ನಾಯಕತ್ವ ಗುಣ ಬೆಳವಣಿಗೆಗೆ ಎನ್‍ಎಸ್‍ಎಸ್ ಸಹಕಾರಿ
ಮೈಸೂರು

ನಾಯಕತ್ವ ಗುಣ ಬೆಳವಣಿಗೆಗೆ ಎನ್‍ಎಸ್‍ಎಸ್ ಸಹಕಾರಿ

December 4, 2018

ಹನಗೋಡು: ಯುವಜನರಲ್ಲಿ ನಾಯಕತ್ವ ಗುಣ ಬೆಳೆಯಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ಹನಗೋಡು ಹೋಬಳಿಯ ರಾಮೇನ ಹಳ್ಳಿಯಲ್ಲಿ ಹುಣಸೂರು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಂದ ಶ್ರಮದಾನ, ಸ್ವಚ್ಛತೆಯ ಅರಿವು, ಸ್ವಯಂ ರಕ್ತದಾನದ ಮಹತ್ವ, ಆರೋಗ್ಯದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಅನ್ಯಾಯದ ವಿರುದ್ಧ ಹೋರಾಟದ ಮನೋ ಭಾವ ಕಡಿಮೆಯಾಗುತ್ತಿರುವುದರಿಂದ ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೋರಾಟದ ಕಿಚ್ಚನ್ನು ಹೆಚ್ಚಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಡೆಗೆ ಗಮನ ಹರಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಮಾತನಾಡಿ, ಪಿಯು ವಿದ್ಯಾರ್ಥಿಗಳ ಜೀವನದ ಮುನ್ನುಡಿಯಾಗಿದ್ದು, ಎಚ್ಚರ ವಹಿಸದಿದ್ದಲ್ಲಿ ಬಾಳು ಕಹಿಯಾಗಲಿದೆ. ಶಿಬಿರಾರ್ಥಿಗಳು ಸಮಾಜಕ್ಕೆ ಆಸ್ತಿಯಾಗಬೇಕೇ ಹೊರತು ಹೊರೆಯಾಗಬಾರದು. ಈ ನಿಟ್ಟಿನಲ್ಲಿ ಚಿಂತಿಸಿ ಬದುಕು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಸಂತ ಮಂಜುನಾಥ್, ಡಾ.ವೃಷಬೇಂದ್ರಪ್ಪ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಾಮೇಗೌಡ, ರಾಮ ಚಂದ್ರನಾಯ್ಕ, ಶ್ರೀನಿವಾಸ್, ಚಂದ್ರೇಗೌಡ, ಚಿಕ್ಕರಾಮೇಗೌಡ, ಈಶ್ವರೇಗೌಡ, ಸುಜೇಂದ್ರ, ನಾಗರಾಜು, ಶಿಬಿರಾಧಿಕಾರಿ ಡಾ.ಧರಣೇಂದ್ರಪ್ಪ ಮತ್ತಿತರರಿದ್ದರು.

Translate »