ಇಂದು, ನಾಳೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ ವಿದ್ಯುತ್ ನಿಲುಗಡೆ

September 7, 2018

ಮೈಸೂರು:  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ಸೌತ್ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಂಜುಮಳಿಗೆ ವೃತ್ತ, ಲಕ್ಷ್ಮೀಪುರಂ, ವಿದ್ಯಾ ರಣ್ಯಪುರಂ, ನಾರಾಯಣ ಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾ ಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರಯ್ಯ ನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ, ಗುಂಡೂ ರಾವ್ ನಗರ, ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೈಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ.ಕೊಪ್ಪಲು, ಶಿವಪುರ, ದೇವಲಾಪುರ ಹೋಬಳಿ ಆದಿಚುಂಚನಗಿರಿ ರಸ್ತೆ, ಜೆ.ಪಿ.ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಸೆ.8ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಅಶೋಕ ರಸ್ತೆ ಮತ್ತು ಲಷ್ಕರ್ ಮೊಹಲ್ಲಾ, ತಿಲಕ ನಗರ, ಕೈಲಾಸಪುರಂ, ಮಿಷನ್ ಆಸ್ಪತ್ರೆ, ಗಾಂಧಿ ವೃತ್ತ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ.ಸ್ಟ್ರೀಟ್, ದೊಡ್ಡ ಒಕ್ಕಲಿಗರ ಬೀದಿ, ಇರ್ವಿನ್ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಒಲಂಪಿಯಾ ಟಾಕೀಸ್, ಪುಲಿಕೇಶಿ ರಸ್ತೆ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ರಾಜ್‍ಕಮಲ್ ಟಾಕೀಸ್ ಹಾಗೂ ಸಿದ್ದಿಖ್ ನಗರ, ಶ್ರೀ ಶಿವರಾತ್ರೀಶ್ವರ ನಗರ, ಕೊಲಂಬಿಯಾ ಏಷಿಯಾ, ಹನುಮಂತನಗರ, ಹುಡ್ಕೋ ‘ಡಿ’ ಲೇಔಟ್, ಕೆಎಸ್‍ಆರ್‍ಟಿಸಿ ಲೇಔಟ್, ಇಂಡಸ್ಟ್ರಿಯಲ್ ‘ಬಿ’ ಲೇಔಟ್, ಹೈವೇ ಸರ್ಕಲ್, ಸ್ಟಾರ್ ಆಫ್ ಮೈಸೂರು, ಫರಹಾ ಕಾಂಪೌಂಡ್ ಮತ್ತು ಕಾವೇರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

Translate »