ಜಲಾಶಯಗಳ ಸ್ಥಿತಿಗತಿ ಗಮನಿಸಿ ಕೃಷಿಗೆ ನೀರು ಒದಗಿಸುವ ಸಂಬಂಧ ನಿರ್ಧಾರ
ಮೈಸೂರು

ಜಲಾಶಯಗಳ ಸ್ಥಿತಿಗತಿ ಗಮನಿಸಿ ಕೃಷಿಗೆ ನೀರು ಒದಗಿಸುವ ಸಂಬಂಧ ನಿರ್ಧಾರ

May 29, 2020

ಮೈಸೂರು, ಮೇ 28(ಆರ್‍ಕೆಬಿ)- ಕೃಷಿಗೆ ನೀರು ಹರಿಸುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯದ ಜಲಾಶಯಗಳ ಸ್ಥಿತಿಗತಿ ಗಮನಿಸಿ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಮಠಕ್ಕೆ ಗುರುವಾರ ಭೇಟಿ ನೀಡಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾವೇರಿ, ಕಬಿನಿ ಜಲಾಶಯಗಳು ಅಂತಾ ರಾಜ್ಯ ಸಂಬಂಧ ಹೊಂದಿವೆ. ಈ ಜಲಾಶಯಗಳಿಂದ ನೀರು ಹರಿ ಸುವ ಸಂಬಂಧ ಕೇಂದ್ರೀಯ ಜಲಮಂಡಳಿಯ ಅಧಿಕಾರಿಗಳ ಸಭೆ ನಡೆದಿದ್ದು, ನೀರು ಹರಿಸುವ ಸಂಬಂಧ ಚರ್ಚೆಯಾಗಿದೆ ಎಂದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿ ರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಇನ್ನೂ ಇಲಾಖಾ ವಾರು ಹಂಚಿಕೆಯಾಗಿಲ್ಲ. ಅದರಲ್ಲಿ ಜಲಸಂಪನ್ಮೂಲ ಇಲಾಖೆಗೆ ಎಷ್ಟು ಅನುದಾನ ದೊರೆಯುತ್ತದೆ ಎಂದು ಸದ್ಯದಲ್ಲೇ ತಿಳಿದು ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂತರ್ಜಲ ಮಟ್ಟ ಹೆಚ್ಚಿಸಲು ರೈತರು ತುಂತುರು ನೀರಾವರಿ ಮೂಲಕ ವ್ಯವಸಾಯ ಮಾಡುವುದು ಒಳಿತು. ಅಂತರ್ಜಲ ಮಟ್ಟ ಹೆಚ್ಚಿಸಲು ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗು ವುದು ಎಂದು ತಿಳಿಸಿದರು. ಉತ್ತರ ಭಾರತದಲ್ಲಿ ರಕ್ಕಸ ಮಿಡತೆಗಳು ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಪಡಿಸುತ್ತಿವೆ. ರಾಜ್ಯದಲ್ಲಿ ಕೃಷಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆ ಜಂಟಿ ಸಭೆ ನಡೆಸಿ ಮಿಡತೆಗಳ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ವಿವರಿಸಿದರು. ಈ ಸಂದರ್ಭ ಸಂಸದ ಪ್ರತಾಪ್‍ಸಿಂಹ ಇನ್ನಿತರರು ಉಪಸ್ಥಿತರಿದ್ದರು.

Translate »