ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ  ಸಲಹೆಯಂತೆ ಕುಸಿದ ಚಾಮುಂಡಿಬೆಟ್ಟ ರಸ್ತೆ ದುರಸ್ತಿ
ಮೈಸೂರು

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ಕುಸಿದ ಚಾಮುಂಡಿಬೆಟ್ಟ ರಸ್ತೆ ದುರಸ್ತಿ

November 3, 2021

ಮೈಸೂರು,ನ.2(ಆರ್‍ಕೆ)-ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ ವಾಗಿರುವ ಸ್ಥಳವನ್ನು ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ದುರಸ್ತಿ ಮಾಡಿ, ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅ.20ರಂದು ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆ ನಡುವೆ ದಸರಾ ಸ್ವಾಗತ ವಿದ್ಯುದ್ದೀಪಾಲಂಕಾರ ಬಳಿ ರಸ್ತೆಯ ಒಂದು ಬದಿ ಕುಸಿದಿತ್ತು. ಸಂಭವಿಸಬಹುದಾದ ಅಪಾಯ ತಪ್ಪಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಆ ರಸ್ತೆ ಸಂಚಾರ ಬಂದ್ ಮಾಡಿ ಸುರಕ್ಷತಾ ಕ್ರಮ ವಹಿಸಿ ಭೂ ಕುಸಿತವಾಗಿರು ವುದನ್ನು ಸರಿಪಡಿಸಲು ತಯಾರಿ ನಡೆಸುತ್ತಿದ್ದರು.
ಸೋಮವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ಅಧಿಕಾರಿಗಳೊಂ ದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಭೂಕುಸಿತವಾಗಿರುವ ಸ್ಥಳ ಪರಿ ಶೀಲಿಸಿದರು. ಅ.20ರಂದು ಬಿದ್ದ ಮಳೆಯಿಂದ ನಂದಿಗೆ ಹೋಗುವ ರಸ್ತೆಯ ಬಲಭಾಗ ಸುಮಾರು 30 ಅಡಿ ಉದ್ದದಷ್ಟು ಕುಸಿದಿತ್ತು. ತದ ನಂತರ ನಿರಂತರವಾಗಿ ಮಳೆ ಬಿದ್ದ ಕಾರಣ ನೀರು ಹರಿದು ಅದೇ ಭಾಗದಲ್ಲಿ ಇದೀಗ ಮತ್ತಷ್ಟು ಕುಸಿದಿರುವುದು ಪರಿಶೀಲನೆ ವೇಳೆ ಕಂಡು ಬಂದಿತು. ಸುಮಾರು 70 ಅಡಿಯಷ್ಟು ಭೂಮಿ ಕುಸಿ ದಿದ್ದು, ಇದನ್ನು ಹಾಗೆಯೇ ಬಿಟ್ಟರೆ ಇನ್ನೂ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುವ ಕಾರಣ ತಕ್ಷಣವೇ ಪರಿಹಾರೋಪಾಯ ಕಾಮಗಾರಿ ಆರಂಭಿಸಬೇಕು ಎಂದು ಸಚಿವರು ಚಾಮುಂಡಿ ಬೆಟ್ಟದ ಎಲ್ಲಾ ರಸ್ತೆಗಳಲ್ಲಿ ಪರಿಶೀಲನೆ ನಡೆಸಿ ಎಲ್ಲೆಲ್ಲಿ ಕುಸಿಯುವ ಸಾಧ್ಯತೆ ಇದೆ ಎಂಬುದನ್ನು ಗುರುತಿಸಿ ಒಂದೇ ಬಾರಿ ಅವುಗಳೆ ಲ್ಲವನ್ನೂ ಸರಿಪಡಿಸಲು ಯೋಜನೆ ರೂಪಿಸಿ ಎಂದರು.

ಕೈಗೊಳ್ಳಬೇಕಾದ ಕಾಮಗಾರಿಗೆ ಅಂದಾಜು ವೆಚ್ಚದೊಂದಿಗೆ ಸಮಗ್ರ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಲೋಕೋಪ ಯೋಗಿ ಇಲಾಖೆ ಸಚಿವರೊಂದಿಗೆ ಸಿಎಂ ಜೊತೆ ಚರ್ಚಿಸಿ ಬೇಕಾಗಿ ರುವ ಅನುದಾನ ಕೊಡಿಸುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಂತ್ರಜ್ಞಾನ ಬಳಸಿ ಒಂದೇ ಬಾರಿಗೆ ಶಾಶ್ವತ ಕಾಮಗಾರಿ ಮಾಡಿ, ಇಡೀ ಚಾಮುಂಡಿಬೆಟ್ಟದ ಎಲ್ಲಾ ರಸ್ತೆಗಳಲ್ಲೂ ಸಹ ಮುಂದೆ ಎಷ್ಟೇ ಪ್ರಮಾಣದ ಮಳೆ ಬಿದ್ದರೂ ಸಹ ಸಣ್ಣ ಅಪಾಯವೂ ಸಂಭವಿಸ ದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಯೋಜನೆಗೆ ಅನುಮೋ ದನೆ ಪಡೆದು ಅನುದಾನ ಕೊಡಿಸುವ ಸಂಬಂಧ ಇಲ್ಲಿನ ಶಾಸಕರ ನಿಯೋಗವನ್ನು ಸಿಎಂ ಬಳಿಗೆ ಕರೆದೊಯ್ದು ಚರ್ಚಿಸುತ್ತೇನೆ. ಅಷ್ಟರಲ್ಲಿ ವರದಿ ಸಿದ್ಧಪಡಿಸಿ ಎಂದೂ ಸಚಿವರು ತಿಳಿಸಿದರು.

ಮಳೆ ಸುರಿಯುತ್ತಿರುವುದರಿಂದ ಭೂಮಿ ಮತ್ತಷ್ಟು ತೇವಾಂಶ ವಾಗಿರುವ ಕಾರಣ, ಜೆಸಿಬಿ ಹಾಗೂ ಇತರ ಉಪಕರಣಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಮಳೆ ಸಂಪೂರ್ಣವಾಗಿ ನಿಂತು ಭೂಮಿ ಗಟ್ಟಿಯಾದ ನಂತರವಷ್ಟೇ ಕಾಮಗಾರಿ ಆರಂಭಿಸಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಹರ್ಷ ತಿಳಿಸಿದರು. ಈಗಾಗಲೇ ಒಂದು ಬಾರಿ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ತಂಡ ಭೇಟಿ ನೀಡಿ ಸ್ಥಳ ಪರಿ ಶೀಲಿಸಿದೆ. ದೀಪಾವಳಿ ಹಬ್ಬದ ನಂತರ ಮತ್ತೊಮ್ಮೆ ಬಂದು ಕಾಮ ಗಾರಿಗೆ ಯಾವ ತಂತ್ರಜ್ಞಾನ ಅಳವಡಿಸಬೇಕೆಂಬುದರ ಬಗ್ಗೆ ಸಲಹೆ ನೀಡುತ್ತಾರೆ. ನಂತರ ಡಿಪಿಆರ್ ಸಿದ್ಧಪಡಿಸುತ್ತೇವೆ ಎಂದರ

Translate »