ಮೈಸೂರು, ಜೂ.11- ಖಾಸಗಿ ಕ್ಲಬ್‍ಗಳಲ್ಲಿನ ರೆಸ್ಟೋ ರೆಂಟ್ ವಿಭಾಗ, ವಸತಿ ಸೌಕರ್ಯ ಮತ್ತು ಕ್ರೀಡಾ ಚಟುವಟಿಕೆ ಪುನಾರಂಭಿಸಲು ಲಾಕ್‍ಡೌನ್ ಮಾರ್ಗ ಸೂಚಿ ಪ್ರಕಾರವೇ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮೈಸೂರು ಸಿಟಿ ಪೆನ್ಷನರ್ಸ್ ಅಸೋಸಿ ಯೇಷನ್ (ಎಂಸಿಪಿಎ) ಮನವಿ ಮಾಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಗುರುವಾರ ಪತ್ರ ಬರೆದಿರುವ ಎಂಸಿಪಿಎ ಅಧ್ಯಕ್ಷ ಕೆ.ಸಿ.ಬಿದ್ದಪ್ಪ ಅವರು, ಹೋಟೆಲ್‍ಗಳು, ರೆಸ್ಟೋ ರೆಂಟ್‍ಗಳು ಮತ್ತು ಆತಿಥ್ಯ ಉದ್ಯಮ ಕೇಂದ್ರಗಳನ್ನು ಜೂನ್ 8ರಿಂದ ಪುನಾರಂಭಿಸಲು ಅವಕಾಶ ನೀಡಿರುವಂತೆಯೇ ಖಾಸಗಿ ಕ್ಲಬ್‍ಗಳಿಗೂ ಅವಕಾಶ ನೀಡಬೇಕು ಎಂದು ಒತ್ತಾ ಯಿಸಿದ್ದಾರೆ. ಖಾಸಗಿ ಕ್ಲಬ್‍ಗಳ ಸದಸ್ಯರು ಕ್ಲಬ್‍ಗಳಲ್ಲಿ ಊಟ-ತಿಂಡಿ, ತಂಗಲು ಸ್ಥಳಾವಕಾಶ, ಕ್ರೀಡಾ ಚಟು ವಟಿಕೆ ಸೌಲಭ್ಯಗಳಿಗಾಗಿಯೇ ಭಾರೀ ಮೊತ್ತವನ್ನು ಶುಲ್ಕವಾಗಿ ಪಾವತಿಸಿರುತ್ತಾರೆ. ಅವರಿಗೆ ಕ್ಲಬ್‍ನಲ್ಲಿ ಈ ಎಲ್ಲಾ ಸೌಲಭ್ಯಗಳನ್ನೂ ಒದಗಿಸಬೇಕಿರುತ್ತದೆ. ಅಲ್ಲದೇ, ಸದಸ್ಯರು ಕ್ಲಬ್‍ಗಳಲ್ಲಿ ಬಹಳ ಶಿಸ್ತು, ಶುಚಿತ್ವ ಕಾಪಾಡುತ್ತಾರೆ. ಹಾಗಾಗಿ ಈ ಮೂರೂ ಸೇವಾ ಚಟುವಟಿಕೆಗಳನ್ನು ಖಾಸಗಿ ಕ್ಲಬ್‍ಗಳಲ್ಲಿ ನಡೆಸಲು ಅನುಮತಿ ನೀಡಬೇಕೆಂದು ಮೈಸೂರು ಸ್ಪೋಟ್ರ್ಸ್ ಕ್ಲಬ್, ಜೆಡಬ್ಲ್ಯು ಗಾಲ್ಫ್ ಕ್ಲಬ್ ಸದಸ್ಯರೂ ಆಗಿರುವ ಬಿದ್ದಪ್ಪ ಮನವಿ ಮಾಡಿದ್ದಾರೆ.