ಕೊಡಗಿನಲ್ಲಿ ಸಾಧಾರಣ ಮಳೆ
ಕೊಡಗು

ಕೊಡಗಿನಲ್ಲಿ ಸಾಧಾರಣ ಮಳೆ

October 22, 2020

ಮಡಿಕೇರಿ, ಅ.21- ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯ ಮೇಲಾ ಗಿದ್ದು, ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮದೆನಾಡು, ಮಕ್ಕಂದೂರು, ಹಟ್ಟಿಹೊಳೆ ಗಾಳಿಬೀಡು ಮತ್ತಿತ್ತರ ಕಡೆಗಳು ಸೇರಿದಂತೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲೂ ತುಂತುರು ಮಳೆ ಯಾದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಮನೆ ಮಾಡಿತ್ತಲ್ಲದೇ, ಕೆಲವೆಡೆ ಮಂಜು ಮುಸಿಕಿದ ಹವಾ ಮಾನ ಕಂಡು ಬಂದಿತ್ತು. ಮಧ್ಯಾಹ್ನದ ಬಳಿಕ ವಿವಿಧ ಕಡೆಗಳಲ್ಲಿ ಸಾಧಾ ರಣದಿಂದ ತುಂತುರು ಮಳೆಯಾಗಿದೆ.

Translate »