ಕೊಡವರಿಗೆ ಚಂಗ್ರಾಂದಿ ಭಾಷಣ ಸ್ಪರ್ಧೆ
ಕೊಡಗು

ಕೊಡವರಿಗೆ ಚಂಗ್ರಾಂದಿ ಭಾಷಣ ಸ್ಪರ್ಧೆ

October 22, 2020

ಗೋಣಿಕೊಪ್ಪ, ಅ.21- ಕೊಡವ ಕೂಟಾಳಿಯ ಸಂಘಟನೆ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಕೊಡವ ಟ್ಯಾಲೆಂಟ್ ಶೋ ಹೆಸರಿನಲ್ಲಿ ‘ಕೊಡವ ರಿಗಾಗಿ ಚಂಗ್ರಾಂದಿ’ ಎಂಬ ಭಾಷಣ ಸ್ಪರ್ಧೆ ಆನ್‍ಲೈನ್ ಮೂಲಕ ನಡೆಯಿತು.

ಹಿರಿಯರ ವಿಭಾಗದಲ್ಲಿ ಉಳುವಂಗಡ ಕಾವೇರಿ ಉದಯ ಪ್ರಥಮ, ಕಬ್ಬಚ್ಚೀರ ರಶ್ಮಿ ದ್ವಿತೀಯ, ಮಕ್ಕಳ ವಿಭಾಗದಲ್ಲಿ ಚೊಟ್ಟಂಗಡ ತಾನೀಶ್ ತಿಮ್ಮಯ್ಯ ಪ್ರಥಮ, ಕಳ್ಳಿಚಂಡ ತನ್ವಿ ಉತ್ತಪ್ಪ ದ್ವಿತೀಯ ಸ್ಥಾನ ಪಡೆದರು. ದಾನಿ ತೀತಿರ ಊರ್ಮಿಳಾ ಸೋಮಯ್ಯ ಬಹುಮಾನ ನೀಡಿದರು. ತೀರ್ಪುಗಾರರಾಗಿ ಬೊಳ್ಳಜೀರ ಅಯ್ಯಪ್ಪ, ಮಲ್ಲೇಂಗಡ ಸುಧಾ ಮುತ್ತಣ್ಣ, ಚೋಕಿರ ಅನಿತಾ ದೇವಯ್ಯ, ಅಂಜಪರವಂಡ ರಂಜು ಮುತ್ತಪ್ಪ ಕಾರ್ಯನಿರ್ವಹಿಸಿದರು.

ಸಂಘಟನೆ ಪ್ರಮುಖರಾದ ಮೀದೇರಿರ ಟಾಯ್ಸಿ ದೇಚಮ್ಮ, ಮೀದೇರಿರ ಪೂವಣ್ಣ, ಚಿಮ್ಮಚಿರ ಪವಿತ ರಜನ್, ಚೆಟ್ಟೋಳಿರ ಶರತ್ ಸೋಮಣ್ಣ ಕಾರ್ಯಕ್ರಮ ನಡೆಸಿದರು.

 

 

Translate »