ವಿಕಲಚೇತನರ ಪ್ರೀತಿ, ವಿಶ್ವಾಸದಿಂದ ಕಾಣಿ
ಮೈಸೂರು

ವಿಕಲಚೇತನರ ಪ್ರೀತಿ, ವಿಶ್ವಾಸದಿಂದ ಕಾಣಿ

December 4, 2018

ತಿ.ನರಸೀಪುರ: ಬಹುಮುಖ ಪ್ರತಿಭೆಯುಳ್ಳ ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಪ್ರೀತಿ, ವಿಶ್ವಾಸದಿಂದ ಕಾಣುವಂತೆ ಜಿಪಂ ಸದಸ್ಯ ಜಯಪಾಲ್ ಭರಣಿ ಹೇಳಿದರು.

ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ಸಮಗ್ರ ಶಿಕ್ಷಣ ಅಭಿ ಯಾನ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಪರಿಸರ ನಿರ್ಮಾಣ ಹಾಗೂ ಸೌಲಭ್ಯದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಾವು ಮಾಡದ ತಪ್ಪಿಗೆ ಅಂಗವೈಕಲ್ಯಕ್ಕೊಳಗಾಗುತ್ತವೆ. ಹಾಗೆಂದ ಮಾತ್ರಕ್ಕೆ ಅವು ಶಾಪಗ್ರಸ್ತ ಮಕ್ಕಳೆಂದು ಪೆÇೀಷಕರು ಭಾವಿಸಬಾರದು. ಪ್ರಸಕ್ತ ಸನ್ನಿ ವೇಶದಲ್ಲಿ ವಿಕಲಚೇತನ ಮಕ್ಕಳಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಭೆ ಇರುತ್ತದೆ. ವಿಕಲಚೇತನ ರಾದ ಬಗ್ಗೆ ಮರುಕ ಪಡದೆ ಪೆÇೀಷಕರು ತಮ್ಮ ಪ್ರೀತಿ ಧಾರೆಯೆರೆಯುವ ಮೂಲಕ ಅವರ ಏಳಿಗೆಯಲ್ಲಿ ಸಂತಸಪಡುವಂತಾಗ ಬೇಕು ಎಂದು ಕಿವಿಮಾತು ಹೇಳಿದರಲ್ಲದೆ, ಸರ್ಕಾರ ವಿಕಲಚೇತನರಿಗಾಗಿಯೇ ಅನೇಕ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದು, ಪೆÇೀಷಕರು ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ ಸವಲತ್ತು ಪಡೆಯುವ ಮೂಲಕ ವಿಶೇಷಚೇತನ ರನ್ನು ಮುಖ್ಯವಾಹಿನಿಗೆ ತರಲು ಮುಂದಾಗ ಬೇಕೆಂದು ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜು ಮಾತನಾಡಿ, ತಾಲೂಕಿನಲ್ಲಿ ವಿವಿಧ ಅಂಗವೈಕಲ್ಯಕ್ಕೊಳಗಾದ 3,625 ಮಂದಿ ವಿಶೇಷಚೇತನರನ್ನು ಗುರುತಿಸ ಲಾಗಿದ್ದು, ಇಲಾಖಾ ವತಿಯಿಂದ 3, 215 ಮಂದಿಗೆ ಗುರುತಿನ ಚೀಟಿ ವಿತರಿಸ ಲಾಗಿದೆ. ವೀಲ್‍ಚೇರ್, ದ್ವಿಚಕ್ರ ವಾಹನ, ವಾಕರ್ ಮತ್ತಿತರೆ ಸಲಕರಣೆಗಳನ್ನು ನೀಡ ಲಾಗಿದೆ. ಪುರಸಭೆಯಿಂದ 120 ಮಂದಿ ಫಲಾನುಭವಿಗಳಿಗೆ ಪೆÇೀಷಣಾಭತ್ಯೆ, 7 ಮಂದಿಗೆ ತ್ರಿಚಕ್ರವಾಹನ, 5 ಮಂದಿಗೆ ಮನೆ ಹಾಗೂ ಶೌಚಾಲಯ ಕಟ್ಟಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾಪಂ ಸದಸ್ಯರಾದ ಕೆ.ಎಸ್.ಗಣೇಶ್, ಸಾಜಿದ್ ಅಹ್ಮದ್, ರಮೇಶ್, ರತ್ನರಾಜು, ರಾಮಲಿಂಗಯ್ಯ, ಪುರಸಭೆ ಸದಸ್ಯರಾದ ರೂಪಾ ಪರಮೇಶ್, ತೇಜಸ್ವಿನಿ, ಸಿಸ್ಟಂ ಸಿದ್ದು, ತಹಶೀಲ್ದಾರ್ ಪರಮೇಶ್, ತಾಪಂ ಇಓ ಡಾ.ನಂಜೇಶ್, ಸಮಾಜ ಕಲ್ಯಾಣ ಇಲಾಖೆಯ ದಿವಾಕರ್, ಬಿಆರ್‍ಸಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವ ಶಂಕರ ಮೂರ್ತಿ, ಸಿಆರ್‍ಪಿ ಬಸವರಾಜು, ಸಂಪತ್ ದೊರೆರಾಜ್, ನಾಗೇಶ್, ಪುಟ್ಟ ಸ್ವಾಮಿ, ಪುರಸಭೆ ಅಧಿಕಾರಿ ಕೆಂಪರಾಜು, ಮಹದೇವು, ಬನ್ನೂರು ಪುರಸಭೆ ಇಓ ಹೇಮಂತ್, ಕೇಶವ್ ಮತ್ತಿತರಿದ್ದರು.

Translate »