ಸರ್ಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್,  ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ!
ಮೈಸೂರು

ಸರ್ಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ!

February 1, 2022

ಮೈಸೂರು,ಜ.31(ಎಂಟಿವೈ)-ಮೈಸೂರಿನಲ್ಲಿ ನಡೆಯುತ್ತಿರುವ ಕೊರೊನಾ ಪರೀಕ್ಷೆಯ ನೈಜತೆಯ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಲಾರಂಭಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನ ಹೆಬ್ಬಾಳು ಬಡಾವಣೆಯ ಹಿರಿಯ ನಾಗರಿಕರೊಬ್ಬರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಒಂದರಲ್ಲಿ ಪಾಸಿಟಿವ್, ಮತ್ತೊಂದ ರಲ್ಲಿ ನೆಗೆಟಿವ್ ವರದಿ ಬಂದಿದ್ದು ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆಸುವ ಪರೀಕ್ಷಾ ವರದಿ ಸಂಶಯ ಸೃಷ್ಟಿಸಿದೆ.
ಹೆಬ್ಬಾಳು ಬಡಾವಣೆಯ ನಿವಾಸಿ ಲೀಲಾ ನಾಗ ರಾಜು (65) ಎಂಬುವವರ ಕೋವಿಡ್ ಪರೀಕ್ಷಾ ವರದಿ ಭಾರೀ ಗೊಂದಲ ಸೃಷ್ಟಿಸಿದೆ ಮಾತ್ರವಲ್ಲ ವರದಿ ನೈಜತೆ ಬಗ್ಗೆ ಅನುಮಾನ ಮೂಡಿಸಿದೆ. ಈ ಕುರಿತು ಲೀಲಾ ನಾಗರಾಜು ಅವರ ಸೊಸೆ ಪ್ರಭಾ ನಂದೀಶ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜ.30ರಂದು ಬೆಳಗ್ಗೆ 9.50ರಲ್ಲಿ ಪಿಕೆಟಿಬಿಯಲ್ಲಿ ಪರೀಕ್ಷೆ ಮಾಡಿಸ ಲಾಯಿತು. ಅಂದು ರಾತ್ರಿ 8.06ಕ್ಕೆ ಪಾಸಿಟಿವ್ ಎಂದು ಸಂದೇಶ ಬಂದಿದೆ. ಇದರಿಂದ ಅನುಮಾನ ಬಂತು. ಅದೇ ರಾತ್ರಿ 9.10ಕ್ಕೆ ಅಪೋಲೋ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಯಿತು. ಮರುದಿನ (ಜ.31) ಬೆಳಗ್ಗೆ 10ಕ್ಕೆ ನೆಗೆಟಿವ್ ವರದಿ ಬಂದಿದೆ. 10 ಗಂಟೆಯೊಳಗೆ ನಡೆಸಿದ 2 ಪರೀಕ್ಷೆಯಲ್ಲಿ ಪಾಸಿಟಿವ್, ನೆಗೆಟಿವ್ ವರದಿ ಬಂದಿದೆ. ಇದರಿಂದ ಸರ್ಕಾರಿ ಆಸ್ಪತ್ರೆಯ ವರದಿ ಮೇಲೆ ಅನುಮಾನ ಮೂಡುತ್ತಿದೆ. ಸೋಂಕಿ ಲ್ಲದಿದ್ದರೂ ಪಾಸಿಟಿವ್ ಎಂದರೆ ಏನರ್ಥ. ಸುಳ್ಳು ವರದಿಯಿಂದಾಗಿ ನಾವು ಮಾನಸಿಕ ಯಾತನೆ ಅನುಭವಿಸಿದ್ದೇವೆ. ಇಂತಹ ಪ್ರಮಾದವಾದರೆ ಅದರಿಂದ ಆಗುವ ಪರಿಣಾಮಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

Translate »