ಸೇವಾ ಕಾರ್ಯಗಳ ಮೂಲಕ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ  ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡರ ಜನ್ಮದಿನ ಆಚರಣೆ
ಮೈಸೂರು

ಸೇವಾ ಕಾರ್ಯಗಳ ಮೂಲಕ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡರ ಜನ್ಮದಿನ ಆಚರಣೆ

February 1, 2022

ಮೈಸೂರು,ಜ.31(ಪಿಎಂ)- ಸಹಕಾರ ಕ್ಷೇತ್ರದ ಧುರೀಣರಾದ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡರ ಭರ ವಸೆಯ ಸುಪುತ್ರ ಜಿ.ಡಿ.ಹರೀಶ್‍ಗೌಡ ತಂದೆ ಯವರಂತೆಯೇ ಸಹಕಾರ ವಲಯದಲ್ಲಿ ದಶಕದ ಅವಧಿಯಲ್ಲಿ ಭರವಸೆಯ ಸಾಧನೆಯ ಹಾದಿ ಕ್ರಮಿಸಿದ್ದಾರೆ.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಈ ಯುವ ಉತ್ಸಾಹಿಗೆ ಇಂದು 35ನೇ ವರ್ಷದ ಜನ್ಮದಿನದ ಹರ್ಷ. ಆದರೆ ಜನ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕಾರಣ ಅವರು ಸಂಭ್ರಮದ ಹುಟ್ಟು ಹಬ್ಬದ ಆಚರಣೆಯಿಂದ ದೂರ ಉಳಿದು, ತಮ್ಮ ಸಾಮಾಜಿಕ ಮೌಲ್ಯ ಮೆರೆದಿದ್ದಾರೆ.

`ಅಭಿಮಾನಿಗಳು ಹಾಗೂ ಕಾರ್ಯ ಕರ್ತರು ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವು ಇರುವಲ್ಲಿಂದಲೇ ಶುಭ ಹಾರೈಸಿ’ ಎಂಬ ಅವರ ಸಂದೇಶದಂತೆ ಕೆಲವೆಡೆ ಅರ್ಥ ಪೂರ್ಣವಾಗಿ ಸೋಮವಾರ ಹರೀಶ್ ಗೌಡರ ಜನ್ಮದಿನ ಆಚರಿಸಲಾಯಿತು.

ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಅವರ ಅಭಿಮಾನಿಗಳು, ಹಿತೈಷಿ ಗಳು ಸರಳವಾಗಿಯಾದರೂ ಸೇವಾ ಕಾರ್ಯ ಕ್ರಮಗಳ ಮೂಲಕ ಸಾರ್ಥಕ ಆಚರಣೆ ಯಿಂದ ಹರೀಶ್‍ಗೌಡರು ಮತ್ತು ಅವರ ಕುಟುಂಬ ವರ್ಗಕ್ಕೆ ಆಯಸ್ಸು, ಆರೋಗ್ಯ ಮತ್ತು ಅಧಿಕಾರ ಲಭಿಸಲೆಂದು ಹಾರೈಸಿದರು.

ವಿಶೇಷ ಮಕ್ಕಳಿಗೆ ಭೋಜನ ವ್ಯವಸ್ಥೆ: ಮೈಸೂರಿನ ತಿಲಕ್‍ನಗರದ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಅಂಧ ಮಕ್ಕಳ ಸರ್ಕಾರಿ ಶಾಲೆ ಆವರಣದಲ್ಲಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ಥಕ ರೀತಿಯಲ್ಲಿ ಹರೀಶ್‍ಗೌಡ ಜನ್ಮದಿನಯನ್ನು ಅವರ ಅಭಿಮಾನಿಗಳು ಆಚರಿಸಿದರು.
ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ ಕೇಕ್ ಕತ್ತರಿಸಿ, ಮಕ್ಕಳಿಗೆ ಹಂಚಲಾಯಿತು. ಅಲ್ಲದೆ, ಹರೀಶ್‍ಗೌಡ ಅವರ ಅಭಿ ಮಾನಿಗಳು ಮಕ್ಕಳಿಗೆ ಊಟ ಬಡಿಸಿ, ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

ಎಂಸಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಎಪಿಎಂಸಿ ಸದಸ್ಯ ಜವರಪ್ಪ, ಮುಖಂಡರಾದ ನಾಡನಹಳ್ಳಿ ಮಧುಸೂದನ್, ಜೆಸಿಬಿ ಮಹೇಂದ್ರ, ದೇವರಾಜ್, ಮಹೇಶ್ ಜೀವನ್, ಹಳೇ ಕೆಸರೆ ಪರಮೇಶ್ ಮತ್ತಿತರರು ಹಾಜರಿದ್ದರು.

ಉಚಿತ ಕಣ್ಣಿನ ತಪಾಸಣೆ ಶಿಬಿರ: ಜಿ.ಡಿ. ಹರೀಶ್‍ಗೌಡರ ಫೌಂಡೇಶನ್, ಡಾ.ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ಹಾಗೂ ಉಷಾ ಮಿಷನ್ ಕೇರ್ ಸಂಯುಕ್ತಾಶ್ರಯದಲ್ಲಿ ಜಿ.ಡಿ.ಹರೀಶ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಉದ್ಬೂರು ಗ್ರಾಮ ಪಂಚಾಯಿತಿ ಕಾರ್ಯಾ ಲಯ ಆವರಣದಲ್ಲಿ ಉಚಿತ ಕಣ್ಣಿನ ತಪಾ ಸಣೆ ಶಿಬಿರ ಹಾಗೂ ನೇತ್ರದಾನ ನೋಂದಣಿ ಕಾರ್ಯಕ್ರಮ ನಡೆಯಿತು.

20ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡರು. ಅಲ್ಲದೆ, 200ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆಯ ಪ್ರಯೋಜನ ಪಡೆದರು. ಗ್ರಾಪಂ ಅಧ್ಯಕ್ಷ ಹೆಚ್.ಕೃಷ್ಣಪ್ಪ, ಉಪಾಧ್ಯಕ್ಷ ಕುಮಾರ್, ಜಿಪಂ ಮಾಜಿ ಸದಸ್ಯ ಮಾದೇವಸ್ವಾಮಿ, ಗ್ರಾಪಂ ಸದಸ್ಯ ಮತ್ತು ಜಿ.ಡಿ.ಹರೀಶ್ ಗೌಡರ ಫೌಂಡೇಶನ್ ಅಧ್ಯಕ್ಷ ಪ್ರಜ್ವಲ್ ರಾಮಣ್ಣ ದಾಸನಕೊಪ್ಪಲು ಇತರರು ಪಾಲ್ಗೊಂಡಿದ್ದರು.

Translate »