ಯುವ ರೆಡ್ ಕ್ರಾಸ್ ಘಟಕದ  ಕಾರ್ಯ ಚಟುವಟಿಕೆ ಉದ್ಘಾಟನೆ
ಮೈಸೂರು

ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆ ಉದ್ಘಾಟನೆ

February 1, 2022

ಮೈಸೂರು, ಜ. 31- ಮೈಸೂರಿನ ಎಂ.ಎಂ.ಕೆ.ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ 2021-22ನೇ ಶೈಕ್ಷಣಿಕ ವರ್ಷದ ಕಾರ್ಯ ಚಟು ವಟಿಕೆಗಳ ಉದ್ಘಾಟನೆಯನ್ನು ಬೆಂಗಳೂರು ಯುವ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಸಂಯೋಜಕ ದಿಲೀಪ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಯುವಜನರು ಶಿಕ್ಷಣದ ಜೊತೆಗೆ ಸಾಮುದಾಯಿಕ ಸೇವೆ ಯನ್ನು ನೀಡಿದಾಗ ಅವರ ಬದುಕು ಮಾದರಿಯಾಗುತ್ತದೆ. ಸಮಾಜದ ಋಣದಾರರಾದ ನಾವು ಸ್ವಲ್ಪವಾ ದರೂ ಇತರರ ಬದುಕಿಗೆ ಸಹಾಯ ಸಹಕಾರ ನೀಡಲು ಯುವ ರೆಡ್ ಕ್ರಾಸ್ ಘಟಕಗಳು ಮಾದರಿಯಾಗಿವೆ ಎಂದರು.

ವೈ.ಆರ್.ಸಿ.ಘಟಕಗಳು ಯುವಜನರಲ್ಲಿ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಪ್ರೇರಿತ ಸೇವೆ, ಏಕತೆ ಮತ್ತು ಸಾರ್ವತ್ರಿಕತೆ ಈ ಏಳು ಮೂಲಭೂತ ಅಂಶಗಳೊಂದಿಗೆ ಕಾರ್ಯ ನಿರ್ವಹಿಸಲು ತರಬೇತಿ ನೀಡಿ ಪ್ರಾಕೃತಿಕ ವಿಕೋಪಗಳು, ಇತರೆ ತುರ್ತು ಪರಿಸ್ಥಿತಿಗಳು ಬಂದಾಗ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಸನ್ನದ್ಧವಾಗಿರುತ್ತದೆ. ಈ ಘಟಕಗಳ ಮೂಲಕ ರಕ್ತದಾನ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಮಾನವೀಯ ಸಂಸ್ಕಾರಗಳನ್ನು ಬೆಳೆಸಬಹುದು ಎಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಪೆÇ್ರ.ಎನ್.ಭಾರತಿ ವಹಿಸಿ ದ್ದರು. ಕಾಲೇಜಿನ ಐ.ಕ್ಯೂ.ಎ.ಸಿ.ಘಟಕದ ಸಂಚಾಲಕ ಪೆÇ್ರ.ಕೆ.ಎಸ್. ಸುಕೃತ ಮತ್ತು ವೈ.ಆರ್.ಸಿ.ಘಟಕದ ಕಾರ್ಯಕ್ರಮಾಧಿಕಾರಿ ಶಿವಬೀರಪ್ಪ ಉಪಸ್ಥಿತರಿದ್ದರು.

Translate »