ಟಿಎಪಿಸಿಎಂಎಸ್ ರೈತಪರ ಕಾರ್ಯನಿರ್ವಹಿಸಲು ಸಲಹೆ
ಮಂಡ್ಯ

ಟಿಎಪಿಸಿಎಂಎಸ್ ರೈತಪರ ಕಾರ್ಯನಿರ್ವಹಿಸಲು ಸಲಹೆ

August 27, 2021

ಪಾಂಡವಪುರ, ಆ.೨೬- ತಾಲೂಕು ವ್ಯವಸಾಯೊತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎAಎಸ್)ವು ರೈತರ ಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಲಿ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಪಾಂಡವಪುರ ತಾಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘದ ಆಶ್ರಯದಲ್ಲಿ ಕಂದಾಯ ಇಲಾಖೆ ದಾಖ ಲಾತಿಗಳ ಶಾಖೆ (ಆರ್‌ಟಿಸಿ ಮತ್ತು ಎಂಆರ್ ಕೇಂದ್ರ) ಉದ್ಘಾಟಿಸಿ ಮಾತನಾಡಿದರು.

ರೈತರ ಕೃಷಿ ಹಾಗೂ ಕೃಷಿ ಪೂರಕ ಸಲಕರಣೆಗಳ ಮಾರಾಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿಎಪಿಸಿಎಂಎಸ್ ರೈತ ನಿಗೆ ಶಕ್ತಿ ತುಂಬುವ ಕಾರ್ಯದಲ್ಲಿ ಸಾಗಲಿ. ಪ್ರಸ್ತುತ ಆಡಳಿತ ಮಂಡಳಿ ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಆರೋಗ್ಯ ತಪಾಸಣೆಯಂತಹ ಜನಮುಖಿ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಸಂಕಷ್ಟ ಕಾಲದಲ್ಲೂ ಶಾಖೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ವಾಣ ಜ್ಯ ಸಂಕೀರ್ಣ ನಿರ್ಮಿಸಿ ಸಂಘದ ಬಲವರ್ಧನೆಗೆ ಶ್ರಮಿಸಲು ಯೋಜನೆ ರೂಪಿಸುತ್ತಿರುವುದು ಉತ್ತಮ ಬೆಳವಣ ಗೆ. ಸಂಘ ಇನ್ನಷ್ಟು ರೈತಪರ ಚಿಂತನೆಗಳೊAದಿಗೆ ಅಭಿವೃದ್ಧಿಯತ್ತ ಸಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ರಾಮಕೃಷ್ಣ, ಗುರುಸ್ವಾಮಿ, ದಯಾನಂದ್, ಶ್ರೀಕಾಂತ್, ರವಿಕುಮಾರ್, ಮಾಲತಿ, ಜಯಲಕ್ಷö್ಮಮ್ಮ, ಬೆಟ್ಟಸ್ವಾಮಿಗೌಡ, ಕಣ ವೆ ಯೋಗೇಶ್, ಪಿಎಲ್‌ಡಿ ಅಧ್ಯಕ್ಷ ಯಶವಂತ್, ಕಾರ್ಯದರ್ಶಿ ನವೀನ್ ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು ಹಾಗೂ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

 

Translate »