ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೋಟರಿಯಿಂದ ಕಂಪ್ಯೂಟರ್ ಕೊಡುಗೆ
ಕೊಡಗು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೋಟರಿಯಿಂದ ಕಂಪ್ಯೂಟರ್ ಕೊಡುಗೆ

August 27, 2021

ವಿರಾಜಪೇಟೆ, ಆ.೨೬- ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೋಣ ಕೊಪ್ಪಲು ರೋಟರಿ ಕ್ಲಬ್‌ನಿಂದ ೨೦ ಕಂಪ್ಯೂ ಟರ್‌ಗಳನ್ನು ಕೊಡುಗೆಯಾಗಿ ರೋಟರಿ ವಲಯ ೬ ರ ಉಪರಾಜ್ಯಪಾಲ ಎಚ್.ಟಿ. ಅನಿಲ್ ಅವರು ಪಟ್ಟಣದಲ್ಲಿರುವ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಕೆ. ಬೋಪಯ್ಯ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಎಚ್.ಟಿ. ಅನಿಲ್, ರೋಟರಿ ಸಂಸ್ಥೆಯು ವಿಶ್ವದಾದ್ಯಂತ ೨೫೦ ದೇಶಗಳಲ್ಲಿ ೩೫ ಸಾವಿರ ಸಂಸ್ಥೆ ಗಳನ್ನು ಹೊಂದಿದ್ದು ಶಿಕ್ಷಣ ಮತ್ತು ಆರೋಗ್ಯ ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡು ತ್ತಿದೆ. ರೋಟರಿ ಜಿಲ್ಲೆ ೩೧೮೧ ರ ಮೂಲಕ ಇದೀಗ ರಾಜ್ಯವ್ಯಾಪಿ ಅಗತ್ಯವಿರುವ ಕಾಲೇಜು ಗಳಿಗೆ ೧೨,೫೦೦ ಕಂಪ್ಯೂಟರ್‌ಗಳನ್ನು ನೀಡಲಾ ಗುತ್ತಿದ್ದು, ಅದರಲ್ಲಿ ಕೊಡಗಿನ ವಿರಾಜಪೇಟೆ, ಮಡಿಕೇರಿ, ನಾಪೋಕ್ಲು, ಕುಶಾಲನಗರ, ಸೋಮವಾರಪೇಟೆ ಕಾಲೇಜುಗಳಿಗೆ ೭೫ ಕಂಪ್ಯೂಟರ್‌ಗಳನ್ನು ವಿತರಿಸಲಾಗುತ್ತಿದೆ. ‘ಹೆಲ್ಪ್ ಎಜುಕೇಷನ್’ ಯೋಜನೆಯಡಿ ಈ ಕಂಪ್ಯೂಟರ್‌ಗಳು ವಿತರಣೆಯಾಗುತ್ತಿದೆ ಎಂದು ಮಾಹಿತಿ ನೀಡಿದರಲ್ಲದೇ, ಕಾಲೇಜು ವಿದ್ಯಾರ್ಥಿ ಗಳು ಆಧುನಿಕ ತಂತ್ರಜ್ಞಾನದ ಸದುಪ ಯೋಗ ಪಡೆಯಬೇಕೆಂದು ಕರೆ ನೀಡಿದರು.

ಗೋಣ ಕೊಪ್ಪಲು ರೋಟರಿ ಅಧ್ಯಕ್ಷೆ ತೀತ ಮಾಡ ನೀತಾ ಕಾವೇರಮ್ಮ ಮಾತನಾಡಿ, ದಾನಿಗಳ ಸಹಕಾರದಿಂದ ೨೦ ಕಂಪ್ಯೂಟರ್ ಗಳನ್ನು ಗೋಣ ಕೊಪ್ಪ ರೋಟರಿ ಮೂಲಕ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಬೇಡಿಕೆಗಳಿಗೆ ಗೋಣ ಕೊಪ್ಪ ರೋಟರಿ ತನ್ನ ಸದಸ್ಯರ ಮೂಲಕ ಸದಾ ಸ್ಪಂದಿಸುತ್ತಿದೆ ಎಂದರು. ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ, ಸರ್ಕಾರಿ ಕಾಲೇಜಿನ ಅಗತ್ಯ ವನ್ನು ಗಮನಿಸಿ ಕಂಪ್ಯೂಟರ್ ವಿತರಿಸಿದ ರೋಟರಿ ಸೇವಾ ಕಾರ್ಯ ಪ್ರಶಂಶಿಸಿದ ರಲ್ಲದೇ, ವಿರಾಜಪೇಟೆ ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳನ್ನೂ ರೋಟರಿ ಮೂಲಕ ನೀಡುವಂತೆ ಕೋರಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರ ಪಂಡ ಗೀತಾ ಬೆಳ್ಯಪ್ಪ, ದಾನಿಗಳಾದ ಮೇಚಂಡ ಬೋಸ್ ಚಂಗಪ್ಪ, ಕಾಲೇಜಿನ ಉಪನ್ಯಾಸಕ ವೇಣುಗೋಪಾಲ್ ವೇದಿಕೆಯಲ್ಲಿದ್ದರು. ಗೋಣ ಕೊಪ್ಪ ರೋಟರಿ ಕ್ಲಬ್ ಕಾರ್ಯದರ್ಶಿ ಜೆ.ಕೆ. ಸುಭಾಷಿಣ ಸ್ವಾಗತಿಸಿ ವಂದಿಸಿದರು.

Translate »