ತಂಬಾಕು ಬೆಳೆಗಾರರ ಪರವಾನಗಿ ನವೀಕರಣ  ನಿಯಮ ಸಡಿಲಿಕೆಗೆ ಸಂಸದ ಪ್ರತಾಪ್‍ಸಿಂಹ ಮನವಿ
ಮೈಸೂರು

ತಂಬಾಕು ಬೆಳೆಗಾರರ ಪರವಾನಗಿ ನವೀಕರಣ ನಿಯಮ ಸಡಿಲಿಕೆಗೆ ಸಂಸದ ಪ್ರತಾಪ್‍ಸಿಂಹ ಮನವಿ

February 1, 2022

ಮೈಸೂರು, ಜ.31(ಎಸ್‍ಬಿಡಿ)- ತಂಬಾಕು ಬೆಳೆಗಾರರ ಪರ ವಾನಗಿ (ಲೈಸೆನ್ಸ್) ನವೀಕರಣದ ನಿಯಮ ಸಡಿಲಗೊಳಿಸು ವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ತಂಬಾಕು ಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ತಂಬಾಕು ಮಂಡಳಿ ಅಧ್ಯಕ್ಷ ರಘುನಾಥ ಬಾಬು ಅವರನ್ನು ಸೋಮವಾರ ನವದೆಹಲಿಯಲ್ಲಿ ಭೇಟಿ ಮಾಡಿದ ಪ್ರತಾಪ್ ಸಿಂಹ, ಲೈಸೆನ್ಸ್ ವರ್ಗಾವಣೆ, ನವೀಕರಣ, ಬೆಳೆ ಪ್ರಮಾಣದ ಕೋಟಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ತಂಬಾಕು ಬೆಳೆಗಾರರು ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಬೇಕು. ಕಾರಣಾಂತರದಿಂದ ವಿಳಂಬವಾದರೂ ದಂಡ ಪಾವತಿಯೊಂದಿಗೆ 4 ವರ್ಷದೊಳಗೆ ನವೀಕರಣ ಮಾಡಿಸಲೇ ಬೇಕು. ಆದರೆ ಕೌಟುಂಬಿಕ ತಕರಾರು ಇನ್ನಿತರ ಕಾರಣಗಳಿಂದ ಮೈಸೂರು ಭಾಗದ ಸಾವಿರಾರು ಬೆಳೆಗಾರರು ಹಲವು ವರ್ಷ ಗಳಿಂದ ಲೈಸೆನ್ಸ್ ನವೀಕರಣ ಮಾಡಿಸದೆ, ಅವು ಮೌಲ್ಯ ಕಳೆದುಕೊಂಡಿವೆ. ಅಂತಹ ಲೈಸೆನ್ಸ್‍ಗಳನ್ನು ವಿಶೇಷ ಪ್ರಕ ರಣಗಳಾಗಿ ಪರಿಗಣಿಸಿ, ಈ ಬಾರಿ ನವೀಕರಣ ಮಾಡಿಕೊಡಲು ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಹೆಚ್.ಡಿ.ಕೋಟೆ ಹಾಗೂ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಭಾಗದ 500ಕ್ಕೂ ಹೆಚ್ಚು ಬೆಳೆಗಾರರ ಲೈಸೆನ್ಸ್ ವರ್ಗಾ ವಣೆ ಬಾಕಿ ಇದೆ. ಬೆಳೆಗಾರರು ಕಾರಣಾಂತರಗಳಿಂದ ತಂಬಾಕು ಬೆಳೆಯಲು ಸಾಧ್ಯವಾಗದಿದ್ದಾಗ ಅವರ ಹೆಸರಿನಲ್ಲಿರುವ ಲೈಸೆನ್ಸ್ ಅನ್ನು ಬೇರೆ ಬೆಳಗಾರರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆದರೆ ಕೊಂಡುಕೊಂಡವರ ಹೆಸರಿಗೆ ಲೈಸೆನ್ಸ್ ವರ್ಗಾವಣೆ ಯಾಗಿಲ್ಲ. ಇದರಿಂದ ಲೈಸೆನ್ಸ್ ಬಳಕೆಯಾಗದ ಪರಿಸ್ಥಿತಿ ನಿರ್ಮಾಣ ವಾಗಿ, ಮಾರಾಟ ಮಾಡಿದವರು ಹಾಗೂ ಕೊಂಡು ಕೊಂಡವ ರಿಗೂ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ತಕ್ಷಣ ಲೈಸೆನ್ಸ್ ವರ್ಗಾವಣೆಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕೋಟಾ ಹೆಚ್ಚಳ ಸಾಧ್ಯತೆ: ಈ ಬಾರಿ 78 ಮಿಲಿಯನ್ ಕೆಜಿ ತಂಬಾಕು ಸೊಪ್ಪು ಖರೀದಿಸಲಾಗಿದೆ. ಮುಂದಿನ ಬೆಳೆಗೆ ಕೋಟಾ ಹೆಚ್ಚಿಸಿ 100 ಮಿಲಿಯನ್ ಕೆಜಿಗೂ ಅಧಿಕ ಗುರಿ ನೀಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ನಿಯಮಾನುಸಾರ ನವೀಕರಣ ಮಾಡಿಸದ ಎಲ್ಲಾ ಲೈಸೆನ್ಸ್‍ಗಳನ್ನೂ ನವೀಕರಣಕ್ಕೆ ಪರಿಗಣಿ ಸುವುದರ ಜೊತೆಗೆ ಲೈಸೆನ್ಸ್ ವರ್ಗಾವಣೆ ಪ್ರಕರಣಗಳನ್ನೂ ಇತ್ಯರ್ಥಪಡಿಸಿದರೆ ಹೆಚ್ಚು ಬೆಳೆ ನಿರೀಕ್ಷಿಸಬಹುದು ಎಂದು ತಂಬಾಕು ಮಂಡಳಿ ಅಧ್ಯಕ್ಷರಿಗೆ ಮನದಟ್ಟು ಮಾಡಿಸಿದ ಸಂಸದ ಪ್ರತಾಪ್ ಸಿಂಹ, ಇತ್ತೀಚೆಗೆ ಅನಧಿಕೃತ ಬೆಳೆಗಾರರ ಬೆಳೆಗೆ ವಿಧಿಸು ತ್ತಿದ್ದ ಕಮಿಷನ್ ಪ್ರಮಾಣವನ್ನು 10 ರೂ.ಗಳಿಂದ 5 ರೂ.ಗೆ ಇಳಿಕೆ (ಪ್ರತಿ ಕೆಜಿಗೆ) ಮಾಡಿದ್ದಕ್ಕೆ ಇದೇ ವೇಳೆ ಧನ್ಯವಾದ ತಿಳಿಸಿದರು.

Translate »