ದೊಡ್ಡಕೆರೆ, ಮಾರೇಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಣೆ
ಮಂಡ್ಯ

ದೊಡ್ಡಕೆರೆ, ಮಾರೇಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಣೆ

August 27, 2021

ಮಳವಳ್ಳಿ, ಆ.೨೬(ಮೋಹನ್‌ರಾಜ್)- ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆಗಳು ಪ್ರಾಕೃತಿಕವಾಗಿ ರಮ್ಯ ತಾಣವಾಗಿ ರುವುದರ ಜೊತೆಗೆ ಸಾವಿರಾರು ಎಕರೆ ರೈತರ ಕೃಷಿ ಜಮೀನಿಗೆ ನೀರು ಉಣ ಸುತ್ತಿ ರುವ ಈ ಕೆರೆಗಳು ತಾಲೂಕಿನ ಉಸಿರಾಗಿವೆ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ಮೊದಲು ಪಟ್ಟಣದ ದೊಡ್ಡಕೆರೆಗೆ ನಂತರ ಹೊರವಲಯದ ಮಾರೇಹಳ್ಳಿ ಕೆರೆಗೆ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರ ಮಾತನಾ ಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಜೀವನಾಡಿಯಾಗಿರುವ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ಸತತ ನಾಲ್ಕು ವರ್ಷಗಳಿಂದಲೂ ಭರ್ತಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪ್ರಕೃತಿಯ ಸೌಂದರ್ಯದ ಜತೆಗೆ ೩೨೭ ಎಕರೆ ವಿಸ್ತೀರ್ಣದ ಈ ಬೃಹತ್ ದೊಡ್ಡ ಕೆರೆ ೬೨೨ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಈ ವ್ಯಾಪ್ತಿಯ ರೈತರು ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಮೀನು ಗಾರಿಕೆಯನ್ನು ಸಹ ನಡೆಸಲಾಗುತ್ತಿದೆ. ಅಲ್ಲದೇ ಕೆರೆ ತುಂಬಿರುವುದರಿAದ ಅಂತರ್ಜಲ ವೃದ್ಧಿಗೆ ಸಹಾಯವಾಗಲಿದೆ. ಮಾರೇಹಳ್ಳಿ ಕೆರೆಯು ೬೨೦ ಎಕರೆ ವಿಸ್ತೀರ್ಣ ಹೊಂದಿದ್ದು, ಮೂರು ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ವನ್ನು ಹೊಂದಿದೆ. ಹೀಗೆ ತುಂಬಿರುವ ಕೆರೆಗಳನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ ವರ್ಷ ಕೆರೆಗಳು ತುಂಬುವ ಮೂಲಕ ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗು ವಂತೆ ಆಗಲಿ ಎಂದು ಆಶಿಸಿದರು.

ಇದೇ ವೇಳೆ ಪುರಸಭೆ ಸದಸ್ಯ ಬಸವ ರಾಜು ಹಾಗೂ ಇತರರು ನಾಲೆಗಳಲ್ಲಿ ಸಾಕಷ್ಟು ಹೂಳು ತುಂಬಿಕೊAಡು, ಗಿಡ ಗಂಟಿಗಳು ಬೆಳೆದು ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬಹುತೇಕ ಸವಡೆ ಗಳು ನಾಲೆಗಳ ಮೇಲೆ ಬಂದು ನಾಲೆ ಯನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗು ವುದಿಲ್ಲ. ಈ ಬಗ್ಗೆ ಪ್ರಶ್ನಿಸುವ ರೈತರಿಗೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಶಾಸಕರಿಗೆ ದೂರಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ವೇಳೆಯಲ್ಲಿ ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್, ಮಾಜಿ ಅಧ್ಯಕ್ಷರಾದ ಎಂ.ಎಚ್.ಕೆAಪಯ್ಯ, ಎನ್.ನಂಜುAಡಯ್ಯ, ಎಂ.ಎ.ಚಿಕ್ಕರಾಜು, ಸದಸ್ಯರಾದ ಎಂ.ಟಿ.ಪ್ರಶಾAತ್, ಸಿದ್ದರಾಜು, ನೂರುಲ್ಲಾ, ಕುಮಾರ್, ಬಸವರಾಜು, ಮುಖಂಡ ರಾದ ನಾರಾಯಣ, ನಾಗರಾಜು, ಶ್ರೀಧರ್, ಸಿದ್ದಾಚಾರಿ, ಕಂಬರಾಜು, ಅಂಕನಾಥ್ ಸೇರಿದಂತೆ ಹಲವರು ಇದ್ದರು.

Translate »