ಉಕ್ಕಲಗೆರೆಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
ಮೈಸೂರು

ಉಕ್ಕಲಗೆರೆಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ

September 7, 2018

ತಿ.ನರಸೀಪುರ:  ಹಳ್ಳಿಗಾಡಿನಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಅನುಕೂಲ ಕಲ್ಪಿಸಲು ಉಕ್ಕಲಗೆರೆ ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು.

ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಹಾಗೂ ಗ್ರಾ.ಪಂ ವಿಶೇಷ ಅನುದಾನದಡಿ 20.30 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಕಛೇರಿಗಾಗಿ ನಿರ್ಮಿಸಿರುವ ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗೆ ಉತ್ತಮ ಆಡಳಿತವನ್ನು ನಡೆಸಲು ಯೋಗ್ಯವಾದ ಕಟ್ಟಡಗಳು ಅಗತ್ಯವಿದೆ ಎಂದರು.

ರಾಜಕೀಯ ಅಧಿಕಾರ ನೀಡಿದ ಸೋಮನಾಥಪುರ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉಕ್ಕಲಗೆರೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಪೂರಕ ವಾತವರಣದಲ್ಲಿ ಕೆಲಸ ಮಾಡುವ ಸದುದ್ದೇಶದಿಂದ ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಎಲ್ಲಾ ಸದಸ್ಯರು ಒಗ್ಗೂಡಿ ಹಳ್ಳಿಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿ.ಪಂ ಸದಸ್ಯನಾಗಿ ಶಾಸಕನಾದ ನಂತರ ಮೊದಲ ಬಾರಿಗೆ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಹರ್ಷ ತಂದಿದ್ದು, ಉಕ್ಕಲಗೆರೆಯನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಲು ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಸಹಕಾರ ನೀಡಬೇಕು. ಬಾಕಿಯಿರುವ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂ.ಶಾಸಕ ಎಂ.ಅಶ್ವಿನ್‍ಕುಮಾರ್ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ದೀಪಾಕುಮಾರ್, ಸ್ಪಟಿಕ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ಕುಮಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಎಸ್.ನಂಜೇಶ್, ಜಿ.ಪಂ ಎಇಇ ಎಂ.ಎನ್.ಸುರೇಶ್, ಸಹಾಯಕ ಇಂಜಿನಿಯರ್ ನಂಜುಂಡಯ್ಯ, ಕೆಆರ್‍ಐಡಿಎಲ್ ಸಹಾಯಕ ಇಂಜಿನಿಯರ್ ಆರ್.ಟಿ.ದೇವರಾಜು, ಗ್ರಾ.ಪಂ ಸದಸ್ಯರಾದ ಮುಖಂಡ ಮಲ್ಲೇಶ್, ಪವಿತ್ರಾಂಭ, ಎಂಎಲ್ ಹುಂಡಿ ಪ್ರಭುಸ್ವಾಮಿ, ನಾಗರಾಜು, ರತ್ನಮ್ಮ, ಜಿ.ವೀರಣ್ಣ, ಬೂದಹಳ್ಳಿ ಸಿದ್ದರಾಜು, ರಾಜಮ್ಮ, ರೂಪಾ, ಕೃಷ್ಣಮೂರ್ತಿ, ಎಚ್.ಪಿ.ಮಂಜುಳಾ, ಮುಖಂಡರಾದ ಶಂಭುದೇವನಪುರ ಎಂ.ರಮೇಶ್, ಸೋಮನಾಥಪುರ ಸುರೇಶ್, ಜಯಪಾಲ್ ಭರಣಿ, ಮಾವಿನಹಳ್ಳಿ ರಾಜೇಶ್, ದೀಪುದರ್ಶನ್ ಹಾಗೂ ಇನ್ನಿತರರು ಹಾಜರಿದ್ದರು.

ಯಂತ್ರಗಾರ ದುರಸ್ತಿ ನಂತರ ಕೆರೆಗೆ ನೀರು
ತಿ.ನರಸೀಪುರ: ಬನ್ನೂರು ಬಳಿ ನಂಜಾಪುರ ಏತ ನೀರಾವರಿ ಯೋಜನೆಯ ಯಂತ್ರಗಾರ ದುರಸ್ತಿಗೊಳಿಸಿದ ನಂತರ ಉಕ್ಕಲಗೆರೆ ಕರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ತಿಳಿಸಿದರು. ನಂಜಾಪುರ ಏತ ನೀರಾವರಿ ಯೋಜನೆಯ ಆರು ಪಂಪ್‍ಗಳು ಕೆಟ್ಟಿರುವುದರಿಂದ ಕೆರೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ದುರಸ್ತಿಗೆ ವಾರದೊಳಗೆ ಕ್ರಮ ಕೈಗೊಂಡು ಕೆರೆ ಸೇರಿದಂತೆ ಸುತ್ತಲಿನ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಹರಿಸಲಾಗುವುದು ಎಂದರು.

ವೇದಿಕೆಯಿಂದ ನಿರ್ಗಮಿಸುವ ವೇಳೆ ವಿಶೇಷ ಚೇತನನೊಬ್ಬ ತನಗೆ ವರ್ಷದಿಂದಲೂ ಇಲ್ಲಿನ ಪಿಡಿಒ ಅಂಗವಿಕಲರ ಸಹಾಯಧನ ಕೊಡಿಸಲು ಬಹಳ ಸತಾಯಿಸುತ್ತಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಾಗ, ಕೋಪಗೊಂಡ ಶಾಸಕರು ಸಣ್ಣಪುಟ್ಟ ಸಮಸ್ಯೆಗಳ ದೂರುಗಳು ನನ್ನವರೆಗೂ ಬರಲು ಬಿಡಬಾರದು. ಸ್ಥಳೀಯ ಮಟ್ಟದಲ್ಲಿಯೇ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಬೇಕು ಎಂದು ಪಿಡಿಒ ಮಹೇಶ್‍ಗೆ ಅಶ್ವಿನ್‍ಕುಮಾರ್ ಸೂಚಿಸಿದರು.
ಪವಿತ್ರಾಂಭ, ಎಂಎಲ್ ಹುಂಡಿ ಪ್ರಭುಸ್ವಾಮಿ, ನಾಗರಾಜು, ರತ್ನಮ್ಮ, ಜಿ.ವೀರಣ್ಣ, ಬೂದಹಳ್ಳಿ ಸಿದ್ದರಾಜು, ರಾಜಮ್ಮ, ರೂಪಾ, ಕೃಷ್ಣಮೂರ್ತಿ, ಎಚ್.ಪಿ.ಮಂಜುಳಾ, ಮುಖಂಡರಾದ ಶಂಭುದೇವನಪುರ ಎಂ.ರಮೇಶ್, ಸೋಮನಾಥಪುರ ಸುರೇಶ್, ಜಯಪಾಲ್ ಭರಣಿ, ಮಾವಿನಹಳ್ಳಿ ರಾಜೇಶ್, ದೀಪುದರ್ಶನ್ ಹಾಗೂ ಇನ್ನಿತರರು ಹಾಜರಿದ್ದರು.
.

Translate »