ಪಿಯುವರೆಗೂ ಆನ್‍ಲೈನ್ ಶಿಕ್ಷಣ ಸೂಕ್ತವಲ್ಲ: ಸಿದ್ದರಾಮಯ್ಯ
ಮೈಸೂರು

ಪಿಯುವರೆಗೂ ಆನ್‍ಲೈನ್ ಶಿಕ್ಷಣ ಸೂಕ್ತವಲ್ಲ: ಸಿದ್ದರಾಮಯ್ಯ

June 12, 2020

ಮೈಸೂರು, ಜೂ.11(ಎಂಟಿವೈ)- ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆ ಯಿಂದ ಪದವಿ ಪೂರ್ವ ಶಿಕ್ಷಣ ದವರೆಗೂ ಆನ್‍ಲೈನ್ ಶಿಕ್ಷಣ ಬೇಡ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ರಾಮಕೃಷ್ಣನಗರದಲ್ಲಿನ ತಮ್ಮ ನಿವಾಸದ ಬಳಿ ಗುರುವಾರ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಎಲ್ಲೆಡೆ ಆನ್‍ಲೈನ್ ಶಿಕ್ಷಣದ ಬಗ್ಗೆ ಪರ ಮತ್ತು ವಿರೋಧ ಚರ್ಚೆ ನಡೆಯು ತ್ತಿದೆ. ವಾಸ್ತವವಾಗಿ ಆನ್‍ಲೈನ್ ಶಿಕ್ಷಣ ಮಹತ್ವ ಪಡೆಯುವುದಿಲ್ಲ. ಎಲ್‍ಕೆಜಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಿರುವ ಆನ್‍ಲೈನ್ ಶಿP್ಷÀಣವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ರದ್ದು ಮಾಡಿದೆ. ಇದನ್ನು ಸ್ವಾಗತಿಸುತ್ತೇವೆ ಎಂದರು.

ಮೊದಲಿನಿಂದಲೂ ಆನ್‍ಲೈನ್ ಶಿP್ಷÀಣ ಪದ್ಧತಿ ವಿರೋಧಿಸುತ್ತಲೇ ಬಂದಿದ್ದೇನೆ. ಮಕ್ಕಳಿಗೆ ಶಾಲೆಯ¯್ಲÉೀ ಪಾಠ ಮಾಡಬೇಕು. ತರಗತಿಯಲ್ಲಿ ಬೋಧನೆ ಮಾಡುವ ಪಾಠ ಪ್ರವಚನ ಮಕ್ಕಳಿಗೆ ಪರಿಣಾಮಕಾರಿಯಾಗಿ ಮನನವಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಯೊಂದಿಗೆ, ಗುಣಮಟ್ಟದ ಶಿಕ್ಷಣವನ್ನು ತರಗತಿಯಲ್ಲೇ ಪಾಠ ಮಾಡುವುದರಿಂದ ಲಭಿಸುತ್ತದೆ. ತಜ್ಞರು ಆನ್‍ಲೈನ್ ಶಿಕ್ಷಣ ಸರಿಯಲ್ಲ ಎಂದಿದ್ದಾರೆ ಎಂದರು.

ಪರಿಷತ್: ವಿಧಾನ ಪರಿಷತ್ ಚುನಾ ವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಾವು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಈ ಕುರಿತು ಪಕ್ಷದ ಎಲ್ಲ ನಾಯ ಕರು ಒಟ್ಟಿಗೆ ಕುಳಿತು ಸಮಾ ಲೋಚನೆ ಮಾಡಲಾಗುವುದಾಗಿ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

Translate »