ಮೈತ್ರಿ ಧರ್ಮ ಪಾಲಿಸದೇ ವಚನ ಭ್ರಷ್ಟವಾದ ಜೆಡಿಎಸ್
ಮೈಸೂರು

ಮೈತ್ರಿ ಧರ್ಮ ಪಾಲಿಸದೇ ವಚನ ಭ್ರಷ್ಟವಾದ ಜೆಡಿಎಸ್

August 27, 2021

ಮೈಸೂರು,ಆ.೨೬(ಪಿಎಂ)-ಕಾAಗ್ರೆಸ್ ಹಿಡಿದಿರುವ ಹಾಲಿ ಉಪ ಮೇಯರ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ನಿಮಗೇ ಬಿಟ್ಟು ಕೊಡುತ್ತೇವೆ ಎಂದರೂ ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡು ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಮೇಯರ್ ಸ್ಥಾನ ಅಲಂಕರಿಸಲು ಅವಕಾಶ ಕಲ್ಪಿಸಿದ್ದಾರೆ. ಆ ಮೂಲಕ ಮೈತ್ರಿ ಒಪ್ಪಂದ ಪಾಲಿಸದೇ ಜೆಡಿಎಸ್ ವಚನ ಭ್ರಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂ ಡರು ವಾಗ್ದಾಳಿ ನಡೆಸಿದರು.

ಮೈಸೂರು ಕಾಂಗ್ರೆಸ್ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಮತ್ತು ಪಾಲಿಕೆ ಸದಸ್ಯ ಅಯೂಬ್ ಖಾನ್, ನಾವು ಹಾಲಿ ಉಪ ಮೇಯರ್ ಸ್ಥಾನವನ್ನು ರಾಜೀನಾಮೆ ನೀಡುವ ಮೂಲಕ ಅವರಿಗೇ ಬಿಟ್ಟು ಕೊಡಲು ಸಿದ್ಧ ವಿದ್ದೆವು. ಆದರೂ ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ವಚನ ಭ್ರಷ್ಟವಾಗಿದೆ. ಇವರು ಕೋಮುವಾದಿಗಳ ಜೊತೆಗೆ ಕೈಜೋಡಿಸಿ, ಜಾತ್ಯಾತೀತ ಎಂದು ಹೇಳಿಕೊಂಡು ಜನಕ್ಕೆ ಮೋಸ ಮಾಡು ತ್ತಿದ್ದಾರೆ. ಮೇಯರ್ ಚುನಾವಣೆ ಸಂಬAಧ ಅನೇಕ ಮಾಧ್ಯಮಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜಗಳದಿಂದ ಬಿಜೆಪಿಗೆ ಮೇಯರ್ ಸ್ಥಾನ ಒಲಿಯಿತು ಎಂದು ಸುದ್ದಿಯಾಗು ತ್ತಿದೆ. ಆದರೆ ಅದು ತಪ್ಪು. ಬಿಜೆಪಿ ಹಾಗೂ ಜೆಡಿಎಸ್‌ನ ಒಳ ಒಪ್ಪಂದದAತೆ ಎಲ್ಲವೂ ನಡೆದಿದೆ ಎಂದು ಕಿಡಿಕಾರಿದರು.

ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿ ಕಾರದಿಂದ ದೂರ ಇಡಬೇಕೆಂಬ ಉದ್ದೇಶ ದಿಂದ ಎರಡೂವರೆ ವರ್ಷಗಳ ಹಿಂದೆ ನಮ್ಮ ವರಿಷ್ಠರು ಜೆಡಿಎಸ್ ಜೊತೆಗೆ ಮೈತ್ರಿಯ ಒಪ್ಪಂದ ಮಾಡಿಕೊಂಡರು. ಅದರ ಪ್ರಕಾರ ೩ನೇ ಅವಧಿಗೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕಿತ್ತು. ಆದರೆ ಅದರಂತೆ ನಡೆಯದೇ ಹಠಕ್ಕೆ ಬಿದ್ದು ಮೇಯರ್ ಸ್ಥಾನ ಪಡೆದುಕೊಂಡರು. ಆದರೆ ಕಾರಣಾಂತರದಿAದ ಉಪಚುನಾವಣೆ ಬಂದಾಗ ನಮಗೆ ಮೇಯರ್ ಸ್ಥಾನ ಬಿಡಬೇಕಿತ್ತು. ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಕೊಡು ವುದಾಗಿಯೂ ಶಾಸಕ ಸಾ.ರಾ.ಮಹೇಶ್ ಹೇಳಿದ್ದರು. ಆದರೆ ಮಾತಿಗೆ ತಪ್ಪಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರುಕ್ಮಿಣಿ ಮಾದೇಗೌಡ ಅವರು ಮೇಯರ್ ಆದ ದಿನವೇ ಅವರ ಪಾಲಿಕೆ ಸದಸ್ಯತ್ವ ಸಂಬAಧ ಕೋರ್ಟ್ನಲ್ಲಿ ವಿಚಾರಣೆ ನಡೆ ಯುತ್ತಿದ್ದು, ಸದಸ್ಯತ್ವ ರದ್ದಾದರೆ ನೀವೇ ಮೇಯರ್ ಸ್ಥಾನ ತೆಗೆದುಕೊಳ್ಳಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಖುದ್ದು ನಮ್ಮ ಶಾಸಕರಾದ ತನ್ವೀರ್‌ಸೇಠ್ ಅವ ರಲ್ಲಿ ಹೇಳಿದ್ದರು. ಅದರಂತೆ ಅವರು ನಡೆದುಕೊಳ್ಳಲಿಲ್ಲ ಎಂದು ದೂರಿದರು.

ಉಪಮೇಯರ್ ಸ್ಥಾನವನ್ನು ರಾಜೀ ನಾಮೆ ಮೂಲಕ ಜೆಡಿಎಸ್‌ಗೆ ಬಿಟ್ಟುಕೊಡು ವುದಾಗಿ ತನ್ವೀರ್‌ಸೇಠ್ ಅವರೇ ಭರವಸೆ ನೀಡಿದ್ದರು. ಆದರೂ ಕೇಳದೇ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಆಡಳಿತಕ್ಕೆ ಬರಲು ಕಾರಣವಾಗಿದ್ದ ಜೆಡಿಎಸ್, ಇದೀಗ ಮೈಸೂರಿನಲ್ಲಿ ಬಿಜೆಪಿ ಮೊದಲ ಬಾರಿಗೆ ಮೇಯರ್ ಸ್ಥಾನ ಅಲಂಕರಿಸಲು ಕಾರಣವಾಗಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್ ಮಾತನಾಡಿ, ಮೈಸೂರು ಪಾಲಿಕೆ ಮೇಯರ್ ಚುನಾ ವಣೆ ಹಿನ್ನೆಲೆಯಲ್ಲಿ ಈಗಲಾದರೂ ಜೆಡಿಎಸ್ ಪಕ್ಷದ ದ್ವಿಪಕ್ಷೀಯ ನಿಲುವು, ಒಳ ಅಜೆಂಡಾ ವನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಇವರು ಪಕ್ಷದ ಶೀರ್ಷಿಕೆಯಲ್ಲಿ `ಜಾತ್ಯಾತೀತ’ ಪದ ಕೈಬಿಡಬೇಕು. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಮಾತ್ರವಲ್ಲ, ಕೋಮು ವಾದಿ ಪಕ್ಷ. ಮೈಸೂರು ಪಾಲಿಕೆ ವಿಚಾರದಲ್ಲಿ ಆಗಿದ್ದ ಒಪ್ಪಂದ ಮುರಿದು ವಚನಭ್ರಷ್ಟವಾಗಿದೆ. ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿ ಕೊಂಡು ನಮಗೆ ಬೆಂಬಲ ನೀಡಿಲ್ಲ. ಜೆಡಿಎಸ್ ಜೊತೆಗೆ ಕಾಂಗ್ರೆಸ್ ಸಖ್ಯ ಎನ್ನುವುದು ಇನ್ನು ಮುಗಿದ ಅಧ್ಯಾಯ. ಬಿಜೆಪಿಗಿಂತ ಜೆಡಿಎಸ್ ಅಪಾಯಕಾರಿ ಎಂದರು.

Translate »