ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಸೂಚನೆ
ಮಂಡ್ಯ

ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಸೂಚನೆ

August 27, 2021

ಮಂಡ್ಯ, ಆ.೨೬(ಮೋಹನ್‌ರಾಜ್)- ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಗಳು ಸಮನ್ವಯತೆ ಸಾಧಿಸಿ ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಮುಂದಾಗಬೇಕು ಎಂದು ಡಿಸಿ ಎಸ್.ಅಶ್ವಥಿ ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಕೋವಿಡ್ ಲಸಿಕಾಕರಣ ಸಂಬAಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸಲು ನಾಳೆ ಜಿಲ್ಲೆಗೆ ೫೪,೭೦೦ ಕೋವಿಡ್ ಲಸಿಕೆ ಬರಲಿದೆ. ಅದರಲ್ಲಿ ಮಂಡ್ಯ ನಗರಕ್ಕೆ ೭,೦೦೦, ಮಂಡ್ಯ ಗ್ರಾಮೀಣ ಪ್ರದೇಶಕ್ಕೆ ೭,೭೦೦, ಮದ್ದೂರು ೮,೦೦೦, ಮಳವಳ್ಳಿ ೮,೦೦೦, ಪಾಂಡವಪುರ ೭,೦೦೦, ಶ್ರೀರಂಗಪಟ್ಟಣ ೫,೦೦೦, ಕೆ.ಆರ್.ಪೇಟೆ ೬,೦೦೦, ನಾಗಮಂಗಲ ತಾಲೂಕಿಗೆ ೬,೦೦೦ ಡೋಸ್‌ಗಳನ್ನು ವಿತರಿಸ ಲಾಗುತ್ತಿದ್ದು, ಸಂಪೂರ್ಣ ಲಸಿಕಾಕರಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.

ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ, ಕ್ಷೇತ್ರ ಶಿಕ್ಷಣ ಅಧಿಕಾರಿ, ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಹಾಗೂ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಲಸಿಕಾಕರಣದ ಕಡೆ ಗಮನ ಹರಿಸಬೇಕು, ಕೋವಿಡ್ ಮೂರನೇ ಅಲೆ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸ ಬೇಕು, ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಲಸಿಕಾಕರಣ ವರದಿಯಾಗಿರುವ ತಾಲೂಕು ಗಳಲ್ಲಿ ಅಧಿಕಾರಿಗಳು ಕೋವಿಡ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವಲ್ಲಿ ನೆರವಾಗಬೇಕು ಎಂದು ಮನವಿ ಮಾಡಿದರು.

ಕೋವಿಡ್ ಲಸಿಕೆ ನೀಡುವುದು ಆರೋಗ್ಯ ಇಲಾಖೆಯ ಕರ್ತವ್ಯವಾಗಿದ್ದು, ಉಳಿದ ಇಲಾಖೆ ಅಧಿಕಾರಿಗಳು ಸಹ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಶೀಘ್ರ ಗತಿಯಲ್ಲಿ ಪೂರ್ಣಪ್ರಮಾಣದ ವ್ಯಾಕ್ಸಿನೇ ಷನ್ ನೀಡಿ ಕೋವಿಡ್ ಮೂರನೇ ಅಲೆ ನಿಯಂತ್ರಿಸುವಲ್ಲಿ ಸಹಕರಿಸಿ ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಚಿತ ವಾಗಿ ಸಾರ್ವಜನಿಕರಿಗೆ ಲಸಿಕಾಕರಣ ಹಾಗೂ ಲಸಿಕಾ ಕೇಂದ್ರದ ಮಾಹಿತಿ ನೀಡಿ, ಜನರು ಸಂಪೂರ್ಣವಾಗಿ ಲಸಿಕೆ ಪಡೆಯುವಂತೆ ಸೂಚಿಸಬೇಕು. ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಶೇಕಡ ನೂರ ರಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ಯನ್ನು ಪಡೆಯುವಲ್ಲಿ ಅಧಿಕಾರಿಗಳು ಕಾರ್ಯೋ ನ್ಮುಖರಾಗಬೇಕು ಎಂದು ತಿಳಿಸಿದರು.

ಹಳ್ಳಿಯ ಜನರಿಗೆ ಕೋವಿಡ್ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಸರಿಯಾದ ಮಾಹಿತಿ ಯಿಲ್ಲ. ಆದ್ದರಿಂದ ಕೋವಿಡ್ ಕುರಿತು ಸರಿಯಾದ ಮಾಹಿತಿಯನ್ನು ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯ ಶಿಕ್ಷಕರುಗಳ ಸಹಕಾರದಿಂದ ತಂಡಗಳನ್ನು ರಚಿಸಿಕೊಂಡು ಹಳ್ಳಿಯ ಜನರಿಗೆ ಕೋವಿಡ್ ಲಸಿಕೆ ನೀಡುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ವತಿಯಿಂದ ಬಿಎಲ್‌ಒ ಮೂಲಕ ವೋಟರ್ ಲಿಸ್ಟ್ ಪಡೆದುಕೊಂಡು, ಈಗಾಗಲೇ ಪ್ರಥಮ ಮತ್ತು ದ್ವಿತೀಯ ಲಸಿಕೆ ಪಡೆದವರನ್ನು ಹೊರತುಪಡಿಸಿ ಉಳಿದ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗಳಿಗೆ ಕೂಡಲೇ ಲಸಿಕೆ ನೀಡಿ. ಲಸಿಕಾ ಕೇಂದ್ರ ಗಳಲ್ಲಿ ಕುಡಿಯುವ ನೀರು, ಲಘು ಉಪಾಹಾರ, ವೃದ್ಧರು, ಇತರೆ ಓಡಾಡಲು ಅಸಹಾಯಕ ರಾದ ವ್ಯಕ್ತಿಗಳು ಲಸಿಕಾ ಕೇಂದ್ರಕ್ಕೆ ತೆರಳಲು ಆಟೋ ಅಥವಾ ಇತರೆ ಪರ್ಯಾಯ ವಾಹನಗಳ ಸೌಲಭ್ಯ ಒದಗಿಸಿ, ಕೋವಿಡ್ ನಿಯಮಗಳು ಉಲ್ಲಂಘನೆಯಾಗದAತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಕೋವಿಡ್ ತಪಾಸಣೆ ಮಾಡಿಸಿ, ಕಡ್ಡಾಯವಾಗಿ ನೆಗೆಟಿವ್ ವರದಿಯನ್ನು ನೀಡಿ, ಕೋವಿಡ್ ಲಸಿಕೆಯನ್ನು ಪಡೆದ ನಂತ ರವೇ ಬೋಧನೆ ಮಾಡಬೇಕು. ಲಸಿಕೆ ಪಡೆಯದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಶಾಲಾ ಮಕ್ಕಳ ಪೋಷಕರು ಕಡ್ಡಾಯ ವಾಗಿ ಲಸಿಕೆ ಪಡೆದಿರಬೇಕು. ಒಂದು ವೇಳೆ ಲಸಿಕೆ ಪಡೆಯದಿದ್ದರೆ ಅವರ ಮಕ್ಕಳು ಶಾಲೆಗೆ ಬರಲು ಅವಕಾಶವಿಲ್ಲ ಎಂದು ಸೂಚಿಸಿದರು.
ಕಳೆದ ಬಾರಿ ಕೋವಿಡ್ ಲಸಿಕಾಕರಣ ವನ್ನು ತುಂಬಾ ಉತ್ತಮವಾಗಿ ನಡೆಸ ಲಾಗಿದೆ. ಈ ಬಾರಿಯೂ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ನಿಗಾವಹಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಪಂ ಸಿಇಓ ದಿವ್ಯಪ್ರಭು, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಧನಂಜಯ್, ಮಂಡ್ಯ ತಾಲೂಕಿನ ಉಪವಿಭಾಗಾಧಿ ಕಾರಿ ಐಶ್ವರ್ಯ, ವಾರ್ತಾಧಿಕಾರಿ ಟಿ.ಕೆ. ಹರೀಶ್, ತಾಲೂಕಿನ ತಹಶೀಲ್ದಾರರು ಗಳು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಇತರೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »