ಶಾಲಾ ಶುಲ್ಕ ಹೆಚ್ಚಿಸಲ್ಲ, ಇರುವ ಶುಲ್ಕ ಕಡಿತ ಮಾಡಲ್ಲ
ಮೈಸೂರು

ಶಾಲಾ ಶುಲ್ಕ ಹೆಚ್ಚಿಸಲ್ಲ, ಇರುವ ಶುಲ್ಕ ಕಡಿತ ಮಾಡಲ್ಲ

June 12, 2020

ಮೈಸೂರು, ಜೂ.11(ಎಂಕೆ)- ಈಗಿನ ಸಂದರ್ಭದಲ್ಲಿ ನಾವಂತೂ ಶುಲ್ಕ ಹೆಚ್ಚಳ ಮಾಡಲ್ಲ. ಆದರೆ ಇರುವ ಶುಲ್ಕ ಕಡಿಮೆ ಮಾಡುವುದೂ ಇಲ್ಲ ಎಂದು ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಸಗಿ ಶಾಲಾ ಆಡಳಿತ ಮಂಡಳಿ ಗಳ ಒಕ್ಕೂಟದ ಮೈಸೂರು ವಿಭಾಗದ (ಸಿಐಎಸ್‍ಪಿ ಎಂಎಎಂ) ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದ್ದಾರೆ.

ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ `ಸಿಐಎಸ್‍ಪಿಎಂಎಎಂ’ ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕೆಲವರು ಈ ವರ್ಷ ಶಾಲಾ ಶುಲ್ಕ ಕಡಿಮೆ ಮಾಡಿ ಎಂದು ಹೇಳುತ್ತಿ ದ್ದಾರೆ. ಆದರೆ, ಕೊರೊನಾದಿಂದ ಪೋಷಕರಿಗಷ್ಟೇ ಅಲ್ಲ, ಖಾಸಗಿ ಶಾಲೆಗಳಿಗೂ ಆರ್ಥಿಕ ದುಸ್ಥಿತಿ ಎದುರಾಗಿದೆ. ಬಹಳಷ್ಟು ಶಾಲೆಗಳು ತೊಂದರೆಗೆ ಒಳಗಾಗಿವೆ. ಅಲ್ಲದೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಈ ಬಾರಿ ಖರ್ಚು ಮತ್ತಷ್ಟು ಹೆಚ್ಚಲಿದೆ ಎಂದು ವಿವರಿಸಿದರು.

ಶುಲ್ಕ ಹೆಚ್ಚಳ ಇಲ್ಲ: ಕೊರೊನಾ ಮಹಾಮಾರಿಯಿಂದ ಎಲ್ಲರಿಗೂ ಸಾಕಷ್ಟು ತೊಂದರೆಯಾಗಿದೆ. ಪೋಷಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಖಾಸಗಿ ಶಾಲೆ ಗಳಲ್ಲಿ ಈ ವರ್ಷ ಶಾಲಾ ಶುಲ್ಕವನ್ನು ಹೆಚ್ಚಿಸುವುದಿಲ್ಲ. ಈ ಸಂಬಂಧ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಶುಲ್ಕವನ್ನು ಹೆಚ್ಚಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಆನ್‍ಲೈನ್ ಶಿಕ್ಷಣಕ್ಕೆ ವಿರೋಧ: ಎಲ್‍ಕೆಜಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡು ವುದನ್ನು `ಸಿಐಎಸ್‍ಪಿಎಂಎಎಂ’ ಸಹ ವಿರೋಧಿಸುತ್ತದೆ. ಒಂದು ವೇಳೆ ಯಾವುದಾದರೂ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡಿದರೆ ಅಂತಹ ಶಾಲೆ ವಿರುದ್ಧ ಕ್ರಮಗೊಳ್ಳಲು ಸರ್ಕಾರಕ್ಕೆ ಶಿಪಾರಸು ಮಾಡಲಾಗುವುದು ಎಂದು ಸುಧಾಕರ್ ಶೆಟ್ಟಿ ಹೇಳಿದರು.

ಆನ್‍ಲೈನ್ ಶಿಕ್ಷಣವನ್ನು ಸಣ್ಣ ಮಕ್ಕಳಿಗೆ ನೀಡು ವುದರಿಂದ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸಣ್ಣ ಮಕ್ಕಳು ನಿರಂತರವಾಗಿ ಮೊಬೈಲ್ ಮತ್ತು ಕಂಪ್ಯೂಟರ್ ಸ್ಕ್ರೀನ್ ನೋಡುವುದರಿಂದ ದೃಷ್ಟಿ ಹಾನಿಗೊಳ್ಳುವ ಅಪಾಯವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಿಐಎಸ್‍ಪಿಎಂಎಎಂ ಮೈಸೂರು ವಿಭಾ ಗದ ಕಾರ್ಯದರ್ಶಿ ರಾಧಾಕೃಷ್ಣ, ಉಪಾಧ್ಯಕ್ಷ ರವೀಂದ್ರ ಸ್ವಾಮಿ, ವೆಂಕಟೇಶ್, ಖಜಾಂಚಿ ಸ್ವರೂಪಿಣಿ, ಜಂಟಿ ಕಾರ್ಯದರ್ಶಿ ಮಂಜುನಾಥ್, ಮಂಡ್ಯ ಜಿಲ್ಲಾ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು

ಶಾಲಾ ವಾಹನಗಳಿಗೆ ಅರ್ಹತಾ ಪತ್ರ ಸಿಂಧುತ್ವದಲ್ಲಿರುವುದು ಅಗತ್ಯ
ಮೈಸೂರು, ಜೂ.12- ಮುಂಬರುವ ದ್ವಿತೀಯ ಪಿಯುಸಿ ಮತ್ತು ಎಸ್‍ಎಸ್ ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆ ದೊಯ್ಯಲು ಶಾಲಾ ವಾಹನಗಳ ಅರ್ಹತಾ ಪತ್ರ ಸಿಂಧುತ್ವದಲ್ಲಿರುವುದು ಮುಖ್ಯವಾಗಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿರುತ್ತಾರೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಹಲವಾರು ಶಾಲಾ ವಾಹನಗಳ ಅರ್ಹತಾ ಪತ್ರ ನವೀ ಕರಿಸಿಕೊಳ್ಳಲು ವಿಳಂಬವಾಗಿರುವ ಪ್ರಕರಣ ಗಳು ಇರುವ ಸಾಧ್ಯತೆ ಇದೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದೊ ಯ್ಯಲು ಶಾಲಾ ವಾಹನಗಳ ಅರ್ಹತಾ ಪತ್ರ ಸಿಂಧುತ್ವದಲ್ಲಿರುವುದು ಅಗತ್ಯವಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಂಸ್ಥೆ ಯವರು ತಮ್ಮ ಶಾಲೆಯ ವಿದ್ಯಾರ್ಥಿ ಗಳನ್ನು ಕರೆದೊಯ್ಯಲು ವ್ಯಾಪ್ತಿ ಮಿತಿಯ ಹೊರತಾಗಿ ರಾಜ್ಯದಾದ್ಯಂತ ಯಾವುದೇ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಪರವಾನಗಿ ಇಲ್ಲದೆ ಪ್ರಯಾಣಿಸಲು ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ವಿಶೇಷ ಅನುಮತಿಯನ್ನು ನೀಡಿರುತ್ತಾರೆ.

ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ಯಾವುದೇ ಅಡಚಣೆ ಯಾಗದಂತೆ ಶಾಲಾ ವಾಹನಗಳನ್ನು ಸುಸ್ಥಿತಿ ಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ಅರ್ಹತಾ ಪತ್ರ ನವೀಕರಣಕ್ಕೆ ಬಾಕಿ ಇರುವ ಶಾಲಾ ವಾಹನಗಳನ್ನು ಜೂ.15ರೊಳಗೆ ಅರ್ಹತಾ ಪತ್ರ ನವೀಕರಣ ಮಾಡಿಕೊಂಡು ವಾಹ£ Àಗಳ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿರು ವಂತೆ ನಿರ್ವಹಣೆ ಮಾಡಲು ಶಿಕ್ಷಣ ಸಂಸ್ಥೆ ಗಳಿಗೆ ಸೂಚನೆ ನೀಡುವಂತೆ ಸಾರ್ವಜನಿಕ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ ಎಂದು ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

Translate »