ಮೈಸೂರು, ನ.2(ಎಂಟಿವೈ)- ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪ್ರಸ್ತಕ ಸಾಲಿನ ಜಿಲ್ಲಾಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ಜಿಲ್ಲಾ ಪಂಚಾಯಿತಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವÀ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಸಚಿವರು ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮ ಯುವ ಜನರಲ್ಲಿರುವ ಪ್ರತಿಭೆಯ ಅನಾ ವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಶುಭ ಕೋರಿದರು.
ಕ್ರೀಡಾಂಗಣಕ್ಕೆ ಸಾರ್ವಜನಿಕರಿಗೂ ಅವ ಕಾಶ ನೀಡಿ: ಶಾಸಕ ತನ್ವೀರ್ ಸೇಠ್ ಮಾತ ನಾಡಿ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವ್ಯಾಯಾಮ, ಕ್ರೀಡಾ ಚಟುವಟಿಕೆ ನಡೆ ಸಲು ಸಾರ್ವಜನಿಕರಿಗೂ ಅವಕಾಶ ನೀಡ ಬೇಕು. ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿ ಅಭಿ ವೃದ್ಧಿಪಡಿಸಿದ ಬಳಿಕ ಈ ಕ್ರೀಡಾಂಗಣವು ಸಾರ್ವಜನಿಕರ ಬಳಕೆಗೆ ದೊರಕುತ್ತಿಲ್ಲ ಎಂದರು.
ಇದರಿಂದ ಕ್ರೀಡಾ ತರಬೇತಿ, ವ್ಯಾಯಾಮ ಮಾಡಲು ಸಾರ್ವಜನಿಕರಿಗೆ ತೊಂದರೆ ಯಾಗಿದ್ದು, ಇದು ಸರಿಯಲ್ಲ. ಶಾಲಾ ಶಿಕ್ಷಣ ದಲ್ಲಿ 250 ಮಕ್ಕಳಿಗೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಎಂಬ ನಿಯಮವಿದೆ. ಇದನ್ನು 100 ಮಕ್ಕಳಿಗೆ ಇಳಿಸುವ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಿ ಶಾಲಾ ಹಂತ ದಿಂದಲೇ ಕ್ರೀಡಾ ಚಟುವಟಿಕೆಗಳನ್ನು ಕ್ರಿಯಾ ಶೀಲಗೊಳಿಸಬೇಕು. ಯುವ ಜನರಲ್ಲಿ ದೇಶಭಕ್ತಿ, ಶಿಸ್ತು ತರಲು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ವಿಜೇತರ ಪಟ್ಟಿ: ಶಾಸ್ತ್ರೀಯ ನೃತ್ಯದಲ್ಲಿ (ಭರತನಾಟ್ಯ) ಮೌಲ್ಯ ವೆಂಕಟೇಶ್-1, ಎಂ.ಎಚ್.ದಿವ್ಯಶ್ರೀ-2, ಎಂ.ಕೆ.ತೇಜ ಸ್ವಿನಿ-3, ಶಾಸ್ತ್ರೀಯ ಒಡಿಸ್ಸಿ ನೃತ್ಯದಲ್ಲಿ ಆರಾ ಧನ ರಾಹುಲ್-1, ಕುಚುಪುಡಿ ನೃತ್ಯದಲ್ಲಿ ಇಂದುಶ್ರೀ-1, ತಬಲ ವಾದ್ಯದಲ್ಲಿ ಸುಜ ಯಿಂದ್ರ ರಾವ್-1, ಆರ್.ಪುನೀತ್ ಕುಮಾರ್ -2, ಅಕ್ಷಯ ಎ.ಪಾಟೀಲ್-3. ಮೃದಂಗ ವಾದ್ಯದಲ್ಲಿ ವಿ.ವರ್ಚಸ್-1, ಹಾರ್ಮೋ ನಿಯಂನಲ್ಲಿ (ಲೈಟ್) ಸೋಮೇಶ್-1, ಮಹ ದೇವಪ್ರಸಾದ್-2ನೇ ಸ್ಥಾನ ಪಡೆದರು.
ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ಎಸ್.ಅಕ್ಷತಾ-1, ಸಿ.ಅರುಣ ತ್ಯಾಗರಾಜು-2, ಮನೋಜ್ಞ ಎಸ್.ಜಮದಗ್ನಿ-3, ಹಿಂದೂ ಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಶ್ರುತಿ ಆರ್. ಜೋಯ್ಸಾ-1, ಆಶುಭಾಷಣ ಸ್ಪರ್ಧೆ ದಲ್ಲಿ (ಹಿಂದಿ ಅಥವಾ ಇಂಗ್ಲಿಷ್)ತೇಜಸ್ವೀನಿ-1, ರಜಿóೀಕ್ ರಶೀದ್-2, ಕೆ. ರಘುನಂದನ್ -3, ಜಾನಪದ ಗೀತೆಯಲ್ಲಿ ಐಶ್ವರ್ಯ ನಾಗರಾಜ್ ಮತ್ತು ತಂಡ-1, ಆದರ್ಶ್ ಮತ್ತು ತಂಡ-2, ಚಂದ್ರು ಮತ್ತು ತಂಡ-3, ಜಾನಪದ ನೃತ್ಯದಲ್ಲಿ ಚಂದ್ರು ಮತ್ತು ತಂಡ-1, ರಕ್ಷಿತ್ ಮತ್ತು ತಂಡ-2, ಪ್ರತಾಪ್ ಮತ್ತು ತಂಡ-3ನೇ ಸ್ಥಾನದೊಂ ದಿಗೆ ಬಹುಮಾನ ಪಡೆದರು. ಪ್ರಥಮ ಸ್ಥಾನ ಪಡೆದ ಸ್ಪರ್ಧಾರ್ಥಿಗಳು ಮಾತ್ರ ರಾಜ್ಯಮಟ್ಟದ ಯುವ ಜನೋತ್ಸವಕ್ಕೆ ಅರ್ಹತೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಶಾಸಕ ಎಲ್.ನಾಗೇಂದ್ರ, ನಿಗಮ -ಮಂಡಳಿಗಳ ಅಧ್ಯಕ್ಷರಾದ ಹೆಚ್.ವಿ. ರಾಜೀವ್, ಎಲ್.ಆರ್.ಮಹದೇವಸ್ವಾಮಿ, ಎನ್.ವಿ.ಫಣೀಶ್, ಎ.ಹೇಮಂತ್ ಕುಮಾರ್ ಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇ ಶಕ ಕೆ.ಸುರೇಶ್, ನೆಹರು ಯುವ ಕೇಂದ್ರದ ಉಪನಿರ್ದೇಶಕ ಎಸ್.ಸಿದ್ದರಾಮಪ್ಪ ಇನ್ನಿ ತರರು ಪಾಲ್ಗೊಂಡಿದ್ದರು