ಮೈಸೂರು, ಜೂ. 11- ಮೈಸೂರು, ಮಂಡ್ಯ ಮತ್ತು ಚಾಮ ರಾಜನಗರ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಎಸ್.ಸಿ.ಬಸವರಾಜು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡ ಬೇಕೆಂದು ನಾಯಕ ಸಮಾಜದ ಮುಖಂ ಡರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೆ.ಆರ್.ಪೇಟೆ ತಾಪಂ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಸ್ವಾಮಿನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಕೆ.ಸುರೇಶ್, ರಾಮೇನಹಳ್ಳಿ ತಾಪಂ ಕ್ಷೇತ್ರದ ಸದಸ್ಯೆ ಶ್ರೀಮತಿ ಸವಿತಾ ರಘು, ರವಿ ಮಳವಳ್ಳಿ ಅವರು, ಕಾಂಗ್ರೆಸ್ ಪಕ್ಷದಿಂದ ತೆರವಾಗುತ್ತಿರುವ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಎಸ್.ಸಿ. ಬಸವರಾಜು ಅವರಿಗೆ ನೀಡುವ ಮೂಲಕ ಮೂರು ಜಿಲ್ಲೆಗಳ ನಾಯಕ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
