ವಿಕಲಚೇತನರ ಬಗ್ಗೆ ಸಹಕಾರ, ಸಹಾನುಭೂತಿ ಇರಲಿ
ಮೈಸೂರು

ವಿಕಲಚೇತನರ ಬಗ್ಗೆ ಸಹಕಾರ, ಸಹಾನುಭೂತಿ ಇರಲಿ

December 4, 2018

ನಂಜನಗೂಡು: ವಿವಿಧ ಕಾರಣಗಳಿಂದ ವಿಕಲಚೇತನರಾಗಿರುವ ಮಕ್ಕಳಿಗೆ ಬದುಕಲು ಸಹಕರಿಸುವುದರೊಂದಿಗೆ ಅವರನ್ನು ಸಹಾನುಭೂತಿಯಿಂದ ಕಾಣ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಬಿ.ಪಿ.ದೇವಮಾನೆ ಸಲಹೆ ನೀಡಿದರು.
ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ವಿಶ್ವ ಹೆಚ್‍ಐವಿ-ಏಡ್ಸ್ ದಿನಾಚರಣೆಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುರುಗಳಾದವರು ಮಕ್ಕಳಿಗೆ ಅಕ್ಷರದ ಜೊತೆಗೆ ವಿಶಾಲವಾದ ಜ್ಞಾನ, ಇಂದಿನ ಸಮಾಜ, ಕಾನೂನುಗಳ ಬಗ್ಗೆ ತಿಳಿಸಿದಾಗ ಮಾತ್ರ ಅವರ ಸ್ಥಾನಕ್ಕೆ ಅರ್ಥ ಬರುತ್ತದೆ ಎಂದ ಅವರು, ಕಾನೂನುಗಳನ್ನು ಪ್ರತಿ ಯೊಬ್ಬರು ಗೌರವಿಸಿ ಅನುಸರಿಸುವುದ ರಿಂದ ಸುಸಂಸ್ಕøತ ಸಮಾಜದ ಜೊತೆಗೆ ನೆಮ್ಮದಿ ಬದುಕು ನಡೆಸಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಗಿರಿ ರಾಜು ಮಾತನಾಡಿದರು. ಕ್ಷೇತ್ರದ ಶಿಕ್ಷಣಾ ಧಿಕಾರಿ ಎಂ.ನಾರಾಯಣ್, ಎ.ಪಿ.ಪಿ.ಪುರು ಷೋತ್ತಮ್, ಬಿ.ಸವಿತಾ, ಸರ್ಕಾರಿ ವಕೀಲ ಎಸ್.ರಾಚಪ್ಪ, ಕಾರ್ಯದರ್ಶಿ. ಹೆಚ್.ಪಿ. ನಾಗೇಂದ್ರಪ್ಪ, ಮಾಜಿ.ಕಾರ್ಯದರ್ಶಿ ಎಂ.ಪಿ. ಶ್ರೀನಿವಾಸ್, ಸವಿತಾ ಕುಮಾರಿ, ಮಹೇಶ್, ಧರ್ಮರತ್ನಾಕರ, ರಂಗನಾಥ್, ಮಂಜು ನಾಥ್, ಡಿಹೆಚ್‍ಓ ಡಾ.ಕಲಾವತಿ, ಆಶಾ, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Translate »