಿ, ಯಾವುದೇ ಪರೀಕ್ಷೆ ಎದುರಿಸುವ ಮುನ್ನ ತಯಾರಿ ಮಾಡಿಕೊಳ್ಳಿ. ಜತೆಗೆ ವಿಶ್ಲೇಷಣಾತ್ಮಕವಾಗಿ ನೋಡುವು ದನ್ನು ರೂಢಿಸಿಕೊಳ್ಳಿ. ಬದ್ದತೆ ಇದ್ದರೆ ಯಶಸ್ಸು ನಿಮ್ಮದೇ ಎಂದು ಸಲಹೆ ನೀಡಿದರು. ಜ್ಞಾನ ಶಾರದಾ ಶಿಕ್ಷಣ ಸಂಸ್ಥೆಯ ಎಸ್.ವಿ. ವೆಂಕಟೇಶ್, ವಿವಿ ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್‍ಗಳಾದ ಡಾ.ಅಶೋಕ ಕಾಂಬ್ಳೆ, ಡಾ.ಷಣ್ಮುಖ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಸಿಬ್ಬಂದಿಗಳಾದ ಕೆ.ಜಿ.ಕೊಪ್ಪಲು ಗಣೇಶ್, ಹೊನ್ನೂರು ಸಿದ್ದೇಶ್ ಹಾಜರಿದ್ದರು. ಈ ವೇಳೆ 450 ಪುಟಗಳ ಡಿಜಿಟಲ್ ಹೊತ್ತಿಗೆಯನ್ನು ಟಿ.ಹೀರಾಲಾಲ್ ಬಿಡುಗಡೆ ಮಾಡಿದರು.

Translate »