ಸರಳವಲ್ಲ, ಇದು ಸಂಪೂರ್ಣ ಬಿಜೆಪಿ ದಸರಾ
ಮೈಸೂರು

ಸರಳವಲ್ಲ, ಇದು ಸಂಪೂರ್ಣ ಬಿಜೆಪಿ ದಸರಾ

October 1, 2021

ಮೈಸೂರು,ಸೆ.30(ಪಿಎಂ)- ದಸರಾ ಉದ್ಘಾಟನೆಯ ಸಂಪ್ರದಾಯ ಮುರಿಯ ಬಾರದು ಹಾಗೂ ವೈಭವವಾಗಿ ದಸರಾ ಆಚರಿಸುವ ಮೂಲಕ ಜನಸಾಮಾನ್ಯರು, ವ್ಯಾಪಾರಸ್ಥರು ಮತ್ತು ಕಲಾವಿದರನ್ನೂ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಯಚಾಮರಾಜ ಒಡೆ ಯರ್ ವೃತ್ತದಲ್ಲಿ (ಹಾರ್ಡಿಂಜ್ ವೃತ್ತ) ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಮೈಸೂರು ದಸರಾಗೆ ಐತಿಹಾಸಿಕ ಹಿನ್ನೆಲೆ ಇದ್ದು, ಇದನ್ನು ಸರಳವಾಗಿ ಆಚರಿಸುವ ಮೂಲಕ ತೀರಾ ಕೆಳಮಟ್ಟಕ್ಕೆ ತರಬಾರದು ಎಂದು ಕಿಡಿಕಾರಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಆ ಸರ್ಕಾ ರದ ದಸರಾ ಪ್ರತಿ ವರ್ಷ ಆಚರಣೆ ಆಗು ತ್ತಿದೆ. ಈ ಬಾರಿಯಂತೂ ಸಂಪೂರ್ಣ ಬಿಜೆಪಿ ದಸರಾ ಆಗಿದೆ. ಉದ್ಘಾಟನೆಯಿಂದ ಹಿಡಿದು ಪ್ರತಿ ಹಂತದಲ್ಲೂ ಬಿಜೆಪಿ ದಸರಾ ಆಗುತ್ತಿದ್ದು, ಇದು ಆಗಬಾರದು. ವಿಶ್ವ ವಿಖ್ಯಾತ ದಸರಾ ವಿಜೃಂಭಣೆಯಿಂದಲೇ ಆಗಬೇಕು. ಜಂಬೂ ಸವಾರಿ ಮೆರವಣಿಗೆಯನ್ನು ಅರಮನೆ ಒಳಕ್ಕೆ ಸೀಮಿತಗೊಳಿಸಿರುವುದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ಮೆರವಣಿಗೆ ನಡೆಸಿ, ಕೆಲವು ಗಣ್ಯ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ನೀಡುವುದು ಜನಸಾಮಾನ್ಯರ ದಸರಾ ಆಗುವುದಿಲ್ಲ. ಇದು ಜನಸಾಮಾನ್ಯರಿಗೆ ಮಾಡುತ್ತಿರುವ ಅನ್ಯಾಯ. ಈ ನಾಡಿಗೆ ಮಾಡುತ್ತಿರುವ ಮೋಸ. ಇಡೀ ವಿಶ್ವದ ಗಮನ ಸೆಳೆಯುವ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ಅರಮನೆ ಒಳಗೆ ಮುಗಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಎಸ್.ಎಂ.ಕೃಷ್ಣ ಉದ್ಘಾಟನೆಗೆ ಅಸಮಾಧಾನ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ದಸರಾ ಉದ್ಘಾ ಟನೆಗೆ ಆಯ್ಕೆ ಮಾಡಿರುವ ಸಂಬಂಧ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಎಸ್.ಎಂ.ಕೃಷ್ಣ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ವಿದೆ. ಆದರೆ ಅವರಿಂದ ದಸರಾ ಉದ್ಘಾಟನೆ ಮಾಡಿ ಸುವುದು ಈ ಹಿಂದಿನ ಸಂಪ್ರ ದಾಯವನ್ನು ಸಂಪೂರ್ಣ ಗಾಳಿಗೆ ತೂರಿ ದಂತೆ. ಜೊತೆಗೆ ಅವರು ಈಗ ಬಿಜೆಪಿಯಲ್ಲಿ ದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಉಸ್ತುವಾರಿ ಸಚಿವರ ದಸರಾ: ಸಂಪೂರ್ಣ ದಸರಾ ಮಾಡಬೇಕು. ಆದರೆ ಈಗ ಕೇವಲ ಜಿಲ್ಲಾ ಉಸ್ತುವಾರಿ ಸಚಿವರ ದಸರಾ ಆಗುತ್ತಿದೆ. ಇದು ನಿಜಕ್ಕೂ ನಾಡಿಗೆ ಅಗೌರವ ಎಂದು ಕಿಡಿಕಾರಿದರು.

ಬೆಂಬಲಿಸಿ: ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಮೈಸೂರು-ಚಾಮ ರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆ ಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಈ ಚುನಾವಣೆ ಸಮೀಪಿಸುತ್ತಿದೆ. ಅನೇಕರು ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಮಾಡುತ್ತಿದ್ದಾರೆ. ನಾನು ಗೆದ್ದರೆ ಒಂದು ಬದಲಾವಣೆ ತರು ತ್ತೇನೆ. ಹಾಗಾಗಿ ಈ ಚುನಾವಣೆಯಲ್ಲಿ ಜಾತಿ-ಹಣ ಸೇರಿದಂತೆ ಯಾವುದೇ ಆಮಿ ಷಕ್ಕೆ ಒಳಗಾಗದೇ ಸ್ಥಳೀಯ ಸಂಸ್ಥೆಗಳ ಸದಸ್ಯರು ನನ್ನನ್ನು ಬೆಂಬಲಿಸಬೇಕೆಂದು ಕೋರಿದರು. ಕನ್ನಡಪರ ಹೋರಾಟಗಾರ ತಾಯೂರು ವಿಠಲಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »